Advertisement

ಕುಟುಂಬ ರಕ್ಷಣೆಗೆ ಮತ್ತೆ ಬಂದ್ರು ಚಾರ್ಜ್‌ ಕುಟ್ಟಿ? : ʼದೃಶ್ಯಂ-3ʼ ಪೋಸ್ಟರ್‌ ವೈರಲ್

02:40 PM Aug 14, 2022 | Team Udayavani |

ಕೇರಳ: ಮಾಲಿವುಡ್‌ ಸೂಪರ್‌ ಸ್ಟಾರ್‌ ಮೋಹನ್‌ ಲಾಲ್‌ ವೃತ್ತಿ ಬದುಕಿನಲ್ಲಿ ಹೆಸರು ತಂದುಕೊಟ್ಟ ಸಿನಿಮಾಗಳಲ್ಲಿ 2013 ರಲ್ಲಿ ಬಂದ ಕ್ರೈಂ ಥ್ರಿಲ್ಲರ್‌ ʼದೃಶ್ಯಂʼ ಸಿನಿಮಾ ಕೂಡ ಒಂದು.

Advertisement

ಜಿತ್‌ ಜೋಸೆಫ್‌ ನಿರ್ದೇಶನದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಮೊದಲ ಭಾಗದ ಯಶಸ್ಸಿನ ಬಳಿಕ ಕಳೆದ ವರ್ಷ ʼದೃಶ್ಯಂ-2ʼ ಚಿತ್ರ ಕೂಡ ಬಾಕ್ಸ್‌ ಆಫೀಸ್‌ ನಲ್ಲಿ ಸದ್ದು ಮಾಡಿತ್ತು. ಇದೀಗ ಚಿತ್ರದ ಮೂರನೇ ಭಾಗ ತೆರೆಗೆ ಬರುವ ವಿಷಯ ಮಾಲಿವುಡ್‌ ನಲ್ಲಿ ಜೋರಾಗಿ ಕೇಳಿ ಬರುತ್ತಿದೆ.

ತನ್ನ ಪತ್ನಿಯಿಂದ ಆಕಸ್ಮಿಕವಾಗಿ ವ್ಯಕ್ತಿಯೊಬ್ಬನ ಕೊಲೆಯಾಗುತ್ತದೆ. ಕೊಲೆ ಸುತ್ತ ನಾಯಕನ ಕುಟುಂಬ ಆರೋಪಿ ಸ್ಥಾನದ ಶಂಕೆಯಲ್ಲಿರುತ್ತದೆ. ನಾಯಕ ಪೊಲೀಸರ ತನಿಖೆಯಿಂದ, ಪ್ರಶ್ನೆಗಳಿಂದ ತನ್ನ ಕುಟುಂಬವನ್ನು ಹೇಗೆ ರಕ್ಷಿಸಿಕೊಳ್ಳುತ್ತಾನೆ ಎನ್ನುವುದು ಚಿತ್ರದ ಕಥೆ. ಸಿನಿಮಾದ ಎರಡನೇ ಭಾಗದ ಅಂತ್ಯದಲ್ಲಿ ಚಾರ್ಜ್‌ ಕುಟ್ಟಿ ʼತನ್ನ ಕುಟುಂಬ ರಕ್ಷಣೆಗೆ ನಾನು ಸದಾ ಸಿದ್ದʼ ಎನ್ನುವ ಮಾತು ಮೂರನೇ ಭಾಗಕ್ಕೆ ಮುನ್ನುಡಿ ಬರೆದಂತಿತ್ತು.

ʼದೃಶ್ಯಂʼ ಚಿತ್ರ ತಮಿಳು, ತೆಲುಗು, ಕನ್ನಡ, ಚೈನೀಸ್‌,ಇಂಡೋನೇಷಿಯಾ ಭಾಷೆಗಳಿಗೂ ರಿಮೇಕ್‌ ಆಗಿ ಯಶಸ್ಸು ಗಳಿಸಿದೆ. ಕನ್ನಡದಲ್ಲಿ ರವಿಚಂದ್ರನ್‌, ತಮಿಳಿನಲ್ಲಿ ಕಮಲ್‌ ಹಾಸನ್‌, ತೆಲುಗಿನಲ್ಲಿ ವೆಂಕಟೇಶ್‌ ಹಾಗೂ ಹಿಂದಿಯಲ್ಲಿ ಅಜಯ್‌ ದೇವಗನ್‌ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ʼದೃಶ್ಯಂ-2ʼ ನಲ್ಲಿದ್ದ ಟ್ವಿಸ್ಟ್‌, ಟರ್ನ್‌, ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ತಂದು ಕೂರಿಸಿತ್ತು. ಇದೀಗ ಚಿತ್ರದ ಮೂರನೇ ಭಾಗ ತೆರೆಗೆ ಬರಲಿದೆ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ.

Advertisement

ಟ್ವಿಟರ್‌ ನಲ್ಲಿ ಅಭಿಮಾನಿಯೊಬ್ಬರು ‘ದೃಶ್ಯಂ’-3 ದಿ ಕನ್‌ಕ್ಲೂಷನ್ʼ ಎನ್ನುವ ಪೋಸ್ಟರ್‌ ನ್ನು ಹಂಚಿಕೊಂಡಿದ್ದು, ಸದ್ಯ ಈ ಪೋಸ್ಟರ್‌ ಸಿಕ್ಕಾಪಟ್ಟೆ ವೈರಲ್‌ ಆಗಿದೆ.  ಆ.17 ರಂದು ಚಿತ್ರದ ಬಗ್ಗೆ ದೃಶ್ಯಂ ಮೂರನೇ ಭಾಗದ ಬಗ್ಗೆ ಮಾಹಿತಿ ಹೊರ ಬೀಳಲಿದೆ ಎನ್ನಲಾಗಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next