Advertisement
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಿನ ಸಮಸ್ಯೆಗೆ ಸಂಬಂಧಿಸಿ ಸಭೆ ಕರೆಯುವಂತೆ ಆನೇಕ ಬಾರಿ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಮಾಡಿದರೂ ಪ್ರಯೋಜನವಾ ಗಿಲ್ಲ. ನೀರಿನ ರೇಷನಿಂಗ್ ಆರಂಭವಾದ ಅನಂತರ ಎತ್ತರ ಪ್ರದೇಶಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗಿಲ್ಲ. ಹೀಗಾಗಿ ಟ್ಯಾಂಕರ್‌ಗಳಲ್ಲಿ ನೀರು ಕೊಡುವಂತೆ ಮನವಿ ಮಾಡಿದ್ದೇವೆ. ನಗರಸಭೆ ಅಧಿಕಾರಿಗಳು ಜಿಲ್ಲಾಧಿಕಾರಿಯತ್ತ ಕೈತೋರಿಸುತ್ತಾರೆ; ಜಿಲ್ಲಾಧಿಕಾರಿ ನಗರಸಭೆಯತ್ತ ಕೈ ತೋರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನೀರಿನ ಸಮಸ್ಯೆ ಪರಿಹಾರಕ್ಕೆ ಯಾರೂ ಗಂಭೀರ ಪ್ರಯತ್ನ ಮಾಡುತ್ತಿಲ್ಲ. 2 ತಿಂಗಳ ಹಿಂದೆಯೇ ಶೀರೂರು ಡ್ಯಾಂ, ಮಾಣಾç, ಭಂಡಾರಿಗುಂಡಿ ಮತ್ತು ಪುತ್ತಿಗೆ ಮಠದ ಬಳಿಯಿರುವ ಗುಂಡಿಯಲ್ಲಿ 25 ದಿನಗಳಿಗೆ ಬೇಕಾಗುವಷ್ಟು ನೀರು ಸಂಗ್ರಹ ಇದ್ದು, ಇಲ್ಲಿರುವ ನೀರನ್ನು ಪಂಪಿಂಗ್ ಮಾಡಿದರೆ ಸಮಸ್ಯೆಗೆ ಸ್ವಲ್ಪಮಟ್ಟಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಹೇಳಿದ್ದರೂ ಪ್ರಯೋಜನವಾಗಿಲ್ಲ ಎಂದರು. ಸ್ವರ್ಣಾ ನದಿ 2ನೇ ಹಂತದ ಯೋಜನೆಯಲ್ಲಿ ತಾಂತ್ರಿಕ ದೋಷವಿದ್ದು, ಯೋಜನೆ ಸಮರ್ಪಕ ವಾಗಿಲ್ಲ ಎಂದು ಬಿಂಬಿಸಲು ಕೃತಕ ನೀರಿನ ಅಭಾವ ಸೃಷ್ಟಿಸಲಾಗಿದೆಯೇ ಎಂಬ ಗುಮಾನಿ ಇದೆ. ಹಿಂದೆ ಯೋಜನೆ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಹೊಂದಿದ ಅಧಿಕಾರಿಯೊಬ್ಬರು ಈಗ ಆಯಕಟ್ಟಿನ ಜಾಗದಲ್ಲಿದ್ದಾರೆ. ಹೀಗಾಗಿ ನೀರಿನ ಸಮಸ್ಯೆಗೆ ನಿಧಾನಗತಿ ಸ್ಪಂದನೆ ಹಿಂದೆ ಷಡ್ಯಂತ್ರವಿದೆಯೇ ಎಂಬ ಅನುಮಾನ ಇದೆ ಎಂದರು.
Related Articles
ನಗರಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳಿಗೆ ಅಧಿಕಾರವಿಲ್ಲದೆ ಅಸಹಾಯಕರಾಗಿದ್ದೇವೆ. ಆದರೆ ಉಡುಪಿ ನಗರಸಭೆಗೆ ಮೀಸಲಾತಿ ಸಮಸ್ಯೆ ಇಲ್ಲ. ಯಾರೂ ಕೋರ್ಟ್‌ಗೆ ಹೋಗಿಲ್ಲ. ಅಧ್ಯಕ್ಷ ಗಾದಿಗೆ ನೀತಿ ಸಂಹಿತೆ ಮುಗಿದ ಬಳಿಕ ಚುನಾವಣೆ ನಡೆಸಬೇಕು ಎಂದರು.
Advertisement
ಪ್ರಭಾಕರ ಪೂಜಾರಿ, ಮಂಜುನಾಥ ಮಣಿಪಾಲ, ಗಿರೀಶ್ ಅಂಚನ್, ಗಿರಿಧರ ಆಚಾರ್ಯ ಉಪಸ್ಥಿತರಿದ್ದರು.
ಸಾಮೂಹಿಕ ಪ್ರಾರ್ಥನೆಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಮೇ 10ರಂದು ಸಂಜೆ 6ಕ್ಕೆ ಮಳೆಗಾಗಿ ಪ್ರಾರ್ಥಿಸಿ ಕೃಷ್ಣ ಮಠದಲ್ಲಿ ಸಾಮೂಹಿಕ ಪ್ರಾರ್ಥನೆ, ವರುಣ ಮಂತ್ರ ಜಪ ಹಮ್ಮಿಕೊಳ್ಳಲಾಗಿದೆ. ಎಲ್ಲ ನಗರಸಭಾ ಸದಸ್ಯರು ಭಾಗವಹಿಸಲಿದ್ದಾರೆ. ನಗರದ ವಿವಿಧ ಚರ್ಚ್, ಮಸೀದಿಗಳಲ್ಲಿಯೂ ಪ್ರಾರ್ಥನೆ ಸಲ್ಲಿಸುವಂತೆ ವಿನಂತಿಸಲಾಗಿದೆ ಎಂದರು. ಇಂದಿನಿಂದ ಟ್ಯಾಂಕರ್ ನೀರು ಕೊಡಿ
ಎರಡು ತಿಂಗಳ ಹಿಂದೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲು ಟೆಂಡರ್ ಆಗಿದ್ದರೂ ಜಿಲ್ಲಾಧಿಕಾರಿಗಳಿಂದ ಅನುಮತಿ ಬಾಕಿ ಇದೆ. ಕೊಡಲೇ ಅನುಮತಿ ನೀಡಿ ಮೇ 8ರಿಂದಲೇ ಟ್ಯಾಂಕರ್ ನೀರು ಸರಬರಾಜು ಪ್ರಾರಂಭಿಸಬೇಕು.
-ರಘುಪತಿ ಭಟ್, ಉಡುಪಿ ಶಾಸಕ ಮನವಿ
– ಡ್ಯಾಂನಲ್ಲಿ ಶೇಖರಣೆಯಾದ ಮರಳು ತೆರವುಗೊಳಿಸಿ
– ಬಂಡೆ ಒಡೆದು ನೀರಿನ ಶೇಖರಣೆಗೆ ದಾರಿ ಮಾಡಿ
– ನಗರದ ಜನತೆಗೆ ತತ್‌ಕ್ಷಣ ಟ್ಯಾಂಕರ್ ನೀರು ಸರಬರಾಜು ಮಾಡಿ