Advertisement

ಕಾಫಿ ಕುಡಿದು ತೂಕ ಇಳಿಸಿ

05:13 PM Jul 06, 2019 | mahesh |

ಬೆಳಗ್ಗೆ ಎದ್ದು ಒಂದು ಲೋಟ ಕಾಫಿ ಕುಡಿದಾಗ ಮನಸ್ಸಿಗೆ ಹಾಯ್‌ ಎನಿಸುತ್ತದೆ. ಭಾರತೀಯರಿಗೂ, ಕಾಫಿಗೂ ಅವಿನಾಭಾವ ಸಂಬಂಧವಿದೆ. ಅದೆಷ್ಟೋ ಜನರಿಗೆ ಕಾಫಿ ಇಲ್ಲದೇ ಬೆಳಗಾಗುವುದೇ ಇಲ್ಲ. ಕಾಫಿಯನ್ನು ಆನಂದಿಸುವ ಜನರಿಗೆ ಇನ್ನೊಂದು ಖುಷಿ ವಿಷಯವಿದೆ. ಇತ್ತೀಚೆಗೆ ನಡೆದ ಸಂಶೋಧನೆಯಲ್ಲಿ ವಿಜ್ಞಾನಿಗಳು ಒಂದು ಕಪ್‌ ಕಾಫಿ ಕಂದು ಕೊಬ್ಬನ್ನು ಉತ್ತೇಚಿಸುತ್ತದೆ ಹಾಗೂ ಕೊಬ್ಬು ಇಳಿಸಲು ಸಹಕರಿಸುತ್ತದೆ ಎಂದು ಪತ್ತೆ ಹಚ್ಚಿದ್ದಾರೆ. ಉತ್ತೇಜಿತಗೊಂಡ ಕಂದು ಕೊಬ್ಬು ದೇಹದಲ್ಲಿ ಶಾಖ ಉತ್ಪಾದಿಸಲು ಕ್ಯಾಲೋರಿಗಳನ್ನು ಕಡಿಮೆಗೊಳಿಸುತ್ತದೆ. ಕಂದು ಕೊಬ್ಬಿನ ಮೇಲೆ ಹೇಗೆ ಕಾಫಿ ಪರಿಣಾಮ ಬೀರುತ್ತದೆ ಎಂದು ತಿಳಿಸಿದ ಮೊದಲ ಸಂಶೋಧನೆ ಇದಾಗಿದೆ.

Advertisement

ಕಂದು ಕೊಬ್ಬು?
ಬೌರ್ನ್ ಎಡಿಪೊಸ್‌ ಟಿಶ್ಯು ಎಂದು ಕರೆಯಲ್ಪಡುವ ಈ ಕಂದು ಕೊಬ್ಬು ವಿಶೇಷವಾಗಿ ಶೀತವಾದ ಸಂದರ್ಭದಲ್ಲಿ ಸಕ್ರಿಯಗೊಳ್ಳುತ್ತದೆ. ಶೀತದ ಸ್ಥಿತಿಯಲ್ಲಿ ದೇಹದಲ್ಲಿನ ಉಷ್ಣತೆಯನ್ನು ಕಾಪಾಡಲು ಸಹಕಾರಿ. ಕಂದು ಕೊಬ್ಬಿನಲ್ಲಿ ಹೆಚ್ಚಿನ ಮೈಟೊಕಾಂಡ್ರಿಯ ಇದ್ದು,ಇದು ಶಾಖ ಉತ್ಪಾದಿಸುವ ವೇಳೆ ಕ್ಯಾಲೋರಿಯನ್ನು ಬರ್ನ್ ಮಾಡುತ್ತದೆ.

ಕಾಫಿ ಸೇವನೆಯ ಉಳಿದ ಪ್ರಯೋಜನಗಳು
·ಕಾಫಿಯಲ್ಲಿರುವ ಕಾಫಿನ್‌ ಶಕ್ತಿ ನೀಡುತ್ತದೆ. ಇದಕ್ಕಾಗಿ ಹೆಚ್ಚಿನ ಜನರು ಬೆಳಗ್ಗೆ ಕಾಫಿ ಕುಡಿಯುವ ಅಭ್ಯಾಸ ಹೊಂದಿದ್ದಾರೆ.

·ಟೈಪ್‌ 2 ಮಧುಮೇಹಿಗಳಿಗೆ ಕಾಫಿ ಸಹಕಾರಿ. ಕಾಫಿ ಸೇವನೆಯವರಲ್ಲಿ ಟೈಪ್‌ 2 ಮಧುಮೇಹದ ಅಪಾಯ ಕಡಿಮೆ ಹೊಂದಿದ್ದಾರೆ.

·ಕಾಫಿ ಪ್ರಯೋಜನಕಾರಿ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದು, ದೇಹದಲ್ಲಿ ರಾಡಿಕಲ್ಗಳಿಂದಾದ ಸಮಸ್ಯೆಗಳಿಂದ ರಕ್ಷಿಸುತ್ತದೆ.

Advertisement

·ಹೀಗಾಗಿ ಪ್ರತಿದಿನ ಒಂದು ಕಪ್‌ ಕಾಫಿ ಸೇವನೆ ದೇಹಕ್ಕೆ ಒಳ್ಳೆದು.

ಹೇಗೆ ತೂಕ ಇಳಿಕೆ?
ಕಂದು ಕೊಬ್ಬು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸುತ್ತದೆ. ರಕ್ತ ಮೇದಸ್ಸಿನ ಮಟ್ಟವನ್ನು ಸುಧಾರಿಸುತ್ತದೆ. ಕಂದು ಕೊಬ್ಬನ್ನು ಬರ್ನ್ ಮಾಡು ವುದರಿಂದ ಹೆಚ್ಚುವರಿ ಕ್ಯಾಲೋರಿ ಕಳೆದುಕೊಳ್ಳಬಹುದು. ಇದು ತೂಕ ಇಳಿಕೆಗೆ ಸಹಕರಿಯಾಗಿದೆ.

•••ಆರ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next