Advertisement
ದೇಶಾದ್ಯಂತ ಸುರಿದ ಭಾರೀ ಮಳೆ, ಹಾಳಾದ ಬೆಳೆ, ಸಾಗಣೆಯಲ್ಲಾದ ವ್ಯತ್ಯಯದ ಪರಿಣಾಮ ಬೆಂಗಳೂರಿನಲ್ಲೂ ಟೊಮ್ಯಾಟೊ ಬೆಲೆ 130 ರೂ.ಗಳವರೆಗೆ ಏರಿದೆ. ಇದೀಗ ಮಳೆ ಕಡಿಮೆಯಾಗುತ್ತಿದೆ. ಸಾಗಣೆಗಿದ್ದ ಅಡಚಣೆಯೂ ನಿವಾರಣೆಯಾಗುತ್ತಿದೆ. ಹಾಗಾಗಿ ಮತ್ತೆ ಸಹಜವಾಗಿ ಬೆಲೆ ಇಳಿಯಲಿದೆ. ಈ ವರ್ಷ ಹಿಂಗಾರುಮಳೆಯ ವೇಳೆ 6.95 ಮಿಲಿಯನ್ ಟನ್ ಟೊಮ್ಯಾಟೊ ಬೆಳೆಯ ನಿರೀಕ್ಷೆ ಹೊಂದಲಾಗಿದೆ ಎಂದು ಕೇಂದ್ರ ಸರ್ಕಾರ ವಿವರಿಸಿದೆ.
Related Articles
ಆಂಧ್ರಪ್ರದೇಶದ ಕರ್ನೂಲು ಮತ್ತಿತರ ಭಾಗಗಳಲ್ಲಿ ಟೊಮ್ಯಾಟೋ ಬೆಳೆಗಾರರಿಗೆ ಈಗ ಸುಗ್ಗಿಯ ಕಾಲ ಎಂಬಂತಾಗಿದೆ! ಇದೇ ಸೆಪ್ಟಂಬರ್- ಅಕ್ಟೋಬರ್‌ನಲ್ಲಿ ಈ ಪ್ರಾಂತ್ಯದಲ್ಲಿ ಟೊಮ್ಯಾಟೋ ಬೆಲೆ ತೀವ್ರವಾಗಿ ಕುಸಿದ ಹಿನ್ನೆಲೆಯಲ್ಲಿ ಅಲ್ಲಿನ ರೈತರು, ಪ್ರತಿಭಟನೆ ನಡೆಸಿದ್ದರು. ಆದರೀಗ, ದೇಶಾದ್ಯಂತ ಅಕಾಲಿಕ ಮಳೆಯಿಂದಾಗಿ ಟೊಮ್ಯಾಟೋ ಬೆಳೆ ನಷ್ಟವಾಗಿ ಅದರ ಬೆಲೆ ಗಗನಕ್ಕೇರಿದೆ. ಇದು ಅಲ್ಲಿನ ಟೊಮ್ಯಾಟೋ ಬೆಳೆಗಾರರಿಗೆ ಹೆಚ್ಚಿನ ಆದಾಯ ತಂದುಕೊಟ್ಟಿದೆ ಎಂದು ಹೇಳಲಾಗಿದೆ.
Advertisement