Advertisement

ಮಾದಕ ದ್ರವ್ಯ ಸಾಗಾಟ ವಿದೇಶಿ ಪ್ರಜೆ ಬಂಧನ

11:21 AM Aug 17, 2018 | |

ಬೆಂಗಳೂರು: ಅಕ್ರಮವಾಗಿ ಮಾದಕ ದ್ರವ್ಯ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ನೈಜೀರಿಯಾ ಪ್ರಜೆಯನ್ನು ಮಾದಕ ವಸ್ತು ನಿಯಂತ್ರಣ ಘಟಕ(ಎನ್‌ಸಿಬಿ)ದ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತನಿಂದ 4.1 ಗ್ರಾಂ ತೂಕದ ಮಾದಕ ದ್ರವ್ಯವನ್ನು ಎಲ್‌ಎಸ್‌ಡಿ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಆರೋಪಿ ಮುಂಬೈನಿಂದ ಬೆಂಗಳೂರಿಗೆ ಬರುವ ಬಸ್‌ನಲ್ಲಿ ಮಾದಕ ದ್ರವ್ಯ ಎಲ್‌ಎಸ್‌ಡಿಯನ್ನು ಬಾಟಲಿಯಲ್ಲಿ ಸಾಗಾಟ ಮಾಡುತ್ತಿದ್ದ. ಈ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಯಶವಂತಪುರ ಬಸ್‌ ನಿಲ್ದಾಣದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಾದಕ ದ್ರವ್ಯ ಸಿಕ್ಕಿದ್ದು ಆತನನ್ನು ಬಂಧಿಸಲಾಗಿದೆ.

ಆರೋಪಿ 2015ರಲ್ಲಿ ವ್ಯವಹಾರದ ವೀಸಾದಡಿ ಭಾರತಕ್ಕೆ ಬಂದಿದ್ದು, ಇದೀಗ ವೀಸಾ ಅವಧಿ ಮುಕ್ತಾಯಗೊಂಡಿದೆ. ಆದರೂ ಅಕ್ರಮವಾಗಿ ದೇಶದಲ್ಲಿ ವಾಸವಾಗಿದ್ದಾನೆ. ಮುಂಬೈ, ಕೇರಳ ಸೇರಿದಂತೆ ಮಾರಾಟ ಜಾಲ ವಿಸ್ತರಿಸಿಕೊಂಡು, ಸೈಬರ್‌ ಕ್ರೈಂ ವಂಚನೆ ಪ್ರಕರಣದಲ್ಲೂ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next