Advertisement
ಇದರೊಂದಿಗೆ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣ ಭೇದಿಸಲು ರಾಜ್ಯ ಆಂತರಿಕ ಭದ್ರತಾ ದಳ (ಐಎಸ್‌ಡಿ) ಕೂಡ ಅಖಾಡಕ್ಕಿಳಿದಂತಾಗಿದೆ. ಈಗ ಸ್ಯಾಂಡಲ್‌ವುಡ್ ಡ್ರಗ್ಸ್ ಹಗರಣದ ಜಾಲ ಬೆಳ್ಳಿತೆರೆ ಮಾತ್ರವಲ್ಲದೆ ಕಿರುತೆರೆಯನ್ನೂ ಆವರಿ ಸಿರುವುದು ಖಚಿತವಾಗಿದ್ದು, ಹಲವು ಕಿರುತೆರೆ ನಟಿಯರಿಗೆ ವಿಚಾರಣೆಗೆ ನೋಟಿಸ್ ನೀಡಲಾಗಿದೆ.
ನಟ ಯೋಗೀಶ್ ಮತ್ತು ಖಾಸಗಿ ವಾಹಿನಿಯ ಸಿಬಂದಿ ಯೊಬ್ಬರನ್ನು ಸೋಮವಾರ ವಿಚಾರಣೆ ನಡೆಸ ಲಾಗಿದೆ ಎಂದು ತಿಳಿದು ಬಂದಿದೆ. ಕೆಲವು ವರ್ಷ ಗಳ ಹಿಂದೆ ಸಿನೆಮಾಗಳಲ್ಲಿ ಅವಕಾಶ ಕಡಿಮೆ ಯಾಗಿದ್ದಾಗ ಕೆಲವು ದುಶ್ಚಟಗಳ ದಾಸನಾಗಿದ್ದೆ. ಆದರೆ ಡ್ರಗ್ಸ್ ಮಾರಾಟ ವ್ಯಕ್ತಿಗಳ ಜತೆ ಸಂಪರ್ಕ ಹೊಂದಿಲ್ಲ. ಮುಖ್ಯವಾಗಿ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಕ್ಕೂ ತನಗೂ ಸಂಬಂಧವಿಲ್ಲ ಎಂದು ವಿಚಾರಣೆ ಸಂದರ್ಭದಲ್ಲಿ ನಟ ಯೋಗೀಶ್ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
Related Articles
Advertisement
ಕಿರುತೆರೆ ಕಲಾವಿದರಾದ ಅಭಿಷೇಕ್ ಮತ್ತು ಗೀತಾ ಎಂಬವ ರಿಗೂ ನೋಟಿಸ್ ಜಾರಿ ಮಾಡಲಾಗಿದ್ದು, ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.ಸೆ. 19ರಂದು ನಟಿ ಪ್ರೇಮಾ ಅವರ ಸಹೋದರ, ಕ್ರಿಕೆಟಿಗ ಅಯ್ಯಪ್ಪ ಮತ್ತು ಕೊಡಗು ಮೂಲದ ಕಿರುತೆರೆ ನಟಿಯೊಬ್ಬರನ್ನು ಐಎಸ್‌ಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರನ್ನೂ ಶನಿವಾರ ಬೆಳಗ್ಗಿನಿಂದ ಸಂಜೆವರೆಗೂ ವಿಚಾರಣೆಗೆ ಒಳಪಡಿಸಲಾಗಿತ್ತು.
ಇದುವರೆಗೆ 9 ಕೇಸು
ಐಎಸ್‌ಡಿ ಅಧಿಕಾರಿಗಳು ಇದುವರೆಗೆ ಮಾದಕವಸ್ತು ಮಾರಾಟ ಜಾಲಕ್ಕೆ ಸಂಬಂಧಿಸಿ 9 ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇತ್ತೀಚೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಅಂತಾರಾಷ್ಟ್ರೀಯ ಡ್ರಗ್ಸ್ ಪೆಡ್ಲರ್‌ಗಳ ಜತೆ ಸಂಪರ್ಕದಲ್ಲಿದ್ದ ಆರೋಪಿಯೊಬ್ಬನನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈತನ ಮಾಹಿತಿ ಮತ್ತು ಆರೋಪಿಯ ಕರೆ ವಿವರ ಪರಿಶೀಲಿಸಿದಾಗ ಕೆಲವು ನಟ, ನಟಿಯರು ಮತ್ತು ಕಿರುತೆರೆ ಕಲಾವಿದರು ಸಂಪರ್ಕದಲ್ಲಿರುವುದು ಪತ್ತೆಯಾಗಿತ್ತು. ಈ ಸಾಕ್ಷ್ಯ ಆಧರಿಸಿ ಮೂರು ದಿನಗಳಲ್ಲಿ ನಾಲ್ವರ ವಿಚಾರಣೆ ನಡೆಸಲಾಗಿದೆ ಎಂದು ಐಎಸ್‌ಡಿ ಮೂಲಗಳು ತಿಳಿಸಿವೆ. ಹೊಟೇಲ್‌ಗಳಲ್ಲಿ ಶೋಧ
ಡ್ರಗ್ಸ್ ಪ್ರಕರಣದಲ್ಲಿ ಆರೋಪಿ “ತಾರೆ’ಯರನ್ನು ಬೇಟೆಯಾಡಿದ್ದ ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ಪೊಲೀಸರು ಈಗ ಸ್ಟಾರ್ ನಟ-ನಟಿಯರು ಹೋಗಿದ್ದ ತಾರಾ ಹೊಟೇಲ್‌ಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ನಗರದ 3 ಪ್ರತಿಷ್ಠಿತ ಹೊಟೇಲ್‌ಗಳಿಗೆ ನೋಟಿಸ್ ಜಾರಿ ಮಾಡಿದ್ದು, ಲಾಕ್‌ಡೌನ್ ಮತ್ತು ಅದಕ್ಕೂ ಹಿಂದೆ ನಡೆದ ಕೆಲವು ಪಾರ್ಟಿಗಳ ಸಿಸಿಟಿವಿ ದೃಶ್ಯಾವಳಿ ನೀಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಪ್ರಕರಣದ ಕಿಂಗ್‌ಪಿನ್ ವೀರೇನ್ ಖನ್ನಾ ವಿಚಾರಣೆ ಸಂದರ್ಭ ಕೆಲವು ಮಾಹಿತಿ ನೀಡಿದ್ದಾನೆ. ಮೂರು ಹೊಟೇಲ್‌ಗಳಿಗೆ ಮಾತ್ರ ನೋಟಿಸ್ ನೀಡಲಾಗಿದೆ. ಹೊಟೇಲ್ ಮಾಲಕರು ಸಿಸಿಟಿವಿ ದೃಶ್ಯಾವಳಿಗಳನ್ನು ನೀಡಿದರೆ ಪ್ರಕರಣಕ್ಕೆ ಪುಷ್ಟಿ ಸಿಕ್ಕಂತಾಗಲಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.