Advertisement

ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗೆ ವಸ್ತ್ರಸಂಹಿತೆ; ಕಿವಿಯೋಲೆ, ಉಂಗುರ, ನೆಕ್ಲೆಸ್‌ ಧರಿಸಬಾರದು

10:11 PM Jan 19, 2023 | Team Udayavani |

ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಜ.29ರಿಂದ ಫೆ.12ರ ವರೆಗೆ ನಡೆಸುವ ಪರೀಕ್ಷೆಗೆ ವಸ್ತ್ರ ಸಂಹಿತೆಯನ್ನು ಬಿಡುಗಡೆ ಮಾಡಿದೆ.
ಮಹಿಳಾ ಅಭ್ಯರ್ಥಿಗಳು ಕಿವಿಯೋಲೆ, ಉಂಗುರ, ನೆಕ್ಲೆಸ್‌ ಧರಿಸಬಾರದು. ಜತೆಗೆ ಹೈ ಹೀಲ್ಡ್‌ ಚಪ್ಪಲಿ ಹಾಕಿ ಪರೀಕ್ಷೆ ಬರೆಯಲು ಅವಕಾಶಗಳಿಲ್ಲ.

Advertisement

ಪುರುಷ ಅಭ್ಯರ್ಥಿಗಳು ಕುರ್ತಾ, ಪೈಜಾಮ ಧರಿಸಿ ಪರೀಕ್ಷೆ ಬರೆಯಲು ಅವಕಾಶವಿಲ್ಲ. ಶೂ ಹಾಕುವಂತಿಲ್ಲ. ತೊಡುವ ಬಟ್ಟೆ ಹಗುರ, ಹೆಚ್ಚು ಜಿಪ್‌ ಪಾಕೆಟ್‌, ದೊಡ್ಡ ಬಟನ್‌, ಕಸೂತಿ ಇರಬಾರದು. ಅರ್ಧ ತೋಳಿನ ಶರ್ಟ್‌ ಧರಿಸಬೇಕು. ಮಾಸ್ಕ್ ಧರಿಸುವಂತಿಲ್ಲ ಎಂದು ಕೆಇಎ ಸೂಚಿಸಿದೆ. ಇದರ ಜತೆಗೆ ಪರೀಕ್ಷಾ ಕೇಂದ್ರದ ಒಳಗೆ ಡಿಜಿಟಲ್‌ ಉಪಕರಣ ಕೊಂಡೊಯ್ಯಬಾರದು,ಪಾರದರ್ಶಕವಾದ ನೀರಿನ ಬಾಟಲಿ ತೆಗೆದುಕೊಂಡು ಹೋಗಬಹುದು. ಸರಕಾರ ನೀಡಿರುವ ಫೋಟೋ ಇರುವ ಗುರುತಿನ ಚೀಟಿ ಹೊಂದಿರಬೇಕು. ಪ್ರವೇಶ ಪತ್ರ ಇಲ್ಲದ ಯಾವುದೇ ಅಭ್ಯರ್ಥಿಗೂ ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶವಿಲ್ಲ ಎಂದು ಕೆಇಎ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ ಕೆಇಎ ವೆಬ್‌ಸೈಟ್‌ cetonline.karnataka.gov.in ನೋಡಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next