Advertisement

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಶುಗರ್ ಪೌಡರ್ ಆಗಲಿದೆ !

11:13 AM Oct 24, 2021 | Team Udayavani |

ಮುಂಬಯಿ : ”ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಶುಗರ್ ಪೌಡರ್ ಆಗಿ ಬದಲಾಗಿದೆ” ಎಂದು ಮಹಾರಾಷ್ಟ್ರ ಸಚಿವ ಛಗನ್ ಭುಜಬಲ್ ಶನಿವಾರ ಹೇಳಿಕೆ ನೀಡಿದ್ದಾರೆ.

Advertisement

ಎನ್ ಸಿ ಪಿ ಯ ಸಮತಾ ಪರಿಷದ್ ಕಾರ್ಯಕ್ರಮದರಲ್ಲಿ ಮಾತನಾಡಿದ ಛಗನ್ ಭುಜಬಲ್, ”ಗುಜರಾತ್‌ನಲ್ಲಿ ಭಾರೀ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ, ಆದರೆ ಈ ಪ್ರಕರಣವನ್ನು ತನಿಖೆ ಮಾಡುವ ಬದಲು ಎನ್‌ಸಿಬಿ ಶಾರುಖ್ ಖಾನ್ ಅವರನ್ನು ಬೇಟೆಯಾಡುತ್ತಿದೆ” ಎಂದು ಕಿಡಿ ಕಾರಿದರು.

ಇದೆ ವೇಳೆ,” ಎಲ್ಲಿಯಾದರೂ ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಶುಗರ್ ಪೌಡರ್ ಆಗಿ ಬದಲಾಗುತ್ತದೆ” ಎಂದರು.

ಬಿಜೆಪಿ ಹಿಂದುಳಿದವರಿಗೆ ಮೀಸಲಾತಿ ನೀಡುವುದರ ವಿರೋಧಿಯಾಗಿದೆ ಎಂದು ಅವರು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next