Advertisement

ಬಿತ್ತನೆ ಬೀಜ ವಿತರಣೆಗೆ ಚಾಲನೆ

08:20 AM May 24, 2020 | mahesh |

ಬೈಲಹೊಂಗಲ: ರೈತರಿಗೆ ಸರಕಾರ ಸಬ್ಸಿಡಿ ದರದಲ್ಲಿ ಬೀಜ ವಿತರಿಸುತ್ತಿದ್ದು, ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು. ತಾಲೂಕಿನ ನೇಸರಗಿ ಗ್ರಾಮದ ಪಿಕೆಪಿಎಸ್‌ದಲ್ಲಿ 2020-21ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳನ್ನು ವಿತರಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಸೋಯಾಬೀನ್‌ ಹೆಚ್ಚು ಬೆಳೆಯುತ್ತಿದ್ದು, ಅಗತ್ಯ ಪ್ರಮಾಣದಲ್ಲಿ ಬೀಜ ದಾಸ್ತಾನು ಮಾಡಲಾಗಿದೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದರು.

Advertisement

ಕೃಷಿ ಅಧಿಕಾರಿ ಆರ್‌.ಐ. ಕುಂಬಾರ ಮಾತನಾಡಿ, ಪ್ರಸ್ತುತ ಮುಂಗಾರು ಹಂಗಾಮಿಗೆ ಉತ್ತಮ ಮಳೆ ನಿರೀಕ್ಷೆ ಇದ್ದು, ರೈತರಿಗೆ ಸೋಯಾಬೀನ್‌, ತೊಗರಿ, ಹೆಸರು, ಉದ್ದು ವಿತರಣೆ ಮಾಡಲಾಗುತ್ತಿದೆ. ರೈತರ ಹಿಡುವಳಿ ಆಧಾರದ ಮೇಲೆ ಗರಿಷ್ಠ 3 ಪ್ಯಾಕೆಟ್‌ ಬೀಜ ವಿತರಿಸಲಾಗುವುದು ಎಂದರು.

ಪಿಕೆಪಿಎಸ್‌ ಅಧ್ಯಕ್ಷ ರಾಜಶೇಖರ ಎತ್ತಿನಮನಿ, ಗ್ರಾಪಂ ಅಧ್ಯಕ್ಷ ಸತಾರ ಮೋಕಾಶಿ, ಜಿಪಂ ಮಾಜಿ ಅಧ್ಯಕ್ಷ ಎಸ್‌.ಎಫ್‌. ದೊಡ್ಡಗೌಡರ, ಮಲ್ಲೇಶ ಮಾಳನ್ನವರ, ನಿಂಗಪ್ಪ ತಳವಾರ, ಕೆಂಚಪ್ಪ ಕಳ್ಳಿಬಡ್ಡಿ, ಶಂಕರ ತಿಗಡಿ, ಕೃಷಿ ಸಹಾಯಕ ಅಧಿಕಾರಿ ಎಸ್‌.ಟಿ. ಕಳಸಪ್ಪನ್ನವರ, ಡಿಸಿಸಿ ಬ್ಯಾಂಕ್‌ ನೀರಿಕ್ಷಕ ಸುರೇಶ ಮತ್ತಿಕೊಪ್ಪ, ಪಿಕೆಪಿಎಸ್‌ ಕಾರ್ಯದರ್ಶಿ ವಿಶ್ವನಾಥ ಕೂಲಿನವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next