ವಿಟ್ಲ: ಮಾದಕ ದ್ರವ್ಯ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿದ್ದು, ಇನ್ನೋರ್ವ ಪರಾರಿಯಾಗಿದ್ದಾನೆ.
Advertisement
ಬೆಳ್ತಂಗಡಿ ತಾಲೂಕು ಬಾರ್ಯ, ಸೂರ್ಯ ಪಡ್ಡಾಯಿ ನಿವಾಸಿ ಅಬ್ದುಲ್ ಅಜೀಜ್ (30) ಬಂಧಿತ ಆರೋಪಿ. ವಿಟ್ಲ ಮೂಲದ ಸಾಧಿಕ್ ಯಾನೆ ಬ್ಲೇಡ್ ಸಾಧಿಕ್ ಪರಾರಿಯಾದವನಾಗಿದ್ದಾನೆ. ಬಂಧಿತ ಆರೋಪಿಯಿಂದ 7.1 ಗ್ರಾಂ ಎಂಡಿಎಂಎ, 11,000 ರೂ. ನಗದು ಹಾಗೂ ಒಂದು ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡಿರುವ ಸೊತ್ತಿನ ಮೌಲ್ಯ 14,200 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.