Advertisement

ಒಳ ಮೀಸಲಾತಿ ಜಾರಿಗೆ ದಸಂಸ ಆಗ್ರಹ

11:05 AM Sep 09, 2020 | Suhan S |

ದೇವನಹಳ್ಳಿ: ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸುಪ್ರಿಂ ಕೋರ್ಟ್‌ ನ್ಯಾಯಪೀಠ ನೀಡಿರುವುದರಿಂದ ಎ.ಜೆ.ಸದಾಶಿವ ಆಯೋಗದ ಒಳ ಮೀಸಲಾತಿ ವರದಿಯನ್ನು ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಿ, ಒಳಮೀಸಲಾತಿ ಕಾಯ್ದೆ ಜಾರಿಗೊಳಿಸಲು ಜಿಲ್ಲಾ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಆಗ್ರಹಿಸಿದೆ.

Advertisement

ತಾಲೂಕಿನ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿಪ್ರತಿಭಟನೆ ನಡೆಸಿ ಮಾತನಾಡಿದ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್‌, ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪ ಸೆ.20ರಂದು ನಡೆಸಲಿರುವ ರಾಜ್ಯ ವಿಧಾನ ಮಂಡಲ ಅಧಿವೇಶನದಲ್ಲಿ ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ ಮಂಡಿಸುವುದ ಮೂಲಕ ಪರಿಶಿಷ್ಟ ಜಾತಿಗಳಿಗಿರುವ ಮೀಸಲಾತಿಯಲ್ಲಿ ಒಳ ಮೀಸಲಾತಿ ಕಾಯ್ದೆ ಜಾರಿಗೆ ತರಬೇಕು. ಸರ್ವೋಚ್ಛ ನ್ಯಾಯಾಲಯದ 5 ನ್ಯಾಯಧೀಶರ ಪೀಠ, ಆ.27ರಂದು ಐತಿಹಾಸಿಕ ತೀರ್ಪನ್ನು ನೀಡುತ್ತಾ ರಾಜ್ಯದ ಶಾಸನ ಸಭೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಒಳ ಮೀಸಲಾತಿ ವರ್ಗೀಕರಣ ಮಾಡುವ ಅಧಿಕಾರ ಇದೆ ಎಂಬುವುದು ತೀರ್ಪು ನೀಡಿದೆ. ಈ ಸುಪ್ರಿಂ ಕೋರ್ಟ್‌ ತೀರ್ಪಿನಿಂದಾಗಿ ಒಳಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರ ಕ್ಕಿದ್ದ ಅಡೆತಡೆಗಳು ಮುಕ್ತಾಯವಾಗಿದೆ ಎಂದು ಹೇಳಿದರು.

ಜಿಲ್ಲಾ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಡಿ.ಸಿ.ಅಂಬರೀಶ್‌, ಅಂಬೇಡ್ಕರ್‌ ಆಶಯದಂತೆ ಶಿಕ್ಷಣ, ಸರ್ಕಾರಿ ಉದ್ಯೋಗ, ರಾಜಕೀಯ ಕ್ಷೇತ್ರ, ಆರ್ಥಿಕ ಕ್ಷೇತ್ರಗಳಲ್ಲಿ ಹಂಚಿಕೊಂಡು, ಸಮಾ ನತೆ ಕಡೆಗೆ ಸಾಗಬೇಕು. ಎಸ್‌ಸಿ, ಎಸ್‌ಟಿ ಪಂಗಡದ ನಡುವೆ ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಮರ್ಪಕವಾಗಿ, ನ್ಯಾಯಾಯುತ ವಾಗಿ ಹಂಚಿಕೆಯಾಗಿಲ್ಲ ಎಂದು ಹೇಳಿದರು.ಮುಖಂಡ ರಾದ ಎಸ್‌.ಟಿ.  ಮುನಿರಾಜು, ಅತ್ತಿ ವಾಟ ರಾಜಪ್ಪ, ದೇವರಾಜ್‌, ಮೂರ್ತಿ, ತಾಲೂಕು ಸಂಚಾಲಕ ನರ ಸಿಂಹಯ್ಯ, ದೊಡ್ಡ ಬಳ್ಳಾಪುರ ತಾಲೂಕು ಸಂಚಾಲಕ ಶೇಖರ್‌, ಹೊಸ ಕೋಟೆ ಸಂಚಾ ಲಕ ಮೂರ್ತಿ, ಸಾವಕನಹಳ್ಳಿ ಸುರೇಶ್‌, ಮಂಜು ನಾಥ್‌, ಚಿಕ್ಕಣ್ಣ ಇದ್ದರು. ಡೀಸಿ ಪಿ. ಎನ್‌.ರವೀಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next