Advertisement

ಯುವ ರಾಜಕೀಯ ನಾಯಕರ ಡ್ರೆಸ್ ಟ್ರೆಂಡ್

12:30 AM Feb 26, 2019 | |

ಚುನಾವಣೆ ಹತ್ತಿರವಾಗುತ್ತಿರುವಂತೆಯೇ ರಾಜಕೀಯ ನಾಯಕರ ಗೆಟಪ್‌ ಬದಲಾಗುತ್ತಿವೆ. ಬಗೆ ಬಗೆ ಶೈಲಿಯ ಕುರ್ತಾ, ಜಾಕೆಟ್‌, ಕೋಟ್‌ಗಳು ಹೆಚ್ಚು ಗಮನ ಸೆಳೆಯಲಾರಂಭಿಸಿವೆ. ಹಳೆಯ ತಲೆಮಾರಿನ ನಾಯಕರಿಗಿಂತ ಯುವ ತಲೆಮಾರಿನ ನಾಯಕರೇ ಕುರ್ತಾ, ಜಾಕೆಟ್‌ಗೆ ಹೆಚ್ಚು ಮೊರೆಹೋಗುತ್ತಿರುವುದು ಮತ್ತು ಹೊಸ ವಿನ್ಯಾಸಗಳನ್ನು ಟ್ರೈ ಮಾಡುತ್ತಿರುವುದು. ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಅದೇ ಪಕ್ಷದ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ, ವೈಎಸ್‌ಆರ್‌ ಕಾಂಗ್ರೆಸ್‌ ಅಧ್ಯಕ್ಷ ಜಗನ್ಮೋಹನ್‌ ರೆಡ್ಡಿ, ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಒಮರ್‌ ಅಬ್ದುಲ್ಲಾ ಮೊದಲಾದವರು ಬಗೆ ಬಗೆ ವಿನ್ಯಾಸದ ಅರ್ಧ ತೋಳಿನ ಜಾಕೆಟ್‌ ಅಥವಾ ಜಿಲೆಟ್‌ ಧರಿಸಿ ಮಿಂಚುತ್ತಿದ್ದಾರೆ. ಕರ್ನಾಟಕದಲ್ಲಿ ಮಾಜಿ ಸಿಎಂ ದಿ.ರಾಮಕೃಷ್ಣ ಹೆಗಡೆಯವರು ಅರ್ಧ ತೋಳಿನ ಜಾಕೆಟ್‌ ಧರಿಸುತ್ತಿದ್ದರು. ಈಗ ನಾಯಕರ ಖ್ಯಾತಿ-ವಯಸ್ಸನ್ನು ಅವಲಂಬಿಸಿ ಫ್ಯಾಷನ್‌ ಕೂಡ ಬದಲಾಗುತ್ತಿದೆ. 

Advertisement

ರಾಜಕೀಯ ಮತ್ತು ಫ್ಯಾಶನ್‌ ನಡುವಿನ ನಂಟು ಭಾರತದ ಮಟ್ಟಿಗೆ ಮಹಾತ್ಮ ಗಾಂಧಿಯವರ ದಿನಗಳಿಂದಲೇ ಇದೆ. ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಸಮರಕ್ಕೆ ಖಾದಿ ಬಟ್ಟೆ ಬಳಕೆ ಪ್ರೋತ್ಸಾಹಿಸಿ ಹೊಸ ಶಕೆ ಶುರು ಮಾಡಿದರು ಅವರು. ವೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ತೋಳಿದ್ದ ಜಾಕೆಟ್‌ ಧರಿಸುವುದು ಫ್ಯಾಶನ್‌ ಆಯಿತು. ನೆಹರೂ ತುಂಬು ತೋಳಿನ ಜಾಕೆಟ್‌, ಇಂದಿರಾ ಗಾಂಧಿ ಸೀರೆ, ಅಟಲ್‌ ಬಿಹಾರಿ ವಾಜಪೇಯಿ ಧೋತಿ ಉಟ್ಟು ಆಯಾ ದಿರಿಸಿಗೆ ಹೆಚ್ಚಿನ ಮೌಲ್ಯ ತಂದುಕೊಟ್ಟರು. ಜತೆಗೆ ಅದರೊಂದಿಗೇ ಗುರುತಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next