Advertisement

ಮಲಕಂಬ-ರೋಪ್‌ ಮಲ್ಲಕಂಬ ಸರ್ಧೆಗೆ  ಚಾಲನೆ

10:50 PM Jan 17, 2022 | Team Udayavani |

ಗಜೇಂದ್ರಗಡ: ಸಾವಿರಾರು ವರ್ಷಗಳ ಇತಿಹಾಸವಿರುವ ಗರಡಿ ಮನೆಯ ಕಲೆಯೊಂದು ವಿಶ್ವವಿದ್ಯಾಲಯ ಮಟ್ಟದ ಸ್ಪರ್ಧಾತ್ಮಕ ಕ್ರೀಡೆಯಾಗಿ ಹೊರಹೊಮ್ಮಿರುವುದು ಹೆಮ್ಮೆಯ ಸಂಗತಿ ಎಂದು ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಕಳಕಪ್ಪ ಬಂಡಿ ಹೇಳಿದರು. ತಾಲೂಕಿನ ನರೇಗಲ್ಲ ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯ ಅಂತರ್‌ ಮಹಾವಿದ್ಯಾಲಯ ಮಟ್ಟದ ಮಲ್ಲಕಂಬ ಹಾಗೂ ರೋಪ್‌ ಮಲ್ಲಕಂಬ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

Advertisement

ನಶಿಸಿ ಹೋಗುತ್ತಿರುವ ಗ್ರಾಮೀಣ ಭಾಗದ ಆಟಗಳಲ್ಲಿ ಇದು ಒಂದಾಗಿದೆ. ಮಲ್ಲಕಂಬವನ್ನು ಬಾಲ್ಯದಿಂದ ಆಡುತ್ತಾ ಬಂದಿರುವ ವ್ಯಕ್ತಿಗೆ ಯಾವುದೇ ರೀತಿಯ ರೋಗಗಳು ಬರುವುದಿಲ್ಲ ಹಾಗೂ ಎಷ್ಟೇಊಟ ಮಾಡಿದರುಕರಗಿಸಿಕೊಳ್ಳುವ ಶಕ್ತಿ ಇರುತ್ತದೆ ಎಂದರು. ಮಣ್ಣಿನಲ್ಲಿ ನಡೆಯುತ್ತಿದ್ದ ಹಳೆಯ ಆಟಗಳು ಆಧುನಿಕತೆಗೆ ತಕ್ಕಂತೆ ಹೊಸ ಸ್ವರೂಪ ಪಡೆದಿವೆ. ಅದರಲ್ಲೂ ನೆಲದ ಮೇಲೆ ಆಡುತ್ತಿದ್ದ ಕಬಡ್ಡಿ ಆಟ ಈಗ ಮ್ಯಾಟ್‌ ಮೇಲೆ ನಡೆಯುವ ವಿಶ್ವದ ಜನಪ್ರಿಯ ಕ್ರೀಡೆಯಾಗಿದೆ ಎಂದರು.

ಗ್ರಾಮೀಣ ಭಾಗದ ಬಡಮಕ್ಕಳಿಗೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಹೆಚ್ಚಿನ ಪ್ರಮಾಣದ ದುಡ್ಡು ಕೊಟ್ಟು ಶಿಕ್ಷಣ ಪಡೆಯಲು ಆಗುವುದಿಲ್ಲ ಎನ್ನುವ ಕಾರಣಕ್ಕೆ 25 ಸರ್ಕಾರಿ ಪ್ರೌಢಶಾಲೆ, 6 ವಸತಿ ಶಾಲೆ, 1 ಡಿಪ್ಲೋಮಾ ಕಾಲೇಜು, ಸರ್ಕಾರಿ ಪಿಯು, ಪದವಿ ಕಾಲೇಜುಗಳನ್ನು ಭೂದಾನಿಗಳ ಸಹಾಯ ಪಡೆದು ಆರಂಭಿಸಲಾಗಿದೆ. ಇದರ ಫಲವಾಗಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ ಜೀವನ ಕಂಡುಕೊಂಡಿರುವುದು ಖುಷಿ ನೀಡಿದೆ ಎಂದರು. ಪ್ರಾಚಾರ್ಯ ಜಿ.ಬಿ. ಹುಲ್ಲೂರ ಮಾತನಾಡಿ, ಪದವಿ ಮಟ್ಟದ ವಿದ್ಯಾರ್ಥಿಗಳು ತಮ್ಮ ದೈಹಿಕ ಸಾಮರ್ಥ್ಯ ಪ್ರದರ್ಶನ ಮಾಡಲು ಮಲ್ಲಕಂಬ ಸ್ಪರ್ಧೆ ವೇದಿಕೆ ನೀಡಿದೆ. ಕವಿವಿ ತಂಡಕ್ಕೆ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಮುಂದೆ ಹೆಚ್ಚಿನ ಅವಕಾಶಗಳು ದೊರೆಯಲಿವೆ ಎಂದರು. ಈ ಸಂದರ್ಭದಲ್ಲಿ ಚಿಗುರು ಸಂಚಿಕೆ ಹಾಗೂ ವಿದ್ಯಾರ್ಥಿ ಕೈಪಿಡಿ ಬಿಡುಗಡೆ ಮಾಡಲಾಯಿತು. ವಿವಿಧ ಜಿಲ್ಲೆಗಳ 35 ಕಾಲೇಜು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಮಲ್ಲಕಂಬದ ಮೇಲೆ ಸ್ಪರ್ಧಾರ್ಥಿಗಳು ನಡೆಸಿದ ಯೋಗದ ವಿವಿಧ ಆಸನಗಳಕಸರತ್ತಿಗೆ ಪ್ರೇಕ್ಷಕರು ಸಿಳ್ಳೆ, ಚಪ್ಪಾಳೆ ಹೊಡೆದು ಹುರಿದುಂಬಿಸಿದರು. ಬಿಜೆಪಿ ರೋಣ ಮಂಡಲ ಅಧ್ಯಕ್ಷ ಮುತ್ತು ಕಡಗದ, ಪಪಂ ಅಧ್ಯಕ್ಷೆ ಅಕ್ಕಮ್ಮ ಮಣ್ಣೋಡ್ಡರ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಬಸವರಾಜ ವಂಕಲಕುಂಟಿ, ಉಮೇಶ ಸಂಗನಾಳಮಠ, ಜ್ಯೋತಿ ಪಾಯಪ್ಪಗೌಡ್ರ, ಅಶೋಕ ಕಳಕೊಣ್ಣವರ ಇನ್ನಿತರರು ಇದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next