Advertisement

ರಾಜ್ಯದಲ್ಲಿ ಡ್ರೈರನ್‌ ಯಶಸ್ವಿ : 16 ಆರೋಗ್ಯ ಕೇಂದ್ರಗಳಲ್ಲಿ ಪ್ರಾತ್ಯಕ್ಷಿಕೆ

12:02 AM Jan 03, 2021 | Team Udayavani |

ಬೆಂಗಳೂರು: ಮೊಬೈಲ್‌ ಸಂದೇಶ ದೊಂದಿಗೆ ಸರತಿಯಲ್ಲಿ ನಿಂತವರು, ಅದನ್ನು ಖಚಿತ ಪಡಿಸಿಕೊಂಡು ಒಳಗೆ ಕಳುಹಿಸುತ್ತಿದ್ದ ಆರೋಗ್ಯ ಸಿಬಂದಿ, ನಿರೀಕ್ಷಣ, ಚುಚ್ಚುಮದ್ದು ಮತ್ತು ಅವಲೋಕನ ಕೊಠಡಿಗಳ ಮೂಲಕ ಹೊರಬರುತ್ತಿದ್ದಂತೆ “ಯಶಸ್ವಿಯಾಗಿ ಲಸಿಕೆ ಹಾಕಿಸಿಕೊಂಡಿದ್ದೀರಿ’ ಎಂಬ ಮೊಬೈಲ್‌ ಸಂದೇಶ…

Advertisement

-ಇದು ಕೊರೊನಾ ಲಸಿಕೆ ಡ್ರೈ ರನ್‌ (ಪ್ರಾತ್ಯಕ್ಷಿಕೆ) ನಡೆದ ಆರೋಗ್ಯ ಕೇಂದ್ರಗಳ ಬಳಿ ಕಂಡ ಚಿತ್ರಣ.
ಕೊರೊನಾ ಲಸಿಕೆ ಸಿಕ್ಕಿದ ಕೂಡಲೇ ವ್ಯವಸ್ಥಿತವಾಗಿ ವಿತರಿಸುವ ಉದ್ದೇಶದಿಂದ ಬೆಂಗಳೂರು, ಶಿವಮೊಗ್ಗ, ಕಲಬುರಗಿ, ಮೈಸೂರು ಮತ್ತು ಬೆಳಗಾವಿ ಸಹಿತ ರಾಜ್ಯದ ಐದು ಜಿಲ್ಲೆಗಳ 16 ಆರೋಗ್ಯ ಕೇಂದ್ರಗಳಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೊರೊನಾ ಲಸಿಕೆ ಡ್ರೈ ರನ್‌ ಯಶಸ್ವಿಯಾಗಿ ನಡೆಯಿತು.

ಸಂಕ್ರಾಂತಿ ವೇಳೆಗೆ ಲಸಿಕೆ?
ಇನ್ನು 2 ವಾರಗಳಲ್ಲಿ ದೇಶಾದ್ಯಂತ ಲಸಿಕೆ ವಿತರಣೆ ಪ್ರಕ್ರಿಯೆ ಆರಂಭವಾಗಬಹುದು ಎಂದು ಏಮ್ಸ್‌ ಆಸ್ಪತ್ರೆಯ ನಿರ್ದೇಶಕ ಡಾ| ರಣದೀಪ್‌ ಗುಲೇರಿಯಾ ತಿಳಿಸಿದ್ದಾರೆ.

ಕಲಿತ ಪಾಠ
ವೈದ್ಯಕೀಯ ಸಿಬಂದಿ, ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ವಿತರಣೆ ಸಂದರ್ಭವನ್ನು ಯಾವ ರೀತಿ ನಿರ್ವಹಿಸಬೇಕು, ಆರೋಗ್ಯದಲ್ಲಿ ಏರುಪೇರಾದರೆ ಏನು ಮಾಡಬೇಕು ಎಂಬ ಅನುಭವ ಸಿಕ್ಕಂತಾಯಿತು. ಅಡೆತಡೆಗಳು, ತಾಂತ್ರಿಕ ಸಮಸ್ಯೆಗಳ ಪಟ್ಟಿ ಮಾಡಲಾಯಿತು. ಇದನ್ನು ಕೇಂದ್ರಕ್ಕೆ ವರದಿ ನೀಡುವ ತಯಾರಿ ನಡೆದಿದೆ ಎಂದು ಆರೋಗ್ಯ ಇಲಾಖೆಯ ಲಸಿಕೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಜನವರಿಯಲ್ಲೇ ಲಸಿಕೆ ದೊರೆಯುವ ನಿರೀಕ್ಷೆ ಇದ್ದು, ಲಸಿಕೆ ಸಿಕ್ಕಿದ ಬಳಿಕ ವಿತರಿಸಲು ಈ ಪ್ರಾತ್ಯಕ್ಷಿಕೆ ನೆರವಾಗಲಿದೆ. ಲಸಿಕೆಯನ್ನು ಕೊರೊನಾ ಯೋಧರಿಗೆ ಮೊದಲ ಹಂತದಲ್ಲಿ ಉಚಿತವಾಗಿ ನೀಡಲಾಗುವುದು. ಲಸಿಕೆ ವಿತರಣೆಗೆ ಬೇಕಾದ ಸಿದ್ಧತೆ ಪೂರ್ಣಗೊಂಡಿದೆ.
– ಡಾ| ಕೆ. ಸುಧಾಕರ್‌, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next