ಹನೂರು (ಚಾಮರಾಜನಗರ): ದ್ವಿಚಕ್ರ ವಾಹನಗಳಲ್ಲಿ ಅಕ್ರಮವಾಗಿ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ಹನೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ಜೀರಿಗೆಗೆದ್ದೆ ಗ್ರಾಮದ ಮಂಟೇಲಿಂಗಯ್ಯ ಅಲಿಯಾಸ್ ಮಂಟೇ (30) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಈತ ತಾಲೂಕಿನ ವಿ.ಎಸ್.ದೊಡ್ಡಿ ಗ್ರಾಮದಿಂದ ಅಕ್ರಮವಾಗಿ ಗಾಂಜಾ ಸಾಗಾನಿಕೆ ಮಾಡುತ್ತಿದ್ದಾನೆ ಎಂಬುದಾಗಿ ದೊರೆತ ಖಚಿತ ಮಾಹಿತಿ ಮೇರೆಗೆ ಸಿಪಿಐ ರವಿನಾಯಕ್ ಮತ್ತು ತಂಡ ದಾಳಿ ನಡೆಸಿದ್ದಾರೆ.
ಈ ವೇಳೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಬೈಕಿನಲ್ಲಿ ಗಾಂಜಾ ಸಾಗಾಣಿಕೆ ಮಾಡುತ್ತಿದ್ದುದು ಖಚಿತವಾಗಿದೆ. ಈ ವೇಳೆ ಆತನಿಂದ 400ಗ್ರಾಂ ಒಣಗಾಂಜಾ ಮತ್ತು ಸಾಗಾಣಿಕೆ ಮಾಡುತ್ತಿದ್ದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್ ವುಡ್ ನಶೆ ನಂಟು: ಸೆಲೆಬ್ರೆಟಿ ದಂಪತಿ ದಿಗಂತ್ – ಐಂದ್ರೀತಾಗೆ ಸಿಸಿಬಿ ನೋಟಿಸ್
ದಾಳಿಯಲ್ಲಿ ಲೊಕ್ಕನಹಳ್ಳಿ ವೈದ್ಯಾಧಿಕಾರಿ ಡಾ||ಪ್ರಕಾಶ್, ಪೊಲೀಸ್ ಸಿಬ್ಬಂದಿಯಾದ ರಾಮದಾಸ್, ರಾಘವೇಂದ್ರ, ರಾಮಶೆಟ್ಟಿ, ಚಂದ್ರು, ಬಿಳಿಗೌಡ, ಜಮೀಲ್, ಪ್ರದೀಪ್, ರಾಜು ಇನ್ನಿತರರು ಭಾಗವಹಿಸಿದ್ದರು.