Advertisement
ಬಿಜಾಪುರದ ಆದಿಲ್‌ಷಾ ಸ್ಮಾರಕವಾಗಿ ವಿಶ್ವ ವಿಖ್ಯಾತಗೊಂಡಿರುವ ಗೋಲ್‌ಗುಂಬಜ್ ಅನ್ನು ಸುಮಾರು 4 ಲಕ್ಷ ವಿವಿಧ ಬಣ್ಣದ ಗುಲಾಬಿಗಳಿಂದ ನಿರ್ಮಿಸಿರುವುದು ಈ ಬಾರಿಯ ವಿಶೇಷ. ಆದಿವಾಸಿ ಸಮುದಾಯದ ಜೀವನಶೈಲಿ ಕುರಿತು ಪ್ರತಿಬಿಂಬಿಸುವ ಕೃತಕ ಕಾಡು ನಿರ್ಮಾಣ, ಆದಿವಾಸಿಗಳ ಹಾಡಿ, ಹಟ್ಟಿ, ಪ್ರಾಣಿ, ಪಕ್ಷಿಗಳ ಕಲಾಕೃತಿಗಳು ಪ್ರದರ್ಶನದ ಮತ್ತೂಂದು ಆಕರ್ಷಣೀಯ. ಜನವರಿ 29ರವರೆಗೂ ನಡೆಯಲಿರುವ ಫಲಪುಷ್ಪ ಪ್ರದರ್ಶನವನ್ನು ಈ ಬಾರಿ 6 ಲಕ್ಷ ಜನಕ್ಕೂ ಹೆಚ್ಚು ಜನರು ವೀಕ್ಷಿಸುವ ನಿರೀಕ್ಷೆಯಿದೆ.
Related Articles
ಫಲಪುಷ್ಪ ಪ್ರದರ್ಶನ ಹಿನ್ನೆಲೆಯಲ್ಲಿ ಸುಮಾರು 100 ಸಿಸಿ ಕ್ಯಾಮರಾಗಳನ್ನು ಅಳವಡಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ. ಕಳೆದ ಬಾರಿ ಕೇವಲ 25 ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಈ ಬಾರಿ ಆ ಸಂಖ್ಯೆಯನ್ನು 40ಕ್ಕೆ ಹೆಚ್ಚಿಸಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಹಾಗೂ ಡಿಸಿಪಿ (ದಕ್ಷಿಣ) ಶರಣಪ್ಪ ಅವರ ಸೂಚನೆ ಮೇರೆಗೆ ನೂರು ಸಿಸಿ ಕ್ಯಾಮರಾಗಳನ್ನು ಉದ್ಯಾನವನದ ವಿವಿಧೆಡೆ ಶುಕ್ರವಾರದಿಂದಲೇ ಅಳವಡಿಸುವ ಕಾರ್ಯ ನಡೆದಿದೆ.
Advertisement
6 ಸಾವಿರ ಜನರಿಂದ ವೀಕ್ಷಣೆಮೊದಲ ದಿನದ ಫಲಪುಷ್ಪ ಪ್ರದರ್ಶನವನ್ನು ಆರು ಸಾವಿರ ಜನರು ವೀಕ್ಷಿಸಿದ್ದಾರೆ. ಶುಕ್ರವಾರ ಬೆಳಗ್ಗೆ 11ರಿಂದ ಸಂಜೆ 7ರವರೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಒಟ್ಟು 3 ಲಕ್ಷ ರೂ. ಪ್ರವೇಶ ಶುಲ್ಕ ಸಂಗ್ರಹವಾಗಿದೆ. ಮೊದಲ ದಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾವಕಾಶವಿತ್ತು. ನೂರಾರು ಮಕ್ಕಳು ಫಲಪುಷ್ಪ ಪ್ರದರ್ಶನ ವೀಕ್ಷಿಸಿದರು. ಮೊಬೈಲ್ ಕಳ್ಳತನ ಯತ್ನ
ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಬಂದು ಲಾಲ್‌ಬಾಗ್‌ನ ಧನ್ವಂತರಿ ಪಾರ್ಕ್‌ನಲ್ಲಿಕುಳಿತಿದ್ದ ಪ್ರೇಮಿಗಳ ಬಳಿ ವ್ಯಕ್ತಿಯೊಬ್ಬ ತೋಟಗಾರಿಕೆ ಇಲಾಖೆ ಅಧಿಕಾರಿ ಸೋಗಿನಲ್ಲಿ ಬೆದರಿಸಿ ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿ ಸಿಕ್ಕಿಬಿದ್ದಿ ದ್ದಾನೆ. ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸುತ್ತಿದ್ದ ಆತನನ್ನು ಉದ್ಯಾನವನದ ಗಾರ್ಡ್ ಮುನಿಕೃಷ್ಣ ಹಿಡಿದು ಪೊಲೀಸರಿಗೆ ವಶಕ್ಕೆ ನೀಡಿದರು.