Advertisement

ಕುಡಿಯುವ ನೀರಿಗಾಗಿ ಡಿಸಿಗೆ ಡಾ|ಅಜಯಸಿಂಗ್‌ ಮನವಿ

12:39 PM Mar 28, 2019 | pallavi |
ಕಲಬುರಗಿ: ಜೇವರ್ಗಿ ತಾಲೂಕಿನಲ್ಲಿ ಸಮಸ್ಯಾತ್ಮಕ ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ವಿದ್ಯುತ್‌ ಒದಗಿಸಬೇಕು ಎಂದು ಒತ್ತಾಯಿಸಿ ಜೇವರ್ಗಿ ಶಾಸಕ ಹಾಗೂ ನವದೆಹಲಿ ವಿಶೇಷ ಪ್ರತಿನಿಧಿ ಡಾ| ಅಜಯಸಿಂಗ್‌ ನೇತೃತ್ವದ ನಿಯೋಗ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರರಿಗೆ ಮನವಿ ಸಲ್ಲಿಸಿತು.
ಜೇವರ್ಗಿ ತಾಲೂಕಿನ ಇಟಗಾ, ನಾರಾಯಣಪುರ, ಭೋಸಗಾ ಗ್ರಾಮಗಳು ಹಾಗೂ ಜೇವರ್ಗಿ ಪಟ್ಟಣಕ್ಕೆ ಕುಡಿಯುವ ನೀರು,
ವಿದ್ಯುತ್‌ ಸೌಲಭ್ಯ ಒದಗಿಸಬೇಕು ಎಂದು ಮನವಿ ಮಾಡಿದರು. ಬರಗಾಲ ಹಾಗೂ ಬೇಸಿಗೆ ಹಿನ್ನೆಲೆಯಲ್ಲಿ ಜೇವರ್ಗಿ ತಾಲೂಕಿನಾದ್ಯಂತ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಕೂಡಲೇ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿದ ಅವರು, ಟ್ಯಾಂಕರ್‌ ಮೂಲಕವಾದರೂ ಕುಡಿವ ನೀರು ಪೂರೈಸಲು ಮನವಿ ಮಾಡಿದರು.
ಕಲಬುರಗಿ ನಗರಕ್ಕೆ ಕುಡಿಯುವ ನೀರಿಗಾಗಿ ಸರಡಗಿ ಬ್ಯಾರೇಜಿಗೆ 0.30 ಟಿಎಂಸಿ ಅಡಿ ನೀರು ಬಿಡಲು ಕೃಷ್ಣಾ ಭಾಗ್ಯ ಜಲನಿಗಮದ ಮುಖ್ಯ ಅಭಿಯಂತರರಿಗೆ ಪ್ರಾದೇಶಿಕ ಆಯುಕ್ತರು ಸೂಚಿಸಿದ್ದಾರೆ. ಆದರೂ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಕಾರ್ಯನಿರ್ವಾಹಕ ಅಭಿಯಂತರರು ಸೆಪ್ಟೆಂಬರ್‌ ತಿಂಗಳಲ್ಲೇ ಪ್ರಾದೇಶಿಕ ಆಯುಕ್ತರ ಆದೇಶ ಬರುವ ಮುನ್ನ ನೀರನ್ನು ಕಲಬುರಗಿ ನಗರಕ್ಕೆ ಹರಿ ಬಿಡಲಾಗಿದೆ. ಮರಳು ಮಾಫಿಯಾ ಪ್ರಭಾವಕ್ಕೊಳಗಾಗಿ ಅರ್ಧದಷ್ಟು ನೀರನ್ನು ಆಯುಕ್ತರ ಆದೇಶದ ನಂತರ ಕುಡಿಯಲು ಒಂದು ಹನಿ ನೀರನ್ನು ಇಟ್ಟುಕೊಳ್ಳದೇ ಎಲ್ಲಾ ನೀರನ್ನು ಸರಡಗಿ ಬ್ಯಾರೇಜ್‌ಗೆ ಹರಿ ಬಿಟ್ಟಿದ್ದಾರೆ. ಇದರಿಂದ ಆ ಭಾಗದ ಗ್ರಾಮಸ್ಥರಿಗೆ ಕುಡಿಯುವ ನೀರಿನ ತೊಂದರೆಯಾಗಿದೆ ಎಂದು ತಿಳಿಸಿದರು.
ಮಾ.3 ರಿಂದ 22 ರವರೆಗೆ ನೀರು ಹರಿದು ಹೋಗಿದೆ. ಈಗ ಕಲ್ಲೂರ ಬ್ಯಾರೇಜ್‌ನಲ್ಲಿ ನಾಲ್ಕು ಪ್ಲೇಟ್‌ ಅಳವಡಿಸಿದ್ದರಿಂದ ಕುಡಿಯಲು ಕನಿಷ್ಠ ನೀರು ಸಂಗ್ರಹವಾಗಿದೆ. 700 ಕ್ಯೂಸೆಕ್‌ ನೀರನ್ನು ಕಲ್ಲೂರ ಬ್ಯಾರೇಜ್‌ ಮೂಲಕ ಜೇವರ್ಗಿ ಹಾಗೂ
ಕಲಬುರಗಿಗೆ ಹರಿ ಬಿಡುವುದಾಗಿ ಪತ್ರಿಕಾ ವರದಿಗಳಿಂದ ಗೊತ್ತಾಗಿದೆ. ಈ ನೀರನ್ನು ಕಲ್ಲೂರ ಬ್ಯಾರೇಜ್‌ಗೆ ಹರಿಸುವ ಕಾಲಕ್ಕೆ ನಾಲ್ಕು ಪ್ಲೇಟ್‌ಗಳ ನೀರು ಸಂಗ್ರಹಿಸಿ ಹೆಚ್ಚುವರಿ ನೀರನ್ನು ಕಲಬುರಗಿ ಹಾಗೂ ಜೇವರ್ಗಿಗೆ ಬಿಡಬೇಕೆಂದು ಆಗ್ರಹಿಸಿದರು.
ಮುಂದಿನ ದಿನಗಳಲ್ಲಿ ಕಲ್ಲೂರ ಬ್ಯಾರೇಜ್‌ ಮೂಲಕ ನೀರು ಹರಿಯಬೇಕಾದರೆ ಮೇಲ್ಭಾಗದ ಗ್ರಾಮಗಳಿಗೆ ನೀರಿನ ತೊಂದರೆಯಾಗದಂತೆ ಕನಿಷ್ಠ ನೀರನ್ನು ಸಂಗ್ರಹಿಸುವುದನ್ನು ನಿರ್ಲಕ್ಷಿಸಿದರೆ ಆ ಭಾಗದ ಜನರು ಹೋರಾಟಕ್ಕೆ ಇಳಿಯಬೇಕಾಗುವುದು ಅನಿವಾರ್ಯ ವಾಗುವುದು ಎಂದು ಎಚ್ಚರಿಸಿದರು.
ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ರುಕುಮ್‌ ಪಟೇಲ್‌ ಇಜೇರಿ, ಶಾಂತಪ್ಪ ಕೂಡಲಗಿ, ಸಿದ್ರಾಮಪ್ಪ ಪಾಟೀಲ ಸಿದ್ನಾಳ, ಅವ್ವಣ್ಣಗೌಡ ಪಾಟೀಲ ಭೋಸಗಾ, ದಾದಾಪಾಟೀಲ ಗುಳಾಳ ಭೋಸಗಾ, ಶರಣಬಸು ಜಾಗೀರದಾರ, ಶಿವಪ್ಪ ಪೂಜಾರಿ
ಸಾಗನೂರ, ಶಿವಾಜಿ ಹಣಮಂತಗೊಳ ಇಟಗಾ, ಮಲ್ಲಪ್ಪಾ ಕೆಂಚಪ್ಪಾ ಭೋಸಗಾ, ಬಸವರಾಜಗೌಡ ಭೋಸಗಾ(ಕೆ), ಶೌಕತ್‌ ಅಲಿ ಆಲೂರ ಹಾಗೂ ಇತರರು ಈ ಸಂದರ್ಭದಲ್ಲಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next