Advertisement

Drug racket: ತಿಹಾರ್‌ ಜೈಲ್‌ ವಾರ್ಡನ್‌ ನೇತೃತ್ವದಲ್ಲಿ ಡ್ರಗ್‌ ದಂಧೆ

10:58 PM Oct 29, 2024 | Team Udayavani |

ನವದೆಹಲಿ: ಚೆನ್ನೈನಲ್ಲಿ ಡ್ರಗ್‌ ತಯಾರಿಕ ಘಟಕದ ಮೇಲೆ ದಾಳಿ ಮಾಡಿದ 1 ವಾರದಲ್ಲೇ ದೆಹಲಿಯಲ್ಲೂ ಡ್ರಗ್‌ ಜಾಲವನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ರಾಷ್ಟ್ರರಾಜಧಾನಿ ಹೊರ ವಲಯದಲ್ಲಿ ದಾಳಿ ನಡೆಸಿದ ಎನ್‌ಸಿಬಿ 95 ಕೇಜಿ ಡ್ರಗ್‌ ವಶಪಡಿಸಿಕೊಂಡಿದ್ದು, ಈ ದಂದೆಯ ನೇತೃತ್ವ ವಹಿಸಿದ್ದ ತಿಹಾರ್‌ ಜೈಲಿನ ವಾರ್ಡನ್‌ ಹಾಗೂ ಮೆಕ್ಸಿಕೋದ 5 ಮಂದಿಯನ್ನು ಬಂಧಿಸಿದ್ದಾರೆ.

Advertisement

ಉತ್ತರ ಪ್ರದೇಶದ ಗೌತಮ ಬುದ್ಧನಗರದಲ್ಲಿರುವ  ಈ ಘಟಕದಲ್ಲಿ ಭಾರತದಲ್ಲಿ ಹಾಗೂ ವಿದೇಶದಲ್ಲಿ ಮಾರಾಟ ಮಾಡುವುದಕ್ಕಾಗಿ ಡ್ರಗ್‌ ತಯಾರು ಮಾಡುತ್ತಿದ್ದರು. ಮೆಥಾಪೆಂಟಮೈನ್‌ ಎಂಬ ಮಾದಕವಸ್ತುವನ್ನು ಇಲ್ಲಿ ತಯಾರು ಮಾಡಲಾಗುತ್ತಿತ್ತು ಎನ್ನಲಾಗಿದೆ. ಅದು ಬಹುಬೇಗ ವ್ಯಕ್ತಿಗಳನ್ನು ಕೆರಳಿಸುವುದರಿಂದ ಇದಕ್ಕೆ ನಿಷೇಧ ಹೇರಲಾಗಿದೆ. ಇದರಲ್ಲಿ ಮೆಕ್ಸಿಕೋ ಡ್ರಗ್‌ ಮಾರಾಟ ಸಂಸ್ಥೆ ಭಾಗಿಯಾಗಿದ್ದು, ಡ್ರಗ್‌ ತಯಾರು ಮಾಡಲು ತರಬೇತಿ ಪಡೆದ ಜನರನ್ನು ವಿವಿದೆಡೆಗೆ ಸ್ಥಳಾಂತರ ಮಾಡ ಲಾಗಿದೆ ಎಂದು 2017ರಲ್ಲಿ ಮೆಕ್ಸಿಕೋ ಹೇಳಿತ್ತು.

95 ಕೆ.ಜಿ. ವಶ: ದಾಳಿ ನಡೆಸಿದ ಪೊಲೀ ಸರು, ಘನ, ದ್ರವ ರೂಪದಲ್ಲಿದ್ದ 95 ಕೇಜಿ ಡ್ರಗ್ಸ್‌ ವಶಪಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next