Advertisement

ಕುಡಿಯುವ ನೀರು ಕೇಳಿದ್ರೆ ಮೊಬೈಲ್‌ ಸ್ವಿಚ್‌ಆಫ್ ಮಾಡ್ತಾರೆ  

02:18 PM Apr 24, 2022 | Team Udayavani |

ಕೆ.ಆರ್‌.ಪೇಟೆ: ಪುರಸಭೆ ಶಹರಿ ರೋಜ್‌ಗಾರ್‌ ಭವನದಲ್ಲಿ ಅಧ್ಯಕ್ಷೆ ಮಹಾದೇವಿ ನಂಜುಂಡ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ತುರ್ತು ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ನೌಕರರು ಮೊಬೈಲ್‌ ಸ್ವಿಚ್‌ಆಫ್ ಮಾಡಿಕೊಂಡಿದ್ದರ ಬಗ್ಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

Advertisement

ಸಭೆ ಆರಂಭದಲ್ಲಿ ಮಾತನಾಡಿದ ಪುರಸಭೆ ಹಿರಿಯ ಸದಸ್ಯ ಕೆ.ಸಿ.ಮಂಜುನಾಥ್‌ ಮತ್ತು ಎಚ್‌.ಆರ್‌.ಲೋಕೇಶ್‌, ಹಲವು ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ನೀರುಗಂಟಿಗಳು ಸರಿಯಾಗಿ ನೀರು ಪೂರೈಕೆ ಮಾಡುತ್ತಿಲ್ಲ. ಕಾರಣ ಕೇಳಿದರೆ ವಿದ್ಯುತ್‌ ಇಲ್ಲ, ಸಂಬಳ ಕೊಟ್ಟಿಲ್ಲ ಎಂಬ ಕಾರಣ ಹೇಳುತ್ತಿದ್ದಾರೆ. ಮೊಬೈಲ್‌ ನಂಬರ್‌ಗೆ ಕರೆ ಮಾಡಿದ್ರೆ ಸ್ವಿಚ್‌ಆಫ್ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಕೂಡಲೇ ನೌಕರರಿಗೆ ಸಂಬಳ ನೀಡಿ ಸರಿಯಾಗಿ ಕೆಲಸ ನಿರ್ವಹಿಸಲು ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ಮೊಬೈಲ್‌ ಸ್ವಿಚ್‌ಆಫ್: ಅದರಲ್ಲಿಯೂ ವಿಶೇಷವಾಗಿ ಹೊಸಹೊಳಲಿನ ಎಲ್ಲಾ 6 ವಾರ್ಡ್‌ಗಳಲ್ಲಿ ಕುಡಿಯುವ ನೀರು, ಕಸ ವಿಲೇವಾರಿ ಸಮಸ್ಯೆ ಜಾಸ್ತಿ ಇದೆ. ಸದಸ್ಯರು ಸಾರ್ವಜನಿಕರಿಗೆ ಉತ್ತರ ನೀಡಲು ಆಗುತ್ತಿಲ್ಲ. ನೌಕರರಿಗೆ ಫೋನ್‌ ಮಾಡಿದರೆ ಕಾರಣ ತಿಳಿಸುವ ಬದಲು ಮೊಬೈಲ್‌ ಸ್ವಿಚ್‌ಆಫ್‌ ಮಾಡಿಕೊಳ್ಳುತ್ತಾರೆ ಎಂದು ತಿಳಿಸಿದರು.

ಮೊಬೈಲ್‌ ಸ್ವಿಚ್‌ಆಫ್‌ ಮಾಡಿಕೊಳ್ಳಬೇಡಿ: ನೌಕರರು ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಳ್ಳುವ ವಿಚಾರಕ್ಕೆ ತೀವ್ರ ಕೆಂಡಮಂಡಲರಾದ ಪುರಸಭಾಧ್ಯಕ್ಷೆ ಮಹಾದೇವಿ ನಂಜುಂಡ, ನೌಕರರು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಬೇಕೇ ಹೊರತು, ಮೊಬೈಲ್‌ ಸ್ವಿಚ್‌ಆಫ್‌ ಮಾಡಿಕೊಳ್ಳಬಾರದು. ಜನಪ್ರತಿನಿ ಧಿಗಳಾದ ನಮಗೆ ಹಿಡಿಶಾಪ ಹಾಕುತ್ತಾರೆ. ಹಾಗಾಗಿ ಏನೇ ಸಮಸ್ಯೆ ಇರಲಿ, ಫೋನ್‌ ರಿಸೀವ್‌ ಮಾಡಿ ಕಾರಣ ತಿಳಿಸಬೇಕು ಎಂದು ತಾಕೀತು ಮಾಡಿದರು.

ಸ್ವಚ್ಛ ಪಟ್ಟಣ ನಿರ್ಮಾಣಕ್ಕೆ ಕೈಜೋಡಿಸಿ: ಪುರಸಭಾ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಗೆ, ಕಸ ವಿಲೇವಾರಿಗೆ ಕ್ರಮ ವಹಿಸುವ ಮೂಲಕ ಸ್ವಚ್ಛ ಪಟ್ಟಣ ನಿರ್ಮಾಣಕ್ಕೆ ನೌಕರರು ಕೈಜೋಡಿಸಬೇಕು ಎಂದು ಮಹಾದೇವಿನಂಜುಂಡ ಮನವಿ ಮಾಡಿದರು.

Advertisement

ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷೆ ಗಾಯತ್ರಿ ಸುಬ್ಬಣ್ಣ, ಮುಖ್ಯಾ ಧಿಕಾರಿ ಕುಮಾರ್‌, ಸದಸ್ಯರಾದ ಡಿ.ಪ್ರೇಮಕುಮಾರ್‌, ಕಲ್ಪನಾ ದೇವರಾಜು, ಕಮರ್‌ಬೇಗಂ, ಕೆ.ಎಸ್‌.ಸಂತೋಷ್‌ ಕುಮಾರ್‌, ಎಚ್‌.ಡಿ.ಅಶೋಕ್‌, ಪ್ರಮೋದ್‌, ತಿಮ್ಮೇಗೌಡ, ಸೌಭಾಗ್ಯಾ ಉಮೇಶ್‌, ಸುಗುಣಾ ರಮೇಶ್‌, ಪದ್ಮಮ್ಮ, ಇಂದ್ರಾಣಿ ವಿಶ್ವನಾಥ್‌, ಶುಭಾ ಗಿರೀಶ್‌, ಶೋಭಾ ದಿನೇಶ್‌, ವ್ಯವಸ್ಥಾಪಕ ಸೋಮಶೇಖರ್‌, ರಾಜಸ್ವ ನಿರೀಕ್ಷಕ ಶ್ರೀನಾಥ್‌, ಎಂಜಿನಿಯರ್‌ ಮಧುಸೂದನ್‌, ಅರ್ಚನಾ ಆರಾಧ್ಯ, ಸ್ಲಂ ಬೋರ್ಡ್‌ ಅಧಿ ಕಾರಿ ಮಂಜೇಶ್‌ ಉಪಸ್ಥಿತರಿದ್ದರು. ವಸತಿ ಯೋಜನೆಗಳ ಬಗ್ಗೆ ಚರ್ಚೆ: ಸಭೆಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ ಸಮಸ್ಯೆ, ಹೇಮಾವತಿ ಬಡಾವಣೆ ಸಮಸ್ಯೆ, ವಸತಿ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಪುರಸಭೆ ಅಧ್ಯಕ್ಷರಾಗಿ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಎಲ್

Advertisement

Udayavani is now on Telegram. Click here to join our channel and stay updated with the latest news.

Next