ಹೊಸದಿಲ್ಲಿ: ನ್ಯೂಯಾರ್ಕ್ ಮತ್ತು ನವದೆಹಲಿ ನಡುವೆ ಅಮೇರಿಕನ್ ಏರ್ ಲೈನ್ಸ್ ಪ್ರವಾಸದಲ್ಲಿದ್ದ ಪ್ರಯಾಣಿಕರೊಬ್ಬರು ಮತ್ತೊಬ್ಬ ಪುರುಷ ಪ್ರಯಾಣಿಕನ ಮೇಲೆ ಕುಡಿದ ಅಮಲಿನಲ್ಲಿ ಮೂತ್ರ ವಿಸರ್ಜಿಸಿದ ಘಟನೆ ನಡೆದಿದೆ.
ವರದಿಗಳ ಪ್ರಕಾರ, ಹೊಸದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶನಿವಾರ ರಾತ್ರಿ 10:12ಕ್ಕೆ ಬಂದಿಳಿದ ಎಎ292 ವಿಮಾನದಲ್ಲಿ ಘಟನೆ ಸಂಭವಿಸಿದೆ.
ಆರೋಪಿಯು ಯುಎಸ್ ಯುನಿವರ್ಸಿಟಿಯ ವಿದ್ಯಾರ್ಥಿಯಾಗಿದ್ದಾನೆ. ಮದ್ಯ ಸೇವಿಸಿದ ಸ್ಥಿತಿಯಲ್ಲಿದ್ದ ಅವರು ಮಲಗಿದ್ದಾಗಲೇ ಮೂತ್ರ ವಿಸರ್ಜನೆ ಮಾಡಿದ್ದಾರೆ. ಅದು ಹೇಗೋ ಸೋರಿಕೆಯಾಗಿ ಸಹಪ್ರಯಾಣಿಕನ ಮೇಲೆ ಬಿದ್ದಿದೆ. ಅವರು ಸಿಬ್ಬಂದಿಗೆ ದೂರು ನೀಡಿದರು” ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಪ್ರವೀಣ್ ನೆಟ್ಟಾರ್ ಪ್ರಕರಣದ ಮತ್ತೋರ್ವ ಆರೋಪಿ ಅರೆಸ್ಟ್; ಎನ್ಐಎ ಬಲೆಗೆ ಬಿದ್ದ ತುಫೈಲ್
Related Articles
ವಿದ್ಯಾರ್ಥಿಯು ಕ್ಷಮೆಯಾಚಿಸಿದ ನಂತರ ಅವರು ಪೊಲೀಸರಿಗೆ ದೂರು ನೀಡುವುದು ಬೇಡ ಎಂದಿದ್ದಾರೆ. ಇದು ಆ ವಿದ್ಯಾರ್ಥಿಯ ವೃತ್ತಿಜೀವನಕ್ಕೆ ಅಪಾಯವನ್ನುಂಟು ಮಾಡುತ್ತದೆ ಎಂದು ಅವರು ಹೇಳಿದರು. ಆದರೆ, ವಿಮಾನಯಾನ ಸಂಸ್ಥೆ ಇದನ್ನು ಗಂಭೀರವಾಗಿ ಪರಿಗಣಿಸಿ ದಿಲ್ಲಿ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ)ಗೆ ವರದಿ ಮಾಡಿದೆ.
ವಿಮಾನದಲ್ಲಿದ್ದ ಘಟನೆಯ ಬಗ್ಗೆ ಸಿಬ್ಬಂದಿಗೆ ತಿಳಿದ ನಂತರ, ಅವರು ಪೈಲಟ್ ಗೆ ಮಾಹಿತಿ ನೀಡಿದರು, ಅವರು ಎಟಿಸಿಗೆ ವಿಷಯ ತಿಳಿಸಿದ್ದಾರೆ. ಸಿಐಎಸ್‌ಎಫ್ ಸಿಬ್ಬಂದಿಯು ಆರೋಪಿ ಪ್ರಯಾಣಿಕನನ್ನು ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದರು.