Advertisement

ಪ್ರಧಾನಿ ಮೋದಿಯನ್ನು ಕೊಲೆ ಮಾಡುವುದಾಗಿ ದೆಹಲಿ ಪೊಲೀಸರಿಗೆ ಬೆದರಿಕೆ ಕರೆ : ಆರೋಪಿಯ ಬಂಧನ

01:00 PM Nov 26, 2020 | sudhir |

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲೆ ಮಾಡುವುದಾಗಿ ದೆಹಲಿಯ ಪೊಲೀಸ್ ಠಾಣೆಗೆ ಬೆದರಿಕೆ ಕರೆಯೊಂದು ಬಂದ ಪರಿಣಾಮ ದೆಹಲಿ ಪೊಲೀಸ್ ಠಾಣೆಯಲ್ಲಿ ಭಾರಿ ಸಂಚಲನ ಮೂಡಿಸಿತು.

Advertisement

ಗುರುವಾರ ಬೆಳಿಗ್ಗೆ ದಕ್ಷಿಣ ದೆಹಲಿಯ ಪೊಲೀಸ್ ಠಾಣೆಗೆ ಅನಾಮದೇಯ ಕರೆಯೊಂದು ಬಂದಿದ್ದು ಅದರಲ್ಲಿ ಮಾತನಾಡಿದ ವ್ಯಕ್ತಿ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಕರೆ ಮಾಡಿದ್ದಾನೆ.

ಬೆದರಿಕೆ ಕರೆ ಬಂದ ಕೂಡಲೇ ಎಚ್ಚೆತ್ತ ಪೊಲೀಸ್ ಇಲಾಖೆ ಕರೆ ಬಂದ ಮೂಲಗಳನ್ನು ಪತ್ತೆ ಹಚ್ಚಲು ಶುರುಮಾಡಿದ್ದಾರೆ ಅಷ್ಟೋತ್ತಿಗೆ ಬೆದರಿಕೆ ಕರೆ ಬಂದಿದ್ದು ದೆಹಲಿಯ ದಕ್ಷಿಣಪುರಿ ಪ್ರದೇಶದಿಂದ ಎಂಬುದು ತಿಳಿದುಬಂದಿದೆ ಕೂಡಲೇ ಅಲ್ಲಿಗೆ ಹೋರಾಟ ಪೋಲೀಸರ ತಂಡ  ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ಫ್ರೂಟ್‌ ಇರ್ಫಾನ್‌ ಕೊಲೆ ಆರೋಪಿ ಸೆರೆ : ದಯಾನಾಯಕ್‌ ನೇತೃತ್ವದ ತಂಡದಿಂದ ಕಾರ್ಯಾಚರಣೆ

ಬಂಧಿತ ವ್ಯಕ್ತಿಯನ್ನು ನಿತಿನ್ ಎಂದು ಗುರುತಿಸಲಾಗಿದ್ದು ಪೋಲೀಸರ ಹೇಳಿಕೆಯಂತೆ ವ್ಯಕ್ತಿಯನ್ನು ಬಂಧಿಸುವ ಸಂದರ್ಭ ಮದ್ಯದ ನಶೆಯಲ್ಲಿದ್ದುದು ಕಂಡು ಬಂದಿದೆ, ಮದ್ಯದ ನಶೆಯಲ್ಲಿಯೇ ಬೆದರಿಕೆ ಹಾಕಿರುವುದಾಗಿ ವ್ಯಕ್ತಿ ತಪ್ಪು ಒಪ್ಪಿಕೊಂಡಿದ್ದಾನೆ.  ತನಿಖೆಯನ್ನು ಮುಂದುವರೆಸಿದ ಪೊಲೀಸರು ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next