Advertisement

ಕೆರೆಗಳಿಗೆ ನೀರು ಹರಿಸುವ ಯೋಜನೆಗಿಂದು ಚಾಲನೆ

03:17 PM Sep 20, 2018 | Team Udayavani |

ಚನ್ನರಾಯಪಟ್ಟಣ: ತಾಲೂಕಿನ ಮೂಲಕವೇ ಹೇಮಾವತಿ ನದಿಯ ನೀರು ಮಂಡ್ಯ, ತುಮಕೂರು ಹಾಗೂ ಮೈಸೂರು ಜಿಲ್ಲೆಗೆ ನೀರು ಹರಿದರೂ ಕೂಡ ತಾಲೂಕು ಬರಪೀಡಿತವಾಗಿತ್ತು. ಹಲವು ವರ್ಷಗಳಿಂದ ನೀರಾವರಿ ಸೇರಿದಂತೆ ಅನೇಕ ಯೋಜನೆಗಳ ಬೇಡಿಕೆ ಈಡೇರಿಕೆಗೆ ಈಗ ಸಕಾಲ ಬಂದಿದೆ. ಬುಧವಾರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

Advertisement

ಹಿರೀಸಾವೆ ಹೋಬಳಿಯ ರೈತರ ದಶಕಗಳ ಕನಸ್ಸಾಗಿದ್ದ ತೋಟಿಕೆರೆ ನೀರಾವರಿ ಯೋಜನೆಗೆ ಅಂತೂ- ಇಂತೂ ನನಸಾಗುವ ಶುಭಗಳಿಗೆ ಕೂಡಿಬಂದಿದ್ದು, ಸದ್ಯ ವ್ಯಾಪ್ತಿಯ ತೋಟಿ ಗ್ರಾಮದ ಕೆರೆಯ ಆವರಣ ದಲ್ಲಿ ತೋಟಿಕೆರೆ ನೀರಾವರಿ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸುವ ಮೂಲಕ ತಾಲೂಕು ಹಾಗೂ ಹಿರೀಸಾವೆ ಹೋಬಳಿಯ ನೀರಾವರಿ ಯೋಜನೆಗಳಿಗೆ ಮುನ್ನುಡಿ ಬರೆಯಲಿದ್ದಾರೆ.
 
ಕಳೆದ 15 ವರ್ಷಗಳಿಂದ ಹೋಬಳಿ ವ್ಯಾಪ್ತಿಯಲ್ಲಿ ವಾಡಿಕೆಯಂತೆ ಮಳೆಯಾಗದ ಕಾರಣ ಯಾವುದೇ ಕೆರೆ-ಕಟ್ಟೆಗಳಲ್ಲಿ ನೀರಿಲ್ಲ, ಅಂತರ್ಜಲವೂ ಬತ್ತಿದೆ. ಪರಿ ಣಾಮ ತೆಂಗು ಬೆಳೆ ನಾಶವಾಗಿದ್ದು, ಜನ- ಜಾನು ವಾರುಗಳಿಗೂ ಕುಡಿವ ನೀರಿಗೆ ತೀರ್ವ ಅಭಾವ ಸೃಷ್ಟಿಯಾಗಿದೆ.

ಜಿಲ್ಲೆಯ ಬರಪೀಡಿತ ತಾಲೂಕುಗಳಲ್ಲಿ ಚನ್ನರಾಯ ಪಟ್ಟಣವು ಒಂದಾದರೇ, ತಾಲೂಕಿನಲ್ಲಿ ಹಿರೀಸಾವೆ ಹೋಬಳಿಯು ತೀವ್ರ ಬರಪೀಡಿತ ಪ್ರದೇಶ. ಕೃಷಿ ಚಟುವಟಿಕೆಯನ್ನು ಬದಿಗೊತ್ತಿರುವ ಅದೆಷ್ಟೋ ಕುಟುಂಬಗಳು ದುಡಿಮೆ ಹರಸಿ ಪಟ್ಟಣ ಪ್ರದೇಶಗಳಿಗೆ ಗುಳೆ ಹೋಗಿವೆ. ಸದ್ಯ ಈ ನೀರಾವರಿ ಯೋಜನೆ ಯಿಂದ ಕೆರೆಗಳು ತುಂಬಿದರೆ ಅದೇ ಕುಟುಂಬಗಳು ಗ್ರಾಮ ಸೇರುವ ಸಾಧ್ಯತೆಯಿದೆ.

 ತೋಟಿ ಗ್ರಾಮದ ಈ ದೊಡ್ಡ ಕೆರೆಯಲ್ಲಿ ನೀರು ತುಂಬಿಸಿದರೆ ನಿಂಬೇಹಳ್ಳಿ, ಹೊಸಹಳ್ಳಿ, ಪುರ, ನಾಗನ ಹಳ್ಳಿ, ಮೆಳ್ಳಹಳ್ಳಿ, ಹೊಸೂರು, ಕರಿಕ್ಯಾತನಹಳ್ಳಿ ಸೇರಿ ದಂತೆ ಸುಮಾರು 15 ಗ್ರಾಮಗಳ ವ್ಯಾಪ್ತಿಯಲ್ಲಿ ಅಂತ ರ್ಜಲವು ಚೇತರಿಕೆ ಕಾಣಲಿದ್ದು, ತೆಂಗು ಬೆಳೆಗೆ ಹೆಚ್ಚು ಅನುಕೂಲವಾಗಲಿದೆ,

ಸಿಎಂಗೆ ಸ್ವಾಗತಕ್ಕೆ ಭರ್ಜರಿ ಸಿದ್ದತೆ: ತೋಟಿಕೆರೆ ನೀರಾವರಿ ಯೋಜನೆಗೆ ಶಂಖುಸ್ಥಾಪನೆ ನೆರವೇರಿಸಲು ಗುರುವಾರ ಬೆಳಗ್ಗೆ 10 ಗಂಟೆಗೆ ಆಗಮಿಸಲಿರುವ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಅವರನ್ನು ಅದ್ಧೂರಿಯಿಂದ ಸ್ವಾಗತಿಸಲು ಜಿಲ್ಲಾ ಜೆಡಿಎಸ್‌ ಹಾಗೂ ಹಿರೀಸಾವೆ ಹೋಬಳಿಯ ರೈತ ಸಂಘಗಳು ಹಾಗೂ ಸಾರ್ವಜನಿಕರಿಂದ ತೋಟಿ ಗ್ರಾಮದ ಕೆರೆ ಯಂಗಳದಲ್ಲಿ ಈಗಾಗಲೇ ಶಂಕು ಸ್ಥಾಪನಾ ಕಾರ್ಯ ಕ್ರಮಕ್ಕೆ ವೇದಿಕೆ ಸಿದ್ಧಗೊಂಡಿದೆ. ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು, ಜಿಲ್ಲಾ ಉಸ್ತುವಾರಿ ಸಚಿವ ಹೆಚ್‌.ಡಿ.ರೇವಣ್ಣ, ರಾಜ್ಯ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌, ಶ್ರವಣ ಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್‌.ಬಾಲಕೃಷ್ಣ, ಅರಸಿ ಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ, ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ, ಬೇಲೂರು ಕ್ಷೇತ್ರದ ಲಿಂಗೇಶ್‌ ಮತ್ತು ಸಕಲೇಶಪುರ ಕ್ಷೇತ್ರದ ಶಾಸಕ ಕುಮಾರಸ್ವಾಮಿ ಸೇರಿದಂತೆ ಜಿಪಂ, ತಾಪಂ ಸದಸ್ಯರು ಭಾಗ ವಹಿಸಲಿದ್ದಾರೆ.

Advertisement

ರೈತರಲ್ಲಿ ಆಶಾ ಭಾವನೆ ಮಾಜಿ ಪ್ರಧಾನ ಮಂತ್ರಿ ಹೆಚ್‌.ಡಿ.ದೇವೇಗೌಡರಿಗೆ ಹಾಗೂ ಹೆಚ್‌.ಡಿ.ರೇವಣ್ಣನವರಿಗೆ ರಾಜಕೀಯವಾಗಿ ಶಕ್ತಿ ನೀಡಿದಂತಹ ದಂಡಿಗನಹಳ್ಳಿ ಹೋಬಳಿಗೆ ಸೇರಿದ ಆಲಗೊಂಡನಹಳ್ಳಿ ಹಾಗೂ ಕಾಚೇನ
ಹಳ್ಳಿ ಏತ ನೀರಾವರಿ ಯೋಜನೆಗಳು 1991 ರಲ್ಲಿ ಶಂಕುಸ್ಥಾಪನೆಯಾದರೂ ಸಹ ಆ ಭಾಗದ ರೈತರ ಕೆರೆಗಳಿಗೆ ನೀರು ತುಂಬಿಸಿಲ್ಲ. ಕಾಚೇನಹಳ್ಳಿ ಏತ ನೀರಾವರಿಯ ಮೋದಲನೇ ಹಂತದಿಂದ ಕೆಲವು ಕೆರೆಗಳಿಗೆ ನೀರು ತುಂಬಿಸಿದ್ದನ್ನು ಬಿಟ್ಟರೆ 2 ನೇ ಹಂತದ ಕಾಮಗಾರಿ ಸಂಪೂರ್ಣವಾಗಿಲ್ಲ. ರೈಲ್ವೆ ಮೇಲ್ಸೇತುವೆ ಪೂರ್ಣವಾಗಿಲ್ಲ. ದಂಡಿಗನಹಳ್ಳಿ ಬಳಿ ರಸ್ತೆಯಿಂದ ಆಚೆಗೆ ನೀರು ಹರಿಸಲು ಕಾಲುವೆ ತೋಡಲು ಅಡ್ಡವಾಗಿರುವ ದೊಡ್ಡ ಬಂಡೆಯನ್ನು ಒಡೆದು ಕಾಮಗಾರಿ ಪೂರ್ಣ ಗೊಳಿಸಿಲ್ಲ. ಈಗ 3ನೇಹಂತದ ಶಂಕುಸ್ಥಾಪನೆ ಯಾಗುತ್ತಿದೆ. ಆ ಭಾಗದ ರೈತರು ನಮ್ಮ ಜಿಲ್ಲೆಯವರೇ ಮುಖ್ಯಮಂತ್ರಿಯಾಗಿರುವುದ ರಿಂದ ಈಗಲಾದರೂ ಪೂರ್ಣಗೊಳ್ಳುತ್ತದೆ ಎಂಬ ಆಶಾ ಭಾವನೆ ಮೂಡಿದೆ.

ಯೋಜನೆಗಳಿಗೆ ಶಂಕುಸ್ಥಾಪನೆ  ದಂಡಿಗನಹಹಳ್ಳಿ ಹೋಬಳಿಯ ಕಾಚೇನಹಳ್ಳಿ ಬಳಿ ಹೇಮಾವತಿ ನದಿಯಿಂದ 3ನೇ ಹಂತಕ್ಕೆ ನೀರು ಒದಗಿಸುವ ಏತ ನೀರಾವರಿ ಯೋಜನೆ. ಆನೆಕೆರೆ ಶಂಭುದೇವರ ಕೆರೆಯಿಂದ ನೀರೆತ್ತಿ ತಾಲೂಕಿನ 26 ಕೆರಗಳಿಗೆ ನೀರು ಹ ರಿಸುವ ಆಲ ಗೊಂಡನಹಳ್ಳಿ ಏತನೀರಾವಾರಿ ಯೋಜನೆ. ಬಾಗೂರು ನವಿಲೆ ಸುರಂಗದ ನಿರ್ಗಮನ ದಿಂದ ನೀರನ್ನು ಎತ್ತಿ ಕುಡಿಯುವ ನೀರಿಗಾಗಿ ಬಾಗೂರು ಹೋಬಳಿಯ 19 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

25 ಕೆರೆಗಳಿಗೆ ನೀರು ಚನ್ನರಾಯಪಟ್ಟಣದ ಅಮಾನಿಕೆರೆಯಿಂದ ಕಟಿಗೆ ಹಳ್ಳಿ ವರೆಗೆ ಏತ ನೀರಾವರಿ ಮೂಲಕ ನೀರು ತಂದು, ಅಲ್ಲಿಂದ ನಾಲೆಯ ಮೂಲಕ ತೋಟಿಕೆರೆ ಸೇರಿದಂತೆ ಸುಮಾರು 25 ಕೆರೆಗಳಿಗೆ ನೀರು ಹರಿಸಲಾಗುವುದು. ಇದರಿಂದ ಬೆಳಗೀಹಳ್ಳಿ, ಅಕ್ಕನಹಳ್ಳಿ ಹಾಗೂ ಜಿನ್ನೇನಹಳ್ಳಿ ಗ್ರಾಪಂ ವ್ಯಾಪ್ತಿಯ 25 ಕೆರೆಗಳಿಗೆ ನೀರು ಹರಿಯಲಿದ್ದು, ಯೋಜನೆಯ ಅಂದಾಜು ವೆಚ್ಚ ರೂ.70 ಕೋಟಿ ಆಗಲಿದೆ. 

ಚನ್ನರಾಯಪಟ್ಟಣ ತಾಲೂಕಿನಲ್ಲಿ ನಾಲೆಗಳು ಹರಿದರೂ ಸಹ ಹೆಚ್ಚು ಪಾಲು ನೀರಾವರಿ ಸಿಗದೆ ಬರಪೀಡಿತವಾಗಿದ್ದು, ಈ
ನಿಟ್ಟಿನಲ್ಲಿ ಕುಡಿಯುವ ನೀರಿಗಾಗಿ ಕೆರೆಕಟ್ಟೆಗಳನ್ನು ತುಂಬಿಸಬೇಕಾಗಿದೆ. ಮುಖ್ಯಮಂತ್ರಿಗಳು ವಿವಿಧ ನೀರಾವರಿ
ಯೋಜನೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಸಿ.ಎನ್‌.ಬಾಲಕೃಷ್ಣ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next