ಮೈಸೂರು: ಕಲಾಮಂದಿರದ “ಚಿಂತನ ಚಾವಡಿ’ ವೇದಿಕೆಯಲ್ಲಿ ಬುಧವಾರ ದೇಸಿ ರಂಗ ಸಾಂಸ್ಕೃತಿಕ ಸಂಸ್ಥೆ ಆಯೋಜಿಸಿರುವ ರಂಗ ಮತ್ತು ನೃತ್ಯ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಂಗಾ ಯಣದ ನಿವೃತ್ತ ಉಪನಿರ್ದೇಶಕ ಮ.ಗು. ಸದಾನಂದಯ್ಯ ಕಂಸಾಳೆ ಬಾರಿಸುವ ಮೂಲಕ ರಂಗ ಮತ್ತು ನೃತ್ಯ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ, ಕಲೆಗಳು ಎಲ್ಲಿ ಜೀವಂತವಾಗಿರುತ್ತವೊ ಅಲ್ಲಿ ವಿಕಾಸ, ಬದಲಾವಣೆ ಹಾಗೂ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ರಂಗಭೂಮಿ, ಲಲಿತಕಲೆಗಳು ನೆಲದ ತಾಯಿ ಬೇರು.
ಇದನ್ನೂ ಓದಿ:ಕಾಲೇಜಿನಲ್ಲಿ ಪರೀಕ್ಷೆ ವೇಳೆ ಕುಸಿದ ಛಾವಣಿಗಾರೆ
ಇದನ್ನು ಯಾರು ಮರೆಯುತ್ತಾರೊ ಅಲ್ಲಿ ಸಮೃದ್ಧಿ ಇರಲು ಸಾಧ್ಯವೇ ಇಲ್ಲ ಎಂದು ಹೇಳಿದರು. ಸಂಸ್ಥೆಯ ಕಾರ್ಯದರ್ಶಿ ಕೃಷ್ಣ ಜನಮನ ಮಾತನಾಡಿ, ಶಿಬಿರದಲ್ಲಿ ಇದೇ ಪ್ರಥಮವಾಗಿ ಹೆಣ್ಣು ಮಕ್ಕಳಿಂದಲೇ ಜಲಗಾರ ನಾಟಕ ಪ್ರದ ರ್ಶನ ನೀಡುವ ಕುರಿತು ಯೋಜಿಸಲಾಗಿದೆ.
10 ದಿನಗಳ ಶಿಬಿರದಲ್ಲಿ ಡೊಳ್ಳು ಕುಣಿತ, ಕಂಸಾಳೆ, ಮಾರಿ ಕುಣಿತ, ರಂಗ ತರಬೇತಿ ನೀಡ ಲಾಗುವುದು. ಶಿಬಿರ ಮುಕ್ತಾಯವಾದ ಬಳಿಕ ನಾಟಕವನ್ನು ಪ್ರದರ್ಶಿಸಲಾಗುವುದು. ಇದ ರೊಂ ದಿಗೆ ಶಿಬಿರಾರ್ಥಿಗಳಿಗೆ ವೇದಿಕೆ ಭಯ (ಸ್ಟೇಜ್ ಫಿಯರ್)ವನ್ನೂ ಹೋಗಲಾಡಿಸ ಲಾಗು ವುದು ಎಂದು ತಿಳಿಸಿದರು. ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಮುಖ್ಯಸ್ಥ ಪ್ರೊ.ಮೈಸೂರು ಕೃಷ್ಣಮೂರ್ತಿ, ಸಹ ಪ್ರಾಧ್ಯಾಪಕರಾದ ಡಾ.ವಿಜಯಲಕ್ಷ್ಮೀ, ಡಾ.ಎಸ್. ಜಿ.ರಾಘವೇಂದ್ರ ಇತರರಿದ್ದರು.