Advertisement

‌Auto: ಚುಮ್ಮಾ…ಚುಮ್ಮಾ…ಕುಡಿದ ಮತ್ತಿನಲ್ಲಿ ರಸ್ತೆ ಮಧ್ಯೆದಲ್ಲೇ ರಿಕ್ಷಾ ಚಾಲಕರ ಡ್ಯಾನ್ಸ್!

11:49 AM May 20, 2023 | Team Udayavani |

ಮಧ್ಯಪ್ರದೇಶ: ಕುಡಿದ ಮತ್ತಿನಲ್ಲಿ ರಿಕ್ಷಾ ಚಾಲಕರು ರಸ್ತೆಯ ಮಧ್ಯೆ ಬಾಲಿವುಡ್‌ ನ “ಚುಮ್ಮಾ ಚುಮ್ಮಾ ದೇ…” ಹಾಡನ್ನು ಹಾಡುತ್ತ ಕುಣಿಯುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಘಟನೆ ಮಧ್ಯಪ್ರದೇಶದ ಜಬಲ್‌ ಪುರ್‌ ನಲ್ಲಿ ನಡೆದಿರುವುದಾಗಿ ವರದಿಯಾಗಿದೆ.

Advertisement

ಇದನ್ನೂ ಓದಿ:ಸಿದ್ದು-ಡಿಕೆಶಿ ಸಂಪುಟಕ್ಕೆ ಅಷ್ಟ ಬಲ: 8 ಮಂದಿ ಶಾಸಕರು ಇಂದು ಸಚಿವರಾಗಿ ಪ್ರಮಾಣ ವಚನ

ರಸ್ತೆ ಮಧ್ಯದಲ್ಲಿ ರಿಕ್ಷಾ ನಿಲ್ಲಿಸಿ‌ ಜೋರಾದ ಶಬ್ದದೊಂದಿಗೆ ಬಾಲಿವುಡ್‌ ನ ಚುಮ್ಮಾ ಚುಮ್ಮಾ ಹಾಡನ್ನು ಹಾಕಿ , ಮದ್ಯಪಾನ ಮಾಡುತ್ತ ಕುಣಿಯುತ್ತಿದ್ದರು.

ರಾಜು ಎಂಬ ಹೆಸರಿನ ರಿಕ್ಷಾ ಚಾಲಕ ಮೊದಲಿಗೆ ಕುಡಿದ ಮತ್ತಿನಲ್ಲಿ ಬಾಲಿವುಡ್‌ ಹಾಡನ್ನು ಹಾಕಿ ಕುಣಿಯಲು ಆರಂಭಿಸಿದ್ದು, ನಂತರ ಉಳಿದ ರಿಕ್ಷಾ ಚಾಲಕರು ಆತನಿಗೆ ಸಾಥ್‌ ನೀಡಿದ್ದರು.

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿ, ಲಾಠಿ ಏಟಿನ ರುಚಿ ತೋರಿಸಿ, ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ರಿಕ್ಷಾ ಚಾಲಕರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next