Advertisement
ಸಂಘಟನೆಗೆ ಕ್ರೀಡಾಕೂಟ ಅಗತ್ಯಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿ, ಹಿಂದೂ ಸಮಾಜದ ಸಂಘಟನೆಗೆ ಇಂತಹ ಕ್ರೀಡಾ ಕೂಟಗಳು ಅವಶ್ಯವಾಗಿದೆ. ಯಾವುದೇ ಜಾತಿಯ ಸಂಘಟನೆ ಅಸ್ಥಿತ್ವಕ್ಕೆ ಬಂದರೂ ಆಯಾ ಸಮುದಾಯದ ಪ್ರತಿಭೆಗಳಿಗೆ ಪ್ರೋತ್ಸಾಹ, ಸಮುದಾಯದ ಏಳಿಗೆಗೆ ಆಗಿದೆ. ಆದರೆ ಹಿಂದೂ ಸಮಾಜ ಎಂದಾಗ ಎಲ್ಲ ಪಂಗಡಗಳ ಸಂಘಗಳು ಒಗ್ಗಟ್ಟಾಗಿ ಕೊಡುಗೆ ನೀಡುತ್ತಿವೆ. ಜೋಗಿ ಸಮುದಾಯವೂ ಸಮಾಜದ ಅಭಿವೃದ್ಧಿಗೆ ತನ್ನದೇ ಆದ ಸೇವೆ ಸಲ್ಲಿಸುತ್ತಿದೆ ಎಂದರು.
ಬೆಳವಣಿಗೆಗೆ ಸಹಕಾರಿ
ಡಾ| ಭರತ್ ಶೆಟ್ಟಿ ವೈ ಮಾತನಾಡಿ, ಕ್ರೀಡಾಕೂಟದಿಂದ ಸಮುದಾಯದ ಜನ ಬೆರೆಯಲು ಸಿಗುವ ಅಪೂರ್ವ ಅವಕಾಶ ಜತೆಗೆ ನಮ್ಮ ನಮ್ಮ ದೈಹಿಕ, ಮಾನಸಿಕ ಬೆಳವಣಿಗೆಗೂ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಅಗತ್ಯವಾಗಿದೆ ಎಂದರು. ಸುವರ್ಣ ಮಹೋತ್ಸವದ ಕಾರ್ಯಾಧ್ಯಕ್ಷ ಎಚ್.ಕೆ. ಪುರುಷೋತ್ತಮ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಜೋಗಿ ಅಧ್ಯಕ್ಷತೆ ವಹಿಸಿದ್ದರು.
Related Articles
Advertisement
ಪ್ರತಿಭೆಗಳ ಅನಾವರಣಕ್ಕೆ ವೇದಿಕೆಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಜೋಗಿ ಸಮಾಜ ಸುಧಾರಕ ಸಂಘ ಇದೀಗ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು,ಸಮುದಾಯದ ಜನರಿಗಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬರುತ್ತಿದೆ.ಯುವ ಸಮಾಜ ಬಲಿಷ್ಠವಾಗಲು ಕ್ರೀಡೆ ಸಹಾಯವಾಗಬಲ್ಲುದು.ಪ್ರತಿಭೆಗಳ ಅನಾವರಣಕ್ಕೆ ಇಂತಹ ವೇದಿಕೆಗಳು ಯುವಕರಿಗೆ ಹೆಚ್ಚು ಸಿಗಬೇಕಿದೆ ಎಂದು ಹೇಳಿದರು.