Advertisement

ಸಂಚಾರ ಆರೋಗ್ಯ ಕಿನಿಕ್‌ ವಾಹನಕ್ಕೆ ಚಾಲನೆ

02:17 PM Sep 06, 2022 | Team Udayavani |

ಚಿಕ್ಕಬಳ್ಳಾಪುರ: ನಗರದ ಎಸ್‌ಜೆಸಿಐಟಿ ಕಾಲೇಜು ಆವರಣದಲ್ಲಿ ಸೋಮವಾರ ಶ್ರಮಿಕ್‌ ಸಂಜೀವಿನಿ-ಸಂಚಾರ ಆರೋಗ್ಯ ಕ್ಲಿನಿಕ್‌ ಸೇವೆಯ ವಾಹನಕ್ಕೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹಾಗೂ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ ಚಾಲನೆ ನೀಡಿದರು.

Advertisement

ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಅವಲಂಬಿತರ ಆರೋಗ್ಯ ಸೇವೆ ನೀಡುವ ಸಂಚಾರ ಆರೋಗ್ಯ ಕ್ಲಿನಿಕ್‌ ವಾಹನ ಅತ್ಯಾಧುನಿಕ ಸವಲತ್ತುಗಳನ್ನು ಹೊಂದಿದೆ. ಈ ವಾಹನವು ಪ್ರತಿ ದಿನ ಒಂದು ತಾಲೂಕಿಗೆ ಸಂಚರಿಸಿ ಕಾರ್ಮಿಕರಿಗೆ ಆರೋಗ್ಯ ಸೇವೆ ನೀಡಲಿದೆ. ಪ್ರತಿದಿನ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ವರೆಗೆ ಒಂದು ಸ್ಥಳ ನಂತರ ಮಧ್ಯಾಹ್ನ 2.30 ರಿಂದ ಸಂಜೆಯವರೆಗೆ ಒಂದು ಸ್ಥಳದಲ್ಲಿ ಅರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಸೇವೆ ಒದಗಿಸುತ್ತದೆ ಎಂದರು.

ಈ ವೇಳೆ ಜಿಲ್ಲಾ ಕಾರ್ಮಿಕ ಅಧಿಕಾರಿ ವರಲಕ್ಷ್ಮೀ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸ ನಿರ್ವಹಿಸುತ್ತಿರುವಂತಹ ಕಟ್ಟಡ ಕಾರ್ಮಿಕರು ಇವರೆಗೂ 60,230 ಫಲಾನುಭವಿಗಳು ನೋಂದಣಿಯಾಗಿರುತ್ತಾರೆ. ಇವರೆಲ್ಲರೂ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಹೇಳಿದರು.

 ಕಾರ್ಯನಿರ್ವಹಣೆ ಹೇಗೆ?: ಜಿಲ್ಲೆಯಲ್ಲಿರುವ ನೋಂದಾಯಿತ ಮತ್ತು ಅಸಂಘಟಿತ ಕಾರ್ಮಿಕರ ಮಾಹಿತಿ ಪಡೆದು, ಕಾರ್ಮಿಕ ಸಂಘಟನೆಗಳ ಮುಖಂಡರ ನೆರವಿನಿಂದ ಆಯಾ ಪ್ರದೇಶಗಳಲ್ಲಿ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಅಗತ್ಯ ಮಾತ್ರೆ, ಔಷಧಿಗಳನ್ನೂ ಉಚಿತವಾಗಿ ನೀಡಲಾಗುತ್ತದೆ. ಕಟ್ಟಡ ಕಾರ್ಮಿಕರು ನೋಂದಾಯಿತ ಕಾರ್ಡ್‌, ಅಸಂಘಟಿತ ಕಾರ್ಮಿಕರು ಇ- ಶ್ರಮ ಕಾರ್ಡ್‌ ತೋರಿಸುವ ಮೂಲಕ ಸೇವೆ ಪಡೆಯಬಹುದು ಎಂದು ವರಲಕ್ಷ್ಮೀ ಹೇಳಿದರು.

ಸಂಚಾರ ಕ್ಲಿನಿಕ್‌ ವಾಹನದಲ್ಲಿ ಏನೇನಿದೆ? : ಸಂಚಾರ ಆರೋಗ್ಯ ಕ್ಲಿನಿಕ್‌ ಅತ್ಯಾಧುನಿಕ ಸವಲತ್ತುಗಳನ್ನು ಹೊಂದಿದೆ. ಆಧುನಿಕ ಸ್ಟ್ರೆಚ್ಚರ್‌, ಬೆಡ್‌, ಆಕ್ಸಿಜನ್‌ ಪರಿಕರಗಳು, ವ್ಹೀಲ್‌ ಚೇರ್‌, ಪ್ರಯೋಗಾಲಯ ಸಲಕರಣೆಗಳನ್ನು ಹೊಂದಿದೆ. ಓರ್ವ ವೈದ್ಯ, ನರ್ಸ್‌, ಫಾರ್ಮಸಿಸ್ಟ್‌, ಲ್ಯಾಬ್‌ ಟೆಕ್ನಿಷಿಯನ್‌, ಚಾಲಕ ಮತ್ತು ಸಹಾಯಕ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಅಗತ್ಯ ಅರೋಗ್ಯ ಚಿಕಿತ್ಸೆ ದೊರೆಯಲಿದೆ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next