Advertisement

ಸೌದಿ ಅರೇಬಿಯಾ ವಿ.ನಿಲ್ದಾಣದಲ್ಲಿ ಡ್ರೋನ್ ದಾಳಿ: ಎಂಟು ಮಂದಿಗೆ ಗಾಯ, ವಿಮಾನಗಳಿಗೆ ಹಾನಿ

03:47 PM Aug 31, 2021 | Team Udayavani |

ರಿಯಾದ್: ಸೌದಿ ಅರೇಬಿಯಾದ ವಿಮಾನ ನಿಲ್ದಾಣದಲ್ಲಿ ಡ್ರೋನ್ ದಾಳಿಯಾಗಿದ್ದು, ಎಂಟು ಜನರು ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ. ದಾಳಿಯ ಪರಿಣಾಮ ಏರ್ ಪೋರ್ಟ್ ನಲ್ಲಿದ್ದ ನಾಗರಿಕ ವಿಮಾನಗಳಿಗೆ ಹಾನಿ ಉಂಟಾಗಿದೆ ಎಂದು ವರದಿ ತಿಳಿಸಿದೆ.

Advertisement

ಕಳೆದ 24 ಗಂಟೆಗಳಲ್ಲಿ ಅಭಾ ವಿಮಾನ ನಿಲ್ದಾಣದಲ್ಲಿ ಇದು ಎರಡನೇ ಡ್ರೋನ್ ದಾಳಿಯಾಗಿದ್ದು, ದಾಳಿಯ ಹೊಣೆಯನ್ನು ಇದುವರೆಗೆ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಹಿಂದಿನ ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಯೆಮನ್‌ನ ಇರಾನ್ ಬೆಂಬಲಿತ ಶಿಯಾ ಹೌತಿ ಬಂಡುಕೋರರು ದಾಳಿ ಮಾಡಿದ್ದಾರೆಂದು ಆರೋಪಿಸಲಾಗಿತ್ತು.

ಇದನ್ನೂ ಓದಿ:ಗಂಡನ ಮನೆ ತೊರೆಯಲು ಯೋಜಿಸಿದ್ದಾರಾ ನಟಿ ಶಿಲ್ಪಾ ಶೆಟ್ಟಿ ?

ಯೆಮೆನ್‌ನಲ್ಲಿ ಇರಾನ್ ಬೆಂಬಲಿತ ಶಿಯಾ ಬಂಡುಕೋರರ ವಿರುದ್ಧ ಹೋರಾಡುತ್ತಿರುವ ಸೌದಿ ನೇತೃತ್ವದ ಸೇನಾ ಒಕ್ಕೂಟವು ದಾಳಿಯ ಅಥವಾ ಸಾವು ನೋವುಗಳ ಬಗ್ಗೆ ವಿವರಗಳನ್ನು ನೀಡಿಲ್ಲ. ಬದಲಾಗಿ ಒಕ್ಕೂಟವು ತನ್ನ ಪಡೆಗಳು ಸ್ಫೋಟಕ ಡ್ರೋನ್ ಅನ್ನು ತಡೆದಿದೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next