ಅಹಮದಾಬಾದ್ : ಗುಜರಾತ್ ನ ಗುರುವಾರ ಬಾವ್ಲಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ವೇಳೆ ಡ್ರೋನ್ ಬಳಸಿ ವಿಡಿಯೋ ರೆಕಾರ್ಡ್ ಮಾಡಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
‘ನೋ ಡ್ರೋನ್ ಫ್ಲೈ ಝೋನ್’ ಉಲ್ಲಂಘಿಸಿದ್ದಕ್ಕಾಗಿ ದಾಖಲಿಸಿಕೊಂಡು ನಿಕುಲ್ ರಮೇಶ್‌ಭಾಯ್ ಪರ್ಮಾರ್, ರಾಕೇಶ್ ಕಲುಭಾಯ್ ಭರ್ವಾಡ್ ಮತ್ತು ರಾಜೇಶ್‌ಕುಮಾರ್ ಮಂಗೀಲಾಲ್ ಪ್ರಜಾಪತಿ ಎಂಬ ಮೂವರನ್ನು ಬಂಧಿಸಿದ್ದಾರೆ.
ಅಹಮದಾಬಾದ್ ಪೊಲೀಸರು ತನಿಖೆ ನಡೆಸುತ್ತಿದ್ದು, ಹರಿಸಲಾಗಿದ್ದ ಡ್ರೋನ್ ಅನ್ನು ಎನ್ ಎಸ್ ಜಿ ಭದ್ರತಾ ಪಡೆಗಳು ಹೊಡೆದು ಉರುಳಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ತವರು ರಾಜ್ಯ ಗುಜರಾತ್ ನಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಪೊಲೀಸರು ಮತ್ತು ಭದ್ರತಾ ಪಡೆಗಳು ವ್ಯಾಪಕ ಕಟ್ಟೆಚ್ಚರ ವಹಿಸಿವೆ.