Advertisement
ಕೇಂದ್ರದ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹುಬ್ಬಳಿಯಿಂದ ವರ್ಚುವಲ್ ವೇದಿಕೆ ಮೂಲಕ ಸೊಲ್ಲಾಪುರ-ಮೀರಜ್ ಎಕ್ಸ್‌ಪ್ರೆಸ್ ರೈಲನ್ನು ಕಲಬುರಗಿ-ಕೊಲ್ಲಾಪುರ ವಿಸ್ತರಣೆಯ ಆರಂಭಿಕ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು.
Related Articles
Advertisement
ಕೇಂದ್ರದ ಕಲ್ಲಿದ್ದಲ್ಲು ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ರಾವ್ ಸಾಹೇಬ್ ದಾದಾರಾವ್ ಪಟೀಲ ದಾನ್ವೆ ಮಾತನಾಡಿ, ಧಾರ್ಮಿಕ ಕ್ಷೇತ್ರ ಕೊಲ್ಲಾಪುರದ ಮಹಾಲಕ್ಷ್ಮೀ ದೇಗುಲಕ್ಕೆ ಸಂಪರ್ಕ ಸಾಧಿಸುವ ಕಲಬುರಗಿ-ಕೊಲ್ಲಾಪುರ ರೈಲು ಆರಂಭದಿಂದ ಈ ಭಾಗದ ರೈತರು, ಉದ್ಯಮಿಗಳು, ಯಾತ್ರಿಗಳು, ದೈನಂದಿನ ಓಡಾಟ ಮಾಡುವರಿಗೆ ತುಂಬಾ ಅನುಕೂಲವಾಗಲಿದೆ ಎಂದರು.
ಸಂಸದ ಡಾ|ಉಮೇಶ ಜಾಧವ, ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ, ಸೊಲ್ಲಾಪುರ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಶೈಲೇಶ ಗುಪ್ತಾ, ಸೀನಿಯರ್ ಡಿವಿಜನ್ ಅಪರೇಟಿಂಗ್ ಮ್ಯಾನೇಜರ್ ಪ್ರದೀಪ ಹಿರಾಡೆ, ಹರ್ಷಿತ್ ಬಿಸ್ನಾಯ್, ಕಲಬುರಗಿ ರೈಲು ನಿಲ್ದಾಣದ ಸ್ಟೇಷನ್ ಮ್ಯಾನೇಜರ್ ಆರ್.ಮೋನಿ ಇದ್ದರು.