Advertisement

ಘೋರ ದುರಂತ ಬಿಂಬಿಸುವ ಛಾಯಾಚಿತ್ರಕ್ಕೆ ಚಾಲನೆ

03:51 PM Aug 14, 2022 | Team Udayavani |

ರಾಯಚೂರು: ನಗರದ ಜಿಲ್ಲಾ ಬಸ್‌ ನಿಲ್ದಾಣದಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ನಿಮಿತ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಭಾರತ ಸ್ವಾತಂತ್ರ್ಯ ಸಂದರ್ಭದಲ್ಲಿ ದೇಶ ಇಬ್ಭಾಗವಾದಾಗಿನ ಘೋರ ದುರಂತಗಳನ್ನು ಬಿಂಬಿಸುವ ಛಾಯಾಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ ಡಾ| ಕೆ.ಆರ್‌.ದುರುಗೇಶ್‌ ಚಾಲನೆ ನೀಡಿದರು.

Advertisement

ಈ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಜನಪದ ಹಾಗೂ ಮಾರ್ಚ್‌ ಆಫ್‌ ಕರ್ನಾಟಕ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವಿತರಿಸಲಾಯಿತು.

ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ| ಸುರೇಂದ್ರ ಬಾಬು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಿಲ್ದಾಣಾಧಿಕಾರಿ ಶೀಲಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿಯಾದ ಲಿಂಗರಾಜ್‌, ಎ.ಪ್ರಕಾಶ್‌, ರಮೇಶ ಗೌಡೂರು ಜಾಲಹಳ್ಳಿ, ಅಜರ್‌ ಉಲ್‌ ಹಕ್‌, ಚನ್ನಬಸವ, ದೇವೇಂದ್ರಮ್ಮ ಸೇರಿದಂತೆ ಇತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next