Advertisement
ಪ್ರಯೋಜನಗಳುಅಪಘಾತದಿಂದ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‌ಗಳು ಮರಣ ಹೊಂದಿದಲ್ಲಿ ಅವರ ನಾಮನಿರ್ದೇಶಿತರಿಗೆ 5 ಲಕ್ಷ ರೂ. ಪರಿಹಾರ, ಶಾಶ್ವತ ದುರ್ಬಲತೆಗೆ 2 ಲಕ್ಷ ರೂ.ವರೆಗೆ ಪರಿಹಾರ. ತಾತ್ಕಾಲಿಕ ದುರ್ಬಲ ತೆಗೆ 50,000ದಿಂದ 1ಲಕ್ಷ ರೂ. ವರೆಗೆ ಆಸ್ಪತ್ರೆ ವೆಚ್ಚ ಮರು ಪಾವತಿ.
ಅಪಘಾತದ ಕಾರಣ ನಿಧನ ರಾದ ಅಥವಾ ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದ ಫಲಾನುಭವಿ ಗಳ ಇಬ್ಬರು ಮಕ್ಕಳಿಗೆ ಪದವಿ ಪೂರ್ವ ವ್ಯಾಸಂಗದವರೆಗೆ ವಾರ್ಷಿಕ 10,000 ರೂ. ಶೈಕ್ಷಣಿಕ ಧನಸಹಾಯ. ಖಾಸಗಿ ವಾಣಿಜ್ಯ ವಾಹನದ ನಿರ್ವಾಹಕರು ಮತ್ತು ಕ್ಲೀನರ್‌ಗಳು ನೋಂದಣಿಯಾಗಲು 20ರಿಂದ 70 ವರ್ಷದೊಳಗಿರಬೇಕು. ಸ್ಟಾಂಪ್ ಸೈಜ್ ಫೋಟೊ 1, ಪಾಸ್ ಪೋರ್ಟ್ ಸೈಜ್ 1, ಆಧಾರ್‌ಕಾರ್ಡ್, ಮಾರ್ಕ್ ಕಾರ್ಡ್ (ಎಸೆಸ್ಸೆಸಿ)/ ಡಿಎಲ್/ ಪಾನ್ ಕಾರ್ಡ್, ಬ್ಯಾಂಕ್ ಖಾತೆಯ ಪ್ರತಿ, ನಿರ್ವಾಹಕರ ಊರ್ಜಿತ ಪರವಾನಿಗೆ (ಸಾರಿಗೆ ಇಲಾಖೆಯಿಂದ ಪಡೆದಿರ ತಕ್ಕದ್ದು) (ನಿರ್ವಾಹಕರಿಗೆ ಮಾತ್ರ), ಸಂಸ್ಥೆ/ ಮಾಲಕರಿಂದ ನೀಡಲಾಗಿರುವ ಗುರುತಿನ ಚೀಟಿ (ಲಭ್ಯವಿದ್ದಲ್ಲಿ) ಈ ಎಲ್ಲ ದಾಖಲೆಯೊಂದಿಗೆ ಜಿಲ್ಲಾ ಕಾರ್ಮಿಕ ಅಧಿಕಾರಿ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.