ಬದಿಯಡ್ಕ: ರಾಜ್ಯ ಜನಮೈತ್ರಿ ಪೊಲೀಸ್ ಹಾಗೂ ಕೋಝಿಕ್ಕೋಡು ಸಾಂತ್ವನಂ ಟ್ರಸ್ಟ್‌ನ ನೇತƒತ್ವದಲ್ಲಿ ಮಾದಕ ವ್ಯಸನದ ಬಗ್ಗೆ ತಿಳಿವಳಿಕೆ ಸಂದೇಶ ಯಾತ್ರೆಯ ಅಂಗವಾಗಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಪಾಲಕರಿಗೆ ಹಾಗೂ ಪ್ರೌಢ ವಿದ್ಯಾರ್ಥಿಗಳಿಗೆ ಜಾಗ್ರತಿ ಕಾರ್ಯಕ್ರಮವು ಜರಗಿತು.
ಯಾತ್ರೆಯ ಸಂಚಾಲಕ ಮೋಹನನ್ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಕ್ಯಾಂಪಸ್ ಹಾಗೂ ಇತರ ಕಡೆಗಳಲ್ಲಿ ಮಾದಕ ಪದಾರ್ಥಗಳನ್ನು ರಾಜಾರೋಷವಾಗಿ ಸೇವಿಸುತ್ತಿರುವುದು ಕಂಡುಬರುತ್ತಿದೆ. ಇದರ ಬಗ್ಗೆ ಹೆಚ್ಚಿನ ಅರಿವು ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ. ಪ್ರಾಥಮಿಕ ಹಂತದಲ್ಲಿ ಪಾನ್ ಪರಾಗ್, ಮಧು, ಕಿಂಗ್ ಮೊದಲಾದ ಹೆಸರುಗಳುಳ್ಳ ವಿಷಪದಾರ್ಥಗಳನ್ನು ಸೇವಿಸುತ್ತಾ ಕೊನೆಗೆ ಗಾಂಜಾ, ಅಫೀಮುಗಳ ದಾಸರಾಗುತ್ತಾರೆ.
24 ಗಂಟೆಗಳಲ್ಲಿ ಪಾನ್ ಪರಾಗ್ ದ್ರವ್ಯದಲ್ಲಿ ಮುಳುಗಿಸಿಟ್ಟ ಸ್ಟೈನ್‌ಲೆಸ್ ಸ್ಟೀಲ್‌ನ ಬ್ಲೇಡ್ ಕರಗಿ ಹೋಗುವುದನ್ನು ನಾವು ಪ್ರಯೋಗದ ಮೂಲಕ ಮಾಡಿನೋಡಬಹುದು. ಹಾಗಾದರೆ ಇಂತಹ ಪದಾರ್ಥಗಳನ್ನು ಸೇವಿಸಿದರೆ ಏನಾಗಬಹುದೆಂಬುದನ್ನು ಆಲೋಚಿಸಿ ತಾತ್ಕಾಲಿಕ ಸಂತೋಷಕ್ಕಾಗಿ ಅಥವಾ ಬಾಹ್ಯ ಪ್ರೇರಣೆಗೆ ಒಳಗಾಗಿ ಈ ವಿಷವರ್ತುಲದೊಳಗೆ ಬಿದ್ದು ಬದುಕನ್ನು ಕಳಕೊಂಡವರು ಅದೆಷ್ಟೋಮಂದಿ ನಮ್ಮ ಕಣ್ಣಮುಂದೆಯೇ ಇದ್ದಾರೆ.
ಆದ್ದರಿಂದ ಶಿಕ್ಷಕ ವೃಂದ ಹಾಗೂ ಪಾಲಕ ವೃಂದದವರು ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಸೂಕ್ತ ಮಾರ್ಗದರ್ಶನವನ್ನಿತ್ತು ಬದುಕಿನ ಅರಿವನ್ನು ಮೂಡಿಸಬೇಕಾಗಿರುವುದು ಅತೀವ ಅಗತ್ಯವಾಗಿದೆ. ಹಾಗಿದ್ದರೆ ಮಾತ್ರ ಮುಂದಿನ ಭವಿಷ್ಯದ ಮಕ್ಕಳು ಗಾಂಜಾಮಯವನ್ನಾಗುವುದನ್ನು ತಪ್ಪಿಸ ಬಹುದು ಎಂದು ಹೇಳುತ್ತಾ ಇತ್ತೀಚೆಗೆ ಕಾಸರಗೋಡು ಜಿಲ್ಲೆಯ ಚೆಮ್ನಾಡಿನಲ್ಲಿ ನಡೆದ ಘಟನೆಯನ್ನು ಉಲ್ಲೇಖೀಸಿದರು.
ಕೇರಳದ ಬೇರೆ ಬೇರೆ ಕಡೆಗಳಲ್ಲಿ ಯಾತ್ರೆಗೆ„ಯುತ್ತಿರುವ ಸಂದರ್ಭದಲ್ಲಿ ಕಂಡುಕೊಂಡಿರುವ ಇಂತಹ ಘೋರ ಕೃತ್ಯಗಳ ಹಿಂದಿನ ಸತ್ಯವನ್ನು ಮನಮುಟ್ಟುವಂತೆ ವಿಷದೀಕರಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. 9ನೇ ತರಗತಿಯ ಮಂಜೇಶ್ ಸ್ವಾಗತಿಸಿ, ಶ್ರೀವತ್ಸ ನೂಜಿ ವಂದಿಸಿದರು. ಫೆ. 1ರಂದು ಕಾಸರಗೋಡಿ ನಿಂದ ಆರಂಭವಾದ ಯಾತ್ರೆಯು ತಿರುವನಂತಪುರದಲ್ಲಿ ಸಮಾಪನಗೊಳ್ಳಲಿದೆ.