ಬೆಂಗಳೂರು: ಪಾರ್ಟಿಯೊಂದರಲ್ಲಿ ಡ್ರಗ್ಸ್ ಸೇವಿಸಿದ ಆರೋಪದಡಿಯಲ್ಲಿ ಬಾಲಿವುಡ್ ನಟ ಶಕ್ತಿ ಕಪೂರ್ ಪುತ್ರ ಸಿದ್ದಾಂತ್ ಕಪೂರ್ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಭಾನುವಾರ ರಾತ್ರಿ ಖಾಸಗಿ ಹೋಟೆಲ್ ನಲ್ಲಿ ನಡೆದ ಪಾರ್ಟಿಯೊಂದರಲ್ಲಿ ಸಿದ್ದಾಂತ್ ಕಪೂರ್ ಭಾಗವಹಿಸಿದ್ದರು. ಈ ಪಾರ್ಟಿಯಲ್ಲಿ ಡ್ರಗ್ ಸೇವೆನೆ ನಡೆದಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದು, ಹಲವರನ್ನು ಬಂಧಿಸಿದ್ದಾರೆ. ಸಿದ್ದಾಂತ್ ಕಪೂರ್ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರ ಸಹೋದರ.
ಡ್ರಗ್ಸ್ ಸೇವಿಸಿರುವ ಶಂಕಿತ ಜನರ ರಕ್ತದ ಮಾದರಿಗಳನ್ನು ಪೊಲೀಸರು ಪರೀಕ್ಷೆ ಮಾಡಿಸಿದ್ದಾರೆ. ಪಾಸಿಟಿವ್ ಬಂದ ಆರು ಮಂದಿಯಲ್ಲಿ ಶ್ರದ್ಧಾ ಕಪೂರ್ ಅವರ ಸಹೋದರನ ಮಾದರಿ ಸೇರಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಯೋಗಿ ಆದಿತ್ಯನಾಥ್ ಹೈಕೋರ್ಟ್ ಜಡ್ಜ್ ರೀತಿ ವರ್ತಿಸುತ್ತಿದ್ದಾರೆ: ಓವೈಸಿ ಟೀಕೆ
Related Articles
ಅವರು ಡ್ರಗ್ಸ್ ಸೇವಿಸಿ ಪಾರ್ಟಿಗೆ ಬಂದಿದ್ದಾರೆಯೇ ಅಥವಾ ಹೋಟೆಲ್ ನಲ್ಲಿ ಸೇವಿಸಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ದಿಂದ ವಿಚಾರಣೆಗೆ ಒಳಗಾದವರಲ್ಲಿ ನಟಿ ಶ್ರದ್ಧಾ ಕಪೂರ್ ಸೇರಿದ್ದಾರೆ.