Advertisement

ಡಿಜಿಟಲ್‌ ಭೂ ದಾಖಲೆಗೆ ಡ್ರೋನ್‌ ಭಾರತದಲ್ಲೇ ಮೊದಲ ಪ್ರಯೋಗ

12:35 AM Oct 25, 2021 | Team Udayavani |

ಹೊಸದಿಲ್ಲಿ: “ಡ್ರೋನ್‌ಗಳ ಸಹಾಯದಿಂದ ಪ್ರತೀ ಗ್ರಾಮಗಳ ಜಮೀನಿನ ಡಿಜಿಟಲ್‌ ದಾಖಲೆ ಗಳನ್ನು ಸಿದ್ಧಪಡಿಸುತ್ತಿರುವ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.

Advertisement

ಇದು ಮಾಸಿಕ ಮನ್‌ ಕೀ ಬಾತ್‌ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಡಿರುವ ಮಾತು. ದೇಶದ ನೂತನ ಡ್ರೋನ್‌ ನೀತಿ, ಶತಕೋಟಿ ಡೋಸ್‌ ಲಸಿಕೆ ಸಾಧನೆ, ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ, ಪೊಲೀಸ್‌ ಇಲಾಖೆಯಲ್ಲಿ ಮಹಿಳಾ ಸಿಬಂದಿ ಸಂಖ್ಯೆ ಹೆಚ್ಚಳ ಸೇರಿದಂತೆ ಹಲವು ವಿಚಾರಗಳ ಕುರಿತು ಅವರು ರವಿವಾರ ಮಾತನಾಡಿದ್ದಾರೆ.

ದೇಶದ ಡ್ರೋನ್‌ ಕ್ಷೇತ್ರವು ಹಲವು ನಿರ್ಬಂಧ ಗಳು ಹಾಗೂ ನಿಯಮಾವಳಿಗಳಿಂದ ತುಂಬಿತ್ತು. ನಾವು ಅದನ್ನು ಬದಲಿಸಿದ್ದೇವೆ. ಭಾರತದ ನೂತನ ಡ್ರೋನ್‌ ನೀತಿಯು ಈಗಾಗಲೇ ಅತ್ಯು ತ್ತಮ ಫ‌ಲಿತಾಂಶ ನೀಡುತ್ತಿದೆ. ಈಗ ಡ್ರೋನ್‌ ಕೇವಲ ಸೇನೆಯ ಬಳಕೆಗೆ ಸೀಮಿತವಾಗಿಲ್ಲ. ಜಗ ತ್ತಿನಲ್ಲೇ ಮೊದಲ ಬಾರಿಗೆ ಗ್ರಾಮೀಣ ಪ್ರದೇಶಗಳ ಜಮೀನಿನ ಡಿಜಿಟಲ್‌ ದಾಖಲೆಗಳನ್ನೂ ಡ್ರೋನ್‌ಗಳ ಮೂಲಕವೇ ಸಿದ್ಧಪಡಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮೂಲಸೌಕರ್ಯ ಮಾತ್ರವಲ್ಲದೇ, ಕೃಷಿ, ಲಸಿಕೆ ಪೂರೈಕೆಗೂ ನಾವು ಡ್ರೋನ್‌ ತಂತ್ರಜ್ಞಾನ ಬಳಸುತ್ತಿದ್ದೇವೆ. ಮನೆಗಳಿಗೆ ಸರಕುಗಳನ್ನು ತಲುಪಿಸಲು, ತುರ್ತು ಸಂದರ್ಭ ಗಳಲ್ಲಿ ಸಹಾಯ ಮಾಡಲು, ಕಾನೂನು-ಸುವ್ಯವಸ್ಥೆ ಕಾಪಾಡಲು ಬಳಸುತ್ತಿದ್ದೇವೆ. ಈ ತಂತ್ರಜ್ಞಾನದ ನಾಯಕರಾಗಬೇಕಿದೆ ಎಂದಿದ್ದಾರೆ.

ಸಾಮರ್ಥ್ಯಕ್ಕೆ ಸಾಕ್ಷಿ: ಭಾರತದ ಕೊರೊನಾ ಲಸಿಕೆ ಅಭಿಯಾನ100 ಕೋಟಿ ಡೋಸ್‌ಗಳ ಮೈಲಿಗಲ್ಲು ಸಾಧಿಸಿದ ಬಳಿಕ ದೇಶ ಹೊಸ ಶಕ್ತಿ, ಸ್ಫೂರ್ತಿ ಜೊತೆ ಮುನ್ನಡೆ ಯುತ್ತಿದೆ ಎಂದಿದ್ದಾರೆ.

Advertisement

ಸ್ಥಳೀಯ ಉತ್ಪನ್ನ ಖರೀದಿಸಿ: ಇದೇ ವೇಳೆ, ಹಬ್ಬದ ಸಮಯದಲ್ಲಿ ಆದಷ್ಟು ಸ್ಥಳೀಯವಾಗಿ ಉತ್ಪಾದನೆಯಾದ ವಸ್ತುಗಳನ್ನೇ ಖರೀದಿಸುವ ಮೂಲಕ ಸ್ಥಳೀಯ ಕುಶಲಕರ್ಮಿಗಳಿಗೆ ನೆರವಾ ಗುವಂತೆ ಮೋದಿ ಕರೆ ನೀಡಿದ್ದಾರೆ.

ಇದನ್ನೂ ಓದಿ:ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ರಂಗೋಲಿ, ಜೋಗುಳ, ದೇಶಭಕ್ತಿ ಗೀತೆ ಸ್ಪರ್ಧೆ
ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ದೇಶಭಕ್ತಿ ಗೀತೆ ಸ್ಪರ್ಧೆ ಹಾಗೂ ರಂಗೋಲಿ ಸ್ಪರ್ಧೆ ಆಯೋಜಿಸಲು ಸಂಸ್ಕೃತಿ ಸಚಿವಾಲಯ ಸಿದ್ಧತೆ ನಡೆಸಿದೆ ಎಂದ ಮೋದಿ, ಯುವಜನರು ನವಭಾರತ, ದೇಶದ ಪ್ರಸ್ತುತ ಯಶಸ್ಸು ಹಾಗೂ ಭವಿಷ್ಯದ ಬದ್ಧತೆಗೆ ಪ್ರೇರಣೆ ನೀಡುವಂಥ ಗೀತೆಗಳನ್ನು ರಚಿಸುವಂತೆ ಕರೆ ನೀಡಿದ್ದಾರೆ. ಇದೇ ವೇಳೆ, ಭಾರತದಲ್ಲಿ ಜೋಗುಳಕ್ಕೆ ತನ್ನದೇ ಆದ ವೈವಿಧ್ಯತೆಯಿದೆ. ಈ ಕಲೆಯನ್ನು ಪುನಶ್ಚೇತನಗೊಳಿಸಬೇಕಾದ ಅಗತ್ಯವಿದ್ದು, ಆ ನಿಟ್ಟಿನಲ್ಲೂ ಸ್ಪರ್ಧೆಯೊಂದನ್ನು ಆಯೋಜಿಸಲು ನಿರ್ಧರಿಸಲಾಗಿದೆ. ದೇಶಭಕ್ತಿಗೆ ಸಂಬಂಧಿಸಿದ ಜೋಗುಳಗಳನ್ನು, ಪ್ರತೀ ಮನೆಯಲ್ಲೂ ತಾಯಂದಿರು ತಮ್ಮ ಮಕ್ಕಳಿಗಾಗಿ ಸುಲಭವಾಗಿ ಹಾಡಲು ಆಗುವಂಥ ಕವಿತೆ, ಹಾಡುಗಳನ್ನೂ ರಚಿಸಿ ಎಂದೂ ಮೋದಿ ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next