Advertisement

ಮಣಿಪಾಲ ಆರೋಗ್ಯ ಕಾರ್ಡ್‌ ನೋಂದಣಿಗೆ ಚಾಲನೆ

01:17 AM Jun 05, 2022 | Team Udayavani |

ಮಣಿಪಾಲ: ಸಾರ್ವ ಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಕೈಗೆಟಕುವ ದರದಲ್ಲಿ ದೊರಕಿಸಿಕೊಡುವ ಉದ್ದೇಶ ದಿಂದ ನೀಡಲಾಗುವ ಮಣಿಪಾಲ ಆರೋಗ್ಯ ಕಾರ್ಡ್‌-2022ರ ನೋಂದಣಿ ಪ್ರಕ್ರಿಯೆಗೆ ಶನಿವಾರ ಕಸ್ತೂರ್ಬಾ ಆಸ್ಪತ್ರೆ ಯಲ್ಲಿ ಶಾಸಕ ಕೆ. ರಘುಪತಿ ಭಟ್‌ ಪ್ರಥಮ ಚಾಲನೆ ನೀಡಿದರು.

Advertisement

ಕೆಎಂಸಿ ಆಸ್ಪತ್ರೆ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಯಾಗಿದ್ದು, ದೂರದ ಜಿಲ್ಲೆಗಳಿಂದಲೂ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಯೋಜನೆಯ ಮೂಲಕ ಲಕ್ಷಾಂತರ ಜನರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಭಟ್‌ ಶ್ಲಾಘಿಸಿದರು.

ಅಧ್ಯಕ್ಷೆ ವಹಿಸಿದ್ದ ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಮಾತನಾಡಿ, 21 ವರ್ಷಗಳಿಂದ ನಾವು ಸಾಮಾಜಿಕ ಕಾಳಜಿಯೊಂದಿಗೆ ರಿಯಾಯಿತಿ ದರದಲ್ಲಿ ಲಕ್ಷಾಂತರ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದ್ದೇವೆ. ವರ್ಷದಿಂದ ವರ್ಷಕ್ಕೆ ನೋಂದಣಿ ಹೆಚ್ಚುತ್ತಿರುವುದು ಆರೋಗ್ಯ ಕಾರ್ಡ್‌ನ ಜನಪ್ರಿಯತೆಯನ್ನು ತೋರಿಸುತ್ತದೆ. ಕಾರ್ಡ್‌ ಖರೀದಿಸಲು ಹೂಡಿಕೆ ಮಾಡಿದ ಹಣ ಕೇವಲ ಎರಡು ಅಥವಾ ಮೂರು ಸಲದ ಬಳಕೆಯಲ್ಲಿ ರಿಯಾಯಿತಿಯ ರೂಪದಲ್ಲಿ ವಾಪಸ್‌ ಪಡೆದಂತಾಗುತ್ತದೆ ಎಂದರು.

ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್‌ ಮಾತನಾಡಿ, 2000ನೇ ಇಸವಿಯಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಜನರಿಗೆ ಆರಂಭಿಸಿದ ಈ ಯೋಜನೆ ಪ್ರಸ್ತುತ ಕರಾವಳಿ ಕರ್ನಾಟಕ, ಮಧ್ಯ ಕರ್ನಾಟಕದ 12ಕ್ಕೂ ಹೆಚ್ಚು ಜಿಲ್ಲೆಗಳಿಗೆ ವಿಸ್ತರಣೆಯಾಗಿದೆ. ಕೇರಳ, ಗೋವಾದಲ್ಲೂ ಸೌಲಭ್ಯ ಪಡೆಯುತ್ತಿದ್ದಾರೆ. ಈ ವರ್ಷದಿಂದ ಮೊಬೈಲ್‌ ಸಂಖ್ಯೆಗೆ ಮಿಸ್‌ಕಾಲ್‌ ಕೊಡುವ ಮೂಲಕ ಅಥವಾ ಆರೋಗ್ಯ ಎಂದು ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸಿ ಯಾವುದೇ ಸಮಯದಲ್ಲಿ ಕಾರ್ಡ್‌ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದರು.

2021ರ ಸಾಲಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮಣಿಪಾಲ ಆರೋಗ್ಯಕಾರ್ಡ್‌ ಪ್ರತಿನಿಧಿಯನ್ನು ಸಹ ಕುಲಪತಿಗಳಾ ದ ಡಾ| ಪಿ.ಎಲ್‌.ಎನ್‌.ಜಿ. ರಾವ್‌ ಮತ್ತು ಡಾ| ದಿಲೀಪ್‌ ಜಿ. ನಾಯ್ಕ ಸಮ್ಮಾನಿಸಿದರು.

Advertisement

ಸಹ ಕುಲಪತಿ ಡಾ| ವೆಂಕಟರಾಯ ಎಂ. ಪ್ರಭು ಅವರು ಮಣಿಪಾಲ ಆರೋಗ್ಯಕಾರ್ಡ್‌ 2022ರ ಮಾಹಿತಿ ಕರ ಪತ್ರ ಬಿಡುಗಡೆ ಮಾಡಿದರು.

ಮಣಿಪಾಲ ಕೆಎಂಸಿ ಡೀನ್‌ ಡಾ| ಶರತ್‌ ಕೆ. ರಾವ್‌ ಸ್ವಾಗತಿಸಿ, ಮಂಗಳೂರು ಕೆಎಂಸಿ ಡೀನ್‌ ಡಾ| ಬಿ. ಉಣ್ಣಿಕೃಷ್ಣನ್‌ ವಂದಿಸಿದರು. ಕೃಷ್ಣ ಪ್ರಸಾದ್‌ ನಿರೂಪಿಸಿದರು.

ಕಾರ್ಡ್‌ನ ಸೌಲಭ್ಯಗಳು
ಈ ಕಾರ್ಡ್‌ ಹೊಂದಿರುವವರಿಗೆ ತಜ್ಞಮತ್ತು ವಿಶೇಷ ತಜ್ಞ ವೈದ್ಯರ ಸಮಾ ಲೋಚನೆ ಶುಲ್ಕದಲ್ಲಿ ಶೇ. 50ರ ರಿಯಾಯಿತಿ (ಒಪಿಡಿ/ನಾನ್‌ ಒಪಿಡಿ), ಹೊರರೋಗಿ ಪ್ರಯೋಗಾಲಯ ಪರೀಕ್ಷೆ ಶೇ. 30ರ ರಿಯಾಯಿತಿ, ಹೊರರೋಗಿ ರೇಡಿಯಾಲಜಿ ಪರೀಕ್ಷೆಗಳು (ಸಿಟಿ, ಎಂಆರ್‌ಐ, ಅಲ್ಟ್ರಾಸೌಂಡ್‌ ಇತ್ಯಾದಿ), ಶೇ. 20ರ ರಿಯಾಯಿತಿ, ಹೊರರೋಗಿ ವಿಧಾನಗಳಲ್ಲಿ ಮತ್ತು ಮಧುಮೇಹ ಪಾದ ತಪಾಸಣೆಯಲ್ಲಿ ಶೇ. 20ರ ರಿಯಾಯಿತಿ, ಹೊರರೋಗಿ ಡಯಾಲಿಸಿಸ್‌ 100 ರೂ., ಔಷಧಾಲಯಗಳಲ್ಲಿ ಶೇ. 12ರ ವರೆಗೆ ರಿಯಾಯಿತಿ, ಸಾಮಾನ್ಯ ವಾರ್ಡ್‌ನಲ್ಲಿ ಒಳರೋಗಿ ಯಾದಲ್ಲಿ ಉಪಯೋಗವಾಗುವ ವಸ್ತುಗಳನ್ನು ಮತ್ತು ಪ್ಯಾಕೇಜ್‌ಗಳನ್ನು ಹೊರತುಪಡಿಸಿ ಶೇ. 25ರ ರಿಯಾಯಿತಿ ದೊರೆಯಲಿದೆ.

ಶುಲ್ಕ ವಿವರ
1 ವರ್ಷದ ಯೋಜನೆಯಲ್ಲಿ ಸದಸ್ಯತ್ವ ಒಬ್ಬರಿಗೆ 300 ರೂ., ಕೌಟುಂಬಿಕ ಕಾರ್ಡ್‌ ಅಂದರೆ ಕಾರ್ಡುದಾರ, ಅವರ ಸಂಗಾತಿ 25 ವರ್ಷದ ಒಳಗಿನ ಮಕ್ಕಳಿಗೆ 600 ರೂ. ಮತ್ತು ಕುಟುಂಬ ಪ್ಲಸ್‌ ಯೋಜನೆ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳು ಮತ್ತು 4 ಪೋಷಕರು (ತಂದೆ, ತಾಯಿ, ಅತ್ತೆ, ಮಾವ) 750 ರೂ., ಎರಡು ವರ್ಷದ ಯೋಜನೆಯಲ್ಲಿ ಒಬ್ಬರಿಗೆ 500 ರೂ., ಕುಟುಂಬಕ್ಕೆ 800 ರೂ. ಮತ್ತು ಕೌಟುಂಬಿಕ ಪ್ಲಸ್‌ ಯೋಜನೆಗೆ 950 ರೂ. ಆಗಿರುತ್ತದೆ.

ಸೌಲಭ್ಯ ಎಲ್ಲಿ ಲಭ್ಯ?
ಮಣಿಪಾಲ, ಕಾರ್ಕಳ, ಮಂಗಳೂರು, ಗೋವಾ, ಕಟೀಲಿನಲ್ಲಿ ರುವ ಮಣಿಪಾಲ ಗುಂಪಿನ ಆಸ್ಪತ್ರೆಗಳಲ್ಲಿ ಪ್ರಯೋಜನ ಪಡೆಯಬಹುದು. ಸಾರ್ವಜನಿಕರು ಆರೋಗ್ಯಕಾರ್ಡ್‌ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 0820 – 2923748ಕ್ಕೆ ಕರೆ ಮಾಡಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next