Advertisement

20 ರಂದು ವಿವಿಧ ಕಾಮಗಾರಿಗೆ ಸಿಎಂ ಚಾಲನೆ

02:44 PM Dec 12, 2017 | |

ಮುದ್ದೇಬಿಹಾಳ: ಮತಕ್ಷೇತ್ರದಲ್ಲಿ ಕಳೆದ ಆರು ತಿಂಗಳಲ್ಲಿ ಕೈಗೊಂಡಿರುವ ಅಂದಾಜು 200 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.20ರಂದು ನಗರಕ್ಕೆ ಆಗಮಿಸಲಿದ್ದಾರೆ ಎಂದು ಶಾಸಕ, ದೆಹಲಿ ವಿಶೇಷ ಪ್ರತಿನಿಧಿ ಸಿ.ಎಸ್‌.ನಾಡಗೌಡ ತಿಳಿಸಿದರು.

Advertisement

ಇಲ್ಲಿನ ತಾಪಂ ಸಭಾ ಭವನದಲ್ಲಿ ಸೋಮವಾರ ನಡೆದ ಅಧಿಕಾರಿಗಳು, ಪಿಡಿಒಗಳ ಸಭೆಯಲ್ಲಿ ಮಾತನಾಡಿದ ಅವರು, ಸಿಎಂ ಕಾರ್ಯಕ್ರಮಕ್ಕೆ 20,000ಕ್ಕೂ ಹೆಚ್ಚು ಜನ ಸೇರಿಸಬೇಕು. ಮತಕ್ಷೇತ್ರದ ಪ್ರತಿಯೊಂದು ಪಂಚಾಯಿತಿಗೆ ಜನರನ್ನು ಕರೆತರಲು ಆರು ವಾಹನ ವ್ಯವಸ್ಥೆ ಮಾಡಲಾಗುತ್ತದೆ. 

ಸರ್ಕಾರದಿಂದ ವಿವಿಧ ಇಲಾಖೆಯಡಿ ಸೌಲಭ್ಯ ಪಡೆದುಕೊಂಡಿರುವ ಎಲ್ಲ ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಕರೆತರುವ ಜವಾಬ್ದಾರಿ ಆಯಾ ಗ್ರಾಪಂ ಪಿಡಿಒಗಳದ್ದಾಗಿದೆ. ಉಳಿದ ಇಲಾಖೆಗಳ ಅಧಿಕಾರಿಗಳು ಕೂಡಾ ತಮ್ಮ ಇಲಾಖೆಯಡಿ ಸೌಲಭ್ಯ ಪಡೆದ ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಕರೆಸುವ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು. 

ಹಾಸ್ಯ ಚಟಾಕಿ ಹಾರಿಸಿದ ಶಾಸಕ: ಪ್ರಸಕ್ತ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಗ್ರಾಪಂನಿಂದ 11,700 ಮನೆ ಕೊಟ್ಟಿದ್ದೇನೆ. ಇದರಲ್ಲಿ 10,443 ಮನೆಗಳು ಅನುಮೋದನೆಗೊಂಡು ಕಾರ್ಯರೂಪದಲ್ಲಿವೆ. ಇವುಗಳಿಗೆ ಹಣ ಕೂಡ ಬಿಡುಗಡೆ ಆಗಿದೆ. ಕೃಷಿ ಭಾಗ್ಯ ಯೋಜನೆಯಡಿ 3,500 ಫಲಾನುಭವಿಗಳು ಇದ್ದಾರೆ. ಇವರನ್ನು ಕಾರ್ಯಕ್ರಮಕ್ಕೆ ಕರೆಸಬೇಕು. ಕಾಂಗ್ರೆಸ್‌ ಸರ್ಕಾರದಿಂದ ಪ್ರಯೋಜನ ಪಡೆದುಕೊಂಡ ಈ ಜನರೆಲ್ಲರೂ ನನಗೆ ಮತ ಹಾಕಿದರೆ ಸಾಕು ನಾನು ಗೆಲ್ಲುತ್ತೇನೆ ಎಂದು ಹಾಸ್ಯ ಚಟಾಕಿ ಹಾರಿಸಿದಾಗ ಸಭೆ ನಗೆಗಡಲಲ್ಲಿ ತೇಲಿತು.

ವಿವಿಧ ಯೋಜನೆಗಳು: ನಾಗರಬೆಟ್ಟ ಏತ ನೀರಾವರಿ, ಆಲಮಟ್ಟಿ ಎಡದಂಡೆ ಕಾಲುವೆ ನವೀಕರಣ, ಕಾಡಾ, ಸಿಎಂಜಿಎಸ್‌ವೈ, ಪಿಎಂಜಿಎಸ್‌ವೈ ಯೋಜನೆಯಡಿ ರಸ್ತೆಗಳು, ನೀರಾವರಿ ಇಲಾಖೆ ಅಡಿ ಸೇತುವೆಗಳು, ಸಣ್ಣ ನೀರಾವರಿ ಇಲಾಖೆ ಅಡಿ ಬಾಂದಾರ್‌, ಗ್ರಾಮ ವಿಕಾಸ ಯೋಜನೆಯಡಿ ಆಯ್ಕೆಯಾದ ಹುನಕುಂಟಿ, ಯರಗಲ್‌, ಬಾವೂರ, ಬಳಗಾನೂರ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳು (1 ಕೋಟಿ ರೂ. ವೆಚ್ಚ) ಸೇರಿದಂತೆ 200 ಕೋಟಿಗೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.

Advertisement

 ಇಲಾಖೆ ಸಚಿವರಿಂದ ಉದ್ಘಾಟನೆ: 200 ಕೋಟಿ ರೂ. ಕಾಮಗಾರಿ ಹೊರತುಪಡಿಸಿ ಈಗಾಗಲೇ ತಾಲೂಕಿನಲ್ಲಿ ಪ್ರಗತಿ ಹಂತದಲ್ಲಿರುವ ನೂರಾರು ಕೋಟಿ ವೆಚ್ಚದ ಹೆದ್ದಾರಿಗಳು, ಪಿಡಬ್ಲೂಡಿ ಅಡಿ 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ತಾಳಿಕೋಟೆ-ಹಡಗಿನಾಳ ಸೇತುವೆ, ಇಂಧನ ಇಲಾಖೆಯಡಿ ಹಿರೇಮುರಾಳದಲ್ಲಿ ಸ್ಥಾಪಿಸಲಾಗುತ್ತಿರುವ ವಿದ್ಯುತ್‌ ಸಬ್‌ ಸ್ಟೇಶನ್‌, ಯರಗಲ್ಲ ಬಳಿ ನಡೆಯುತ್ತಿರುವ 20 ಮೆಗಾವ್ಯಾಟ್‌ ಸೋಲಾರ್‌ ವಿದ್ಯುತ್‌ ಘಟಕ ಮುಂತಾದವುಗಳನ್ನು ಆಯಾ ಇಲಾಖೆ ಸಚಿವರು ಬಂದು ಪ್ರತ್ಯೇಕವಾಗಿ ಉದ್ಘಾಟಿಸುವರು ಎಂದು ಶಾಸಕರು ತಿಳಿಸಿದರು.

ಪುರಸಭೆ, ಪೊಲೀಸ್‌ ಅಧಿಕಾರಿಗಳ ತರಾಟೆ: ಪಟ್ಟಣದಲ್ಲಿ ಸ್ವತ್ಛತೆ ಕಾಪಾಡುವಲ್ಲಿ ವಿಫಲಗೊಂಡಿರುವ ಪುರಸಭೆಯನ್ನು, ರಾತ್ರಿ 11ರೊಳಗೆ ಅಂಗಡಿ ಮುಚ್ಚಿಸದೆ ನಿರ್ಲಕ್ಷ್ಯ ತೋರುತ್ತಿರುವ ಪೊಲೀಸ್‌ ಇಲಾಖೆ ಅಧಿಕಾರಿಗಳನ್ನು ಶಾಸಕ ನಾಡಗೌಡ ತೀವ್ರ ತರಾಟೆಗೆ ತೆಗೆದುಕೊಂಡರು. ಅಪರ ಜಿಲ್ಲಾಧಿಕಾರಿ ಕೆ.ಬೂದೆಪ್ಪ, ಕೆಬಿಜೆಎನ್ನೆಲ್‌ ಇಇ ನಾಯ್ಕೋಡಿ, ತಹಶೀಲ್ದಾರ್‌ ಎಂ.ಎಸ್‌. ಬಾಗವಾನ, ತಾಪಂ ಇಒ ಸುರೇಶ ಭಜಂತ್ರಿ, ತಾಪಂ ಉಪಾಧ್ಯಕ್ಷ  ಜುನಾಥಗೌಡ ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next