ಶಿಲ್ಲಾಂಗ್: ಮೇಘಾಲಯದ ಪೂರ್ವ ಖಾಸಿ ಬೆಟ್ಟದಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕನನ್ನು ಬಿಎಸ್‌ಎಫ್ ಸಿಬಂದಿ, ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಈ ಘಟನೆ ಕುರಿತು ಬಿಎಸ್‌ಎಫ್, ತನಿಖೆಗೆ ಆದೇ ಶಿಸಿದೆ. ರೋನಿಂಗ್ ನಾಂಗಿRನ್ರಿಹ್(32) ಮೃತ ಟ್ರಕ್ ಚಾಲಕ. ಭಾರತ -ಬಾಂಗ್ಲಾದೇಶ ಗಡಿಯ 17 ಕಿ.ಮೀ. ಸಮೀಪ ಮಾವುÏನ್ ಗ್ರಾಮದ ಚೆಕ್‌ಪೋಸ್ಟ್‌ನಲ್ಲಿ ಬಿಎಸ್‌ಎಫ್ ಯೋಧರು ನಿಯೋಜನೆಗೊಂಡಿದ್ದರು. ಎಂದಿನಂತೆ ಚೆಕ್‌ಪೋಸ್ಟ್‌ಗೆ ಬರುವ ಎಲ್ಲ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಗೋವುಗಳನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕ, ಚೆಕ್‌ಪೋಸ್ಟ್ ನಲ್ಲಿ ವಾಹನವನ್ನು ನಿಲ್ಲಿಸದೇ ವೇಗವಾಗಿ ಚಲಿಸಿದ್ದಾನೆ. ತಮ್ಮ ಮೇಲೆ ವಾಹನ ಹರಿಯುವುದನ್ನು ತಪ್ಪಿಸಲು, ಚಾಲಕನ ಮೇಲೆ ಗುಂಡು ಹಾರಿಸಲಾಯಿತು ಎಂದು ಬಿಎಸ್‌ಎಫ್ ಯೋಧ ಸ್ಪಷ್ಟನೆ ನೀಡಿದ್ದಾರೆ. “ಘಟನೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಡಿಐಜಿ ರ್‍ಯಾಂಕ್‌ನ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ನಡೆಯಲಿದೆ,’ ಎಂದು ಬಿಎಸ್‌ಎಫ್ ಐಜಿ ಪ್ರದೀಪ್ ಕುಮಾರ್ ತಿಳಿಸಿದ್ದಾರೆ.