Advertisement

ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನಿಂದ 60 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ

02:45 PM Aug 21, 2022 | Team Udayavani |

ಕೊಚ್ಚಿ: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರಿಂದ ಸುಮಾರು 60 ಕೋಟಿ ರೂ. ಮೌಲ್ಯದ ಸುಮಾರು 30 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.

Advertisement

ಜಿಂಬಾಬ್ವೆಯಿಂದ ಬಂದಿದ್ದ ಪ್ರಯಾಣಿಕನ ಬಳಿ ಡ್ರಗ್ಸ್ ಮೆಥಾ ಕ್ವಿನಾಲ್ ಎಂದು ಕಂಡುಬಂದಿದೆ. ಆರೋಪಿ ಪಾಲಕ್ಕಾಡ್ ಮೂಲದವನಾಗಿದ್ದು, ಪ್ರಕರಣವನ್ನು ಮಾದಕ ದ್ರವ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಸರಕಾರಿ ಪರೀಕ್ಷಾಲಯದಲ್ಲಿ ವಶಪಡಿಸಿಕೊಳ್ಳಲಾದ ಡ್ರಗ್ಸ್ ಪರೀಕ್ಷೆ ನಡೆಸಲಾಗಿದ್ದು,ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೌಲ್ಯ 60 ಕೋಟಿ ರೂ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಶಕ್ಕೆ ಪಡೆದಿರುವ ಆರೋಪಿ ಮುರಳೀಧರನ್ ನಾಯರ್ ಎನ್ನುವವನಾಗಿದ್ದು, ಜಿಂಬಾಬ್ವೆಯಿಂದ ದೋಹಾ ಮೂಲಕ ಕೊಚ್ಚಿಗೆ ಆಗಮಿಸಿದ್ದ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next