Advertisement

ಕನ್ನಡ ಕಂದಗಳು ತಬ್ಬಲಿಗಳಾಗುತ್ತಿವೆ: ಸರ್ವಾಧ್ಯಕ್ಷೆ ವಿಷಾದ

01:36 AM Feb 04, 2023 | Team Udayavani |

ಬೆಳ್ತಂಗಡಿ: ಇಂದು ಮಕ್ಕಳು ಮಾತೃಭಾಷೆ ಬಿಟ್ಟು ಬೇರಿಲ್ಲದ ಮರದಂತೆ, ತಾಯಿ ಇಲ್ಲದ ಕಂದನಂತೆ ತಬ್ಬಲಿಗಳಾಗಿವೆ. ಭಾಷೆಯಿಂದ ಬಾಲ್ಯವೇ ವಿಮುಖ ವಾಗುತ್ತಿದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷೆ ಹೇಮಾವತಿ ವೀ. ಹೆಗ್ಗಡೆ ವಿಷಾದ ವ್ಯಕ್ತಪಡಿಸಿದ್ದಾರೆ.

Advertisement

ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್‌ ವತಿ ಯಿಂದ ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭ ವನದ ಸಾರಾ ಅಬೂಬಕ್ಕರ್‌ ವೇದಿಕೆಯಲ್ಲಿ ಶುಕ್ರವಾರ ರಜತ ಸಂಭ್ರಮದ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂದು ಕನ್ನಡ ಶಾಲೆಗಳೆಂದರೆ ಪುಳಕವಿತ್ತು. ಬಸವಣ್ಣ, ಕನಕದಾಸರು, ಸರ್ವಜ್ಞರ ವಚನಗಳಲ್ಲಿ ಬಾಲ್ಯವನ್ನು ಅರಳಿಸಬಲ್ಲ ಸತ್ವವಿತ್ತು ಎಂದರಲ್ಲದೇ, ಜಿಲ್ಲೆಯಲ್ಲಿ ಪಂಜೆಯವರಿಂದ ಮಂಜಯ್ಯ ಹೆಗ್ಗಡೆವರೆಗೆ ಎಲ್ಲರೂ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿ ದರು ಎಂದರು.

ನಾವು ಪೂರ್ವಿಕರ ಸಾಹಿತ್ಯವನ್ನು ಮತ್ತೆ ಓದುವ ಸಂಸ್ಕೃತಿ ರೂಢಿಸಿಕೊಂಡರೆ ಸಾಹಿತ್ಯಕ್ಕೆ ಗೌರವ ಸಲ್ಲಿಸಿದಂತಾಗಲಿದೆ. ಅದಕ್ಕೆ ಇಂತಹ ಸಮ್ಮೇಳನಗಳಾದಲ್ಲಿ ಪರಂಪರೆಯನ್ನು ಮೆಲುಕು ಹಾಕಿದಂ ತಾಗುತ್ತದೆ. ಇತ್ತೀಚೆಗೆ ನಮ್ಮನ್ನಗಲಿದ ಸಾರಾ ಅಬೂಬಕ್ಕರ್‌ ಮಹಿಳೆಯರ ನೋವು ನಲಿವುಗಳಿಗೆ ಧ್ವನಿಯಾಗಿ ಮುಸ್ಲಿಂ ಸಂವೇದನೆಗಳನ್ನು ಪರಿಣಾಮಕಾರಿಯಾಗಿ ಅನಾವರಣಗೊ ಳಿಸಿದ ಮಹತ್ವದ ಲೇಖಕಿ ಎಂದು ಹೇಳಿದರು.

ಬರೆಯುವಂತೆ ಓದುವ, ಓದುವಂತೆ ಮಾತನಾಡುವ, ಮಾತನಾಡಿದಂತೆ ಮುನ್ನಡೆಯುವ ಜನರು ಕರಾವಳಿಗರು. ಯಕ್ಷಗಾನ ಮತ್ತು ನಾಟಕ ಕ್ಷೇತ್ರವನ್ನು ಆರಾಧಿಸುತ್ತ ಸಂಪ್ರದಾಯವನ್ನು ಶ್ರದ್ಧೆ ಯಿಂದ ಆಚರಿಸುತ್ತ ಜನ್ಮಭೂಮಿಯನ್ನುಕಟ್ಟಿದ ಕರ್ಮಜೀವಿಗಳು ಎಂದು ಸಮ್ಮೇಳನ ಉದ್ಘಾಟಿಸಿದ ಕಸಾಪ ರಾಜ್ಯಾಧ್ಯಕ್ಷ ಡಾ| ಮಹೇಶ್‌ ಜೋಷಿ ಬಣ್ಣಿಸಿದರು.

Advertisement

ಕನ್ನಡವನ್ನು ಬೆಳೆಸುವಲ್ಲಿ ಕರಾವಳಿಗರ ಕೊಡುಗೆ ಅಪಾರ. ದಕ್ಷಿಣ ಕನ್ನಡ ಉತ್ತರ ಕನ್ನಡ ಎರಡೂ ಕನ್ನಡವನ್ನು ಹಾಸೊ ದ್ದಿವೆ. ರಾಘವೇಂದ್ರ ತೀರ್ಥರಿಂದ ಕನಕದಾಸರ ವರೆಗೆ ಕನ್ನಡಕ್ಕೆ ಮಹತ್ವ ಸಿಕ್ಕಿದೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಡಾ| ಎಂ.ಪಿ. ಶ್ರೀನಾಥ್‌ ಆಶಯ ನುಡಿಗಳನ್ನಾಡಿದರು. ಪ್ರಧಾನ ಅಭ್ಯಾಗತರಾಗಿ ಸಮ್ಮೇಳನ ಸಂಯೋಜನ ಸಮಿತಿ ಗೌರವಾಧ್ಯಕ್ಷ ಡಿ. ಹರ್ಷೇಂದ್ರ ಕುಮಾರ್‌, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ| ಎಂ. ಪ್ರಭಾಕರ ಜೋಷಿ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಪ್ರದೀಪ್‌ ಕುಮಾರ್‌ಕಲ್ಕೂರ, ಉದ್ಯಮಿ ರಘುನಾಥ ಸೋಮ ಯಾಜಿ, ಕಾಸರಗೋಡು ಜಿಲ್ಲಾ ಕಸಾಪ ಅಧ್ಯಕ್ಷ ಎಸ್‌.ವಿ.ಭಟ್‌, ಕಸಾಪ ಜಿ. ಗೌ. ಕಾರ್ಯದರ್ಶಿ ರಾಜೇಶ್ವರಿ ಎಂ., ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಡಿ.ಯದುಪತಿ ಗೌಡ, ರಾಜ್ಯ ಕಸಾಪ ಸದಸ್ಯ ಮಾಧವ ಎಂ.ಕೆ., ಉಜಿರೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ ಆರ್‌. ಶೆಟ್ಟಿ, ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಭಟ್‌, ವಿವಿಧ ತಾಲೂಕಿನ ಅಧ್ಯಕ್ಷರು ಉಪಸ್ಥಿತರಿದ್ದರು.ಸಮ್ಮೇಳನ ಸಂಯೋಜನ ಸಮಿತಿ ಅಧ್ಯಕ್ಷ ಶರತ್‌ಕೃಷ್ಣ ಪಡುವೆಟ್ನಾಯ ಸ್ವಾಗತಿಸಿದರು. ಶಾಸಕ ಹರೀಶ್‌ ಪೂಂಜಾ ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಿ ದರು.

ಪ್ರಾಧ್ಯಾಪಕರಾದ ಡಾ| ಬಿ.ಎ. ಕುಮಾರ ಹೆಗ್ಡೆ, ಅನುರಾಧಾ ಕೆ. ರಾವ್‌ ನಿರ್ವಹಿಸಿದರು. ವಾಣಿ ಕಾಲೇಜು ವಿದ್ಯಾಥಿಗಳು ನಾಡಗೀತೆ, ಎಸ್‌ಡಿಎಂ ಕಾಲೇಜು ವಿದ್ಯಾರ್ಥಿಗಳು ರೈತಗೀತೆ ಹಾಡಿದರು.ಉಜಿರೆ ಬಸ್‌ ನಿಲ್ದಾಣದಿಂದ ಸಮ್ಮೇಳನದ ಸರ್ವಾಧ್ಯಕ್ಷರನ್ನು ಮತ್ತು ಗಣ್ಯರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.

ಸಮ್ಮಾನ
ಕಸಪಾ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಹಿರಿಯ ನೃತ್ಯ ಗುರು ಪಿ.ಕಮಲಾಕ್ಷ ಆಚಾರ್‌, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ್‌, ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್‌ ಶೆಟ್ಟಿ, ಹಿರಿಯ ರಂಗ ಕಲಾವಿದ ದೇವದಾಸ್‌ ಕಾಪಿಕಾಡ್‌ ಅವರನ್ನು ಸಮ್ಮಾನಿಸಲಾಯಿತು.

ವಿದೇಶಿಯರಿಂದಲೂ ಸಿಕ್ಕಿದೆ ಕನ್ನಡಕ್ಕೆ ಕೊಡುಗೆ
ಜಗತ್ತಿನ ಪರಿಪೂರ್ಣ ಭಾಷೆಗಳಲ್ಲಿ ಕನ್ನಡವೂ ಒಂದು. ಉಳಿದವು ಸಂಸ್ಕೃತ ಮತ್ತು ಗ್ರೀಕ್‌. ಕನ್ನಡ ನಾಡಿನಲ್ಲಿ ಹುಟ್ಟಿದವರು ಪುಣ್ಯಮಾಡಿದವರು. ಹರ್ಮನ್‌ ಮೋಗ್ಲಿ ಕನ್ನಡ ಪತ್ರಿಕೋಧ್ಯಮಕ್ಕೆ ಭದ್ರ ಬುನಾದಿ ಹಾಕಿದವರು. ಕರಾವಳಿಯಲ್ಲಿ ತುಳು, ಕೊಂಕಣಿ, ಬ್ಯಾರಿ ಭಾಷೆ ಮಾತಾಡುವ ಸಾಹಿತಿಗಳಿರುವ ಭಾವೈಕ್ಯತೆಯ ಧ್ಯೇಯವಿರುವ ನಾಡು. ಎಲ್ಲರೂ ಒಂದೇ ಕುಟುಂಬ ಎಂಬಂತೆ ಬದುಕುವ ಸಾಮರಸ್ಯವಿರುವ ನಾಡಿಗೆ ಬಂದಿರುವುದು ಹರ್ಷ ತಂದಿದೆ ಎಂದು ಡಾ| ಮಹೇಶ್‌ ಜೋಷಿ ಹೇಳಿದರು.

ಕನ್ನಡ ನುಡಿಗೆ ಸಾರ್ವಭೌಮ ಸ್ಥಾನ
ನವೀನ ಕಾಲಕ್ಕೆ ಅನುಗುಣವಾಗಿ ತಂತ್ರಜ್ಞಾನದ ಮೂಲಕ ಮಕ್ಕಳಿಗೆ ಸಾಹಿತ್ಯ ತಲುಪಿಸಬೇಕಿದೆ. ಕನ್ನಡವನ್ನು ಉಳಿಸುವ ಹೊಣೆ ಕೇವಲ ಸರಕಾರದ್ದು, ಸಾಹಿತ್ಯ ಪರಿಷತ್‌ ನದ್ದಾಗದೇ ನಮ್ಮೆಲ್ಲರದ್ದೂ ಆಗಬೇಕು. ಲಕ್ಷಾಂತರ ರೂ. ಖರ್ಚುಮಾಡಿ ಕಟ್ಟುವ ಮನೆಯಲ್ಲಿ ಪುಟ್ಟ ಗ್ರಂಥಾಲಯಕ್ಕೆ ಜಾಗ ನೀಡಿ. ನಾಡಿನಲ್ಲಿ ಕನ್ನಡ ನುಡಿಗೆ ಸಾರ್ವಭೌಮ ಸ್ಥಾನ ಸಿಗಲಿ ಎಂದು ಸರ್ವಾಧ್ಯಕ್ಷೆ ಹೇಮಾವತಿ ವೀ.ಹೆಗ್ಗಡೆ ಆಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next