Advertisement

ಹಿಂ.ವರ್ಗಕ್ಕೆ ಅನ್ಯಾಯವಾದರೆ ಸಹಿಸಲ್ಲ: ಮಾಜಿ ಸಿಎಂ ಸಿದ್ದು

12:20 AM Dec 25, 2022 | Team Udayavani |

ತುಮಕೂರು: ರಾಜಕೀಯ ಅಧಿಕಾರಕ್ಕಾಗಿ ಯಾವುದೇ ಕಾರಣಕ್ಕೂ ಅಂಟಿ ಕೂರುವುದಿಲ್ಲ. ಹಿಂದುಳಿದ ವರ್ಗಗಳಿಗೆ ಮೀಸಲಾತಿಯಲ್ಲಿ ಅನ್ಯಾಯವಾದರೆ ನಾನು ಯಾವ ಕಾರಣಕ್ಕೂ ಸಹಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು.

Advertisement

ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ 102 ಜಾತಿಗಳಿದ್ದು ಎಲ್ಲ ಸಮುದಾಯಕ್ಕೂ ಒಳಮೀಸಲಾತಿ ಕಲ್ಪಿಸಿದರೆ ತಮ್ಮದೇನೂ ತಕರಾರಿಲ್ಲ. ಒಳ ಮೀಸಲಾತಿ ಕೊಟ್ಟರೆ ಸಣ್ಣಪುಟ್ಟ ಸಮುದಾಯಗಳಿಗೂ ನ್ಯಾಯ ಸಿಗಲಿದೆ. ಜನಸಂಖ್ಯೆಗೆ ಅನುಗುಣವಾಗಿ ಎಲ್ಲ ಸಮುದಾಯಗಳಿಗೂ ಮೀಸಲಾತಿ ಕಲ್ಪಿಸಬೇಕು ಎಂದು ಹೇಳಿದರು.

ಮುಖ್ಯಮಂತ್ರಿ ಚಂದ್ರು ಮಾತ ನಾಡಿ, ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಮೀಸಲಾತಿ ವಿಚಾರದಲ್ಲಿ ಹಿಂದೂ ಸಾದರು ಸಮುದಾಯಕ್ಕೆ ಅನ್ಯಾಯ ಮಾಡಿದರು. ಲಿಂಗಾಯತ ಸಾದರಿಗೆ 2-ಎ ಜಾತಿ ಪ್ರಮಾಣ ಪತ್ರ ನೀಡಿ ಅನ್ಯಾಯವೆಸಗಿದರು ಎಂದು ಆರೋಪಿಸಿದರು.

ವಿಧಾನ ಸಭೆ ಮಾಜಿ ಅಧ್ಯಕ್ಷ ರಮೇಶ್‌ ಕುಮಾರ್‌ ಮಾತನಾಡಿ, ಅಂಗವಿಕಲರಿಗೆ, ಕಾಲು ತೊಂದರೆ ಇದ್ದವರಿಗೆ ಊರುಗೋಲು ಕೊಡುವುದು ಬಿಟ್ಟು, ಪೈಲ್ವಾನರಿಗೆ ಕೊಡಲು ಹೊರಟಿದ್ದಾರೆ ಎಂದು ಪಂಚಮಸಾಲಿ ಸಮುದಾಯಕ್ಕೆ 2-ಎನಲ್ಲಿ ಮೀಸಲಾತಿ ಕಲ್ಪಿಸುವುದಕ್ಕೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next