ಫರೀದಾಬಾದ್ : ಗುರುಗ್ರಾಮ್-ಫರಿದಾಬಾದ್ ರಸ್ತೆಯ ಅರವಲ್ಲಿಸ್‌ನ ವೈಂದಾ ರಾಕ್ ಗಣಿ ಬಳಿಯ ಬಂಡೆಯ ಮೇಲಿಂದ ಸೆಲ್ಫಿ ತೆಗೆದುಕೊಳ್ಳುವಾಗ 42 ವರ್ಷದ ವ್ಯಕ್ತಿಯೊಬ್ಬರು ಕಂದಕಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ಫರಿದಾಬಾದ್ ನ ಬಾಲಬ್ಗಢ್ ನ ಆದರ್ಶ ನಗರ ನಿವಾಸಿ ಕಮಲ್ (42) ಮೃತ ದುರ್ದೈವಿ.
ಫರೀದಾಬಾದ್ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಶವ ಮಹಜರು ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ಶನಿವಾರ ಕಮಲ್ ತನ್ನ ಇಬ್ಬರು ಸ್ನೇಹಿತರಾದ ರವಿ ಮತ್ತು ಹಮೇಂದ್ರ ಅವರೊಂದಿಗೆ ಅರಾವಳಿಸ್ ಬಳಿ ಇರುವ ವೈಂದಾ ಗಣಿ ಬಳಿಯ ಬಂಡೆಯ ಮೇಲೆ ಮದ್ಯ ಸೇವಿಸಲು ಹೋಗಿದ್ದಾರೆ, ಮದ್ಯ ಸೇವಿಸಿದ ಬಳಿಕ ಕಮಲ್ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ ಈ ವೇಳೆ ಆಯಾ ತಪ್ಪಿ ಬಂಡೆಯ ಮೇಲಿಂದ ಕೆಳಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
Related Articles
ಇದನ್ನೂ ಓದಿ: ರಾಜ್ಯದ ಗಡಿ ರಕ್ಷಣೆಗೆ ನಾವು ಸಶಕ್ತರಾಗಿದ್ದೇವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ