Advertisement

Dress Code: ಈ ರಾಜ್ಯದ ಶಿಕ್ಷಕರಿಗೆ ಇನ್ನು ಡ್ರೆಸ್ ಕೋಡ್ ಕಡ್ಡಾಯ.. ಶಿಕ್ಷಣ ಸಚಿವರಿಂದ ಆದೇಶ

08:11 AM Mar 16, 2024 | Team Udayavani |

ಮುಂಬೈ: ಭವಿಷ್ಯದ ಪೀಳಿಗೆಯನ್ನು ನಿರ್ಮಿಸುವುದರಲ್ಲಿ ಶಿಕ್ಷಕರ ಪಾತ್ರ ಮಹತ್ವವನ್ನು ಪಡೆದಿದೆ ಅಲ್ಲದೆ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ ನೀಡುವುದು ಪ್ರತಿಯೊಬ್ಬ ಗುರುವಿನ ಜವಾಬ್ದಾರಿ ಕೂಡ ಹಾಗಾಗಿ ಅವರ ವ್ಯಕ್ತಿತ್ವವು ಅಧ್ಯಯನ ಮಾಡುವ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಬಾರದು ಎಂಬ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ರಾಜ್ಯದ ಎಲ್ಲಾ ಶಿಕ್ಸಣ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರಿಗೆ ಡ್ರೆಸ್ ಕೋಡ್ ಜಾರಿ ಮಾಡಿದೆ.

Advertisement

ಹಾಗಾಗಿ ಇನ್ನು ಮುಂದೆ ಶಿಕ್ಷಕರು ತಮಗೆ ಇಷ್ಟವಾದ ಡ್ರೆಸ್ ಹಾಕಿ ಶಾಲೆಗೆ ಬರುವಂತಿಲ್ಲ ಎಂದು ಶಿಕ್ಷಣ ಸಚಿವರು ಆದೇಶ ಹೊರಡಿಸಿದ್ದಾರೆ.

ಯಾವ ರಾಜ್ಯದಲ್ಲಿ ಈ ಕ್ರಮ:
ಅಂದಹಾಗೆ ನೂತನ ವಸ್ತ್ರ ಸಂಹಿತೆ ಜಾರಿಗೆ ಬಂದಿರುವುದು ಮಹಾರಾಷ್ಟ್ರ ರಾಜ್ಯದಲ್ಲಿ ಇಲ್ಲಿನ ಶಿಕ್ಷಣ ಸಚಿವರು ಈ ಕೂಡಲೇ ಜಾರಿಗೆ ಬರುವಂತೆ ನೂತನ ವಸ್ತ್ರ ಸಂಹಿತೆಯನ್ನು ಜಾರಿಗೆ ತಂದಿದ್ದಾರೆ ಅದರಂತೆ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ಶಿಕ್ಷಕ ಶಿಕ್ಷಕಿಯರು ಈ ಆದೇಶವನ್ನು ಪಾಲಿಸಬೇಕಾಗಿದೆ.

ಡ್ರೆಸ್ ಕೋಡ್ ನಲ್ಲಿ ಏನಿದೆ:
ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲಾ ಶಿಕ್ಷಕರಿಗೆ ದೈನಂದಿನ ಡ್ರೆಸ್ ಕೋಡ್‌ಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು ಅದರಂತೆ ಶಿಕ್ಷಕಿಯರು ಸೀರೆ ಅಥವಾ ಸಲ್ವಾರ್/ಚೂಡಿದಾರ್, ಕುರ್ತಾ ಧರಿಸಬಹುದು ಮತ್ತು ಶಿಕ್ಷಕರು ಶರ್ಟ್ ಮತ್ತು ಪ್ಯಾಂಟ್ ಧರಿಸಬೇಕು. ಜೀನ್ಸ್ ಟೀ ಶರ್ಟ್ ಧರಿಸುವಂತಿಲ್ಲ, ಅಲ್ಲದೆ ಗ್ರಾಫಿಕ್ ಡಿಸೈನ್ ಇರುವ ಶರ್ಟ್ ಗಳನ್ನೂ ಧರಿಸಬಾರದು ಎಂದು ಶಾಲಾ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.

ಡ್ರೆಸ್ ಕೋಡ್ ಬಗ್ಗೆ ಶಿಕ್ಷಣ ಸಚಿವ ದೀಪಕ್ ಕೇಸರ್ಕರ್ ಮಹತ್ವದ ಘೋಷಣೆ ಮಾಡಿದ್ದು, ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯವಾಗಿರುವಂತೆಯೇ ಇನ್ನು ರಾಜ್ಯದ ಎಲ್ಲ ಶಿಕ್ಷಕರಿಗೂ ಡ್ರೆಸ್ ಕೋಡ್ ಕಡ್ಡಾಯವಾಗಿ ಜಾರಿಯಾಗಲಿದೆ ಎಂದು ಹೇಳಿದ್ದಾರೆ.

Advertisement

ಇದನ್ನೂ ಓದಿ: Daily Horoscope: ಕಾಲೆಳೆಯುವ ಪ್ರಯತ್ನಗಳನ್ನು ಕೊಡವಿ ಮುಂದಡಿಯಿಡುವುದರಿಂದ ವಿಜಯ

Advertisement

Udayavani is now on Telegram. Click here to join our channel and stay updated with the latest news.

Next