ನವದೆಹಲಿ: ಕುಡುಕ ಚಾಲಕನ ಅವಾಂತರಕ್ಕೆ ಆರು ವರ್ಷದ ಬಾಲಕಿಯೊಬ್ಬಳು ಜೀವ ಕಳೆದುಕೊಂಡ ಘಟನೆ ನವದೆಹಲಿಯ ನೋಯ್ಡಾ ಸೆಕ್ಟರ್ ನಲ್ಲಿ ಶನಿವಾರ ಸಂಭವಿಸಿದೆ.
ನೋಯ್ಡಾದ ಸೆಕ್ಟರ್ -45 ರ ಸದರ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಸ್ತೆ ಬದಿ ಪಾನಿಪೂರಿ ಸೇವಿಸುತ್ತಿದ್ದ ಮೂವರು ಸಹೋದರಿಯರಾದ ರಿಯಾ, ಅನು ಮತ್ತು ಅಂಕಿತಾ ಅವರಿದ್ದ ಕಡೆ ಅತಿವೇಗದಲ್ಲಿ ಬಂದ ಕಾರು ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಮೂವರು ಸಹೋದರಿಯರು ಗಂಭೀರ ಗಾಯಗೊಂಡಿದ್ದು ಅದರಲ್ಲಿ ಆರು ವರ್ಷದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪಿದ್ದಾಳೆ ಎಂದು ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ರಾಜೀವ್ ಬಲ್ಯಾನ್ ತಿಳಿಸಿದ್ದಾರೆ.
ಈ ವೇಳೆ ಬಾಲಕಿಯ ತಾಯಿಯೂ ಘಟನಾ ಸ್ಥಳದಲ್ಲಿ ಇದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Related Articles
ಕಾರಿನಲ್ಲಿ ನಾಲ್ವರು ಪ್ರಯಾಣಿಕರಿದ್ದು, ಚಾಲಕ ಕುಡಿದ ಮತ್ತಿನಲ್ಲಿದ್ದ ಎಂದು ಹೇಳಲಾಗಿದ್ದು, ಸಹೋದರಿಯರಿಗೆ ಢಿಕ್ಕಿ ಹೊಡೆದ ಬಳಿಕ ರಸ್ತೆ ಬದಿಯಲ್ಲಿದ್ದ ಇಟ್ಟಿಗೆಗಳ ರಾಶಿಗೆ ಢಿಕ್ಕಿ ಹೊಡೆದು ನಿಂತಿದೆ. ಘಟನೆಗೆ ಸಂಬಂಧಿಸಿ ಕಾರು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ನಿಷೇಧವಿದ್ದರೂ ಅನುಮಾನಕ್ಕೆ ಎಡೆ ಮಾಡಿದ ಸ್ಯಾಟಲೈಟ್ ಫೋನ್ ಬಳಕೆ!