Advertisement
ಪ್ರಕರಣದ ಮಾಸ್ಟರ್ ಮೈಂಡ್ ಹಾಗೂ ದೇಶದ ವಿವಿಧೆಡೆ ಜಾಲ ವಿಸ್ತರಿಸಿರುವ ನೈಜಿರಿಯಾ ಪ್ರಜೆ, ಮೂವರು ಆಫ್ರಿಕಾ ದೇಶದ ಮಹಿಳೆಯರು ಹಾಗೂ ನಾಲ್ವರು ಸ್ಥಳೀಯ ಮಹಿಳೆಯರು ಸೇರಿ 9 ಮಂದಿಯನ್ನು ಬಂಧಿಸಲಾಗಿದೆ. ಅವರಿಂದ 52.5 ಕೋಟಿ ರೂ. ಮೌಲ್ಯದ 34.89 ಕೆ.ಜಿ. ಹೆರಾಯಿನ್, 5.8 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ.
Related Articles
Advertisement
ಐವರು ಮಹಿಳೆಯರನ್ನು ವಿಚಾರಣೆ ನಡೆಸಿದಾಗ ನೈಜಿರಿಯಾ ಪ್ರಜೆಯೊಬ್ಬ ದೆಹಲಿಯಲ್ಲಿ ಕುಳಿತು ಕರ್ನಾಟಕ, ಮಧ್ಯಪ್ರದೇಶ, ದೆಹಲಿ, ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳಲ್ಲಿ ಡ್ರಗ್ಸ್ ದಂಧೆಯ ಜಾಲಹೊಂದಿರುವುದು ಗೊತ್ತಾಗಿದೆ. ನಂತರ ದೆಹಲಿಯ ಎನ್‌ಸಿಬಿ ಅಧಿಕಾರಿಗಳ ಸಹಕಾರದೊಂದಿಗೆ ನೈಜಿರಿಯಾ ಪ್ರಜೆಯನ್ನು ಬಂಧಿಸಲಾಗಿದೆ. ಇದೇ ವೇಳೆ ಆತನ ಜತೆ ದಂಧೆಗೆ ಸಹಕಾರ ನೀಡುತ್ತಿದ್ದ ಮೂವರು ಆಫ್ರಿಕಾ ದೇಶದ ಮಹಿಳೆಯರನ್ನು ಬಂಧಿಸಲಾಗಿದೆ. ಈ ಮೂಲಕ ದೇಶದ ವಿವಿಧೆಡೆ ಡ್ರಗ್ಸ್ ದಂಧೆ ನಡೆಸುತ್ತಿದ್ದ ಬೃಹತ್ ಜಾಲವನ್ನು ಬೇಧಿಸಲಾಗಿದೆ ಎಂದು ಎನ್‌ಸಿಬಿ ತಿಳಿಸಿದೆ.
ಸೂಟ್‌ಕೇಸ್‌ನ ಕೆಳಗಿತ್ತು ಡ್ರಗ್ಸ್ನೈಜಿರಿಯಾ ಪ್ರಜೆ, ಮಹಿಳೆಯರನ್ನು ತನ್ನ ದಂಧೆಗೆ ಬಳಸಿಕೊಳ್ಳುತ್ತಿದ್ದ. ದೇಶದ ವಿವಿಧೆ ಮಹಿಳೆಯರನ್ನು ಪ್ರಯಾಣಿಕರ ಸೋಗಿನಲ್ಲಿ ಕಳುಹಿಸಿ ಅವರೊಂದಿಗೆ ಟ್ರಾಲಿ ಬ್ಯಾಗ್ ಅಥವಾ ಸೂಟ್‌ಕೇಸ್‌ನ ಕೆಳಭಾಗದಲ್ಲಿ ಪ್ರತ್ಯೇಕವಾಗಿ ಬ್ಯಾಗ ಹೊಲಿಸಿ, ಅದರಲ್ಲಿ ಡ್ರಗ್ಸ್‌ಗಳನ್ನುತುಂಬಿ ಇಡುತ್ತಿದ್ದ. ಹೀಗಾಗಿ ಇದುವರೆಗೂ ದಂಧೆಯ ಸುಳಿವು ಸಿಕ್ಕಿರಲಿಲ್ಲ. ಇದೀಗ ಜಾಲವನ್ನು ಬೇಧಿಸಿದ್ದು, ಇತರೆ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಎನ್‌ಸಿಬಿ ತಿಳಿಸಿದೆ.