Advertisement

ಹೀಗೊಂದು ನಿಯಮ; ರಜೆಯಲ್ಲಿರುವ ಸಹೋದ್ಯೋಗಿಗಳಿಗೆ ತೊಂದರೆ ನೀಡಿದರೆ 1 ಲಕ್ಷ ರೂ ದಂಡ!

12:21 PM Jan 12, 2023 | Team Udayavani |

ಮುಂಬೈ: ಕೆಲಸದ ಒತ್ತಡದಲ್ಲಿರುವ ಉದ್ಯೋಗಿಗಳು ತಮ್ಮ ಒತ್ತಡ ಕಳೆಯಲು ಸುತ್ತಾಡಲು ಸಾಗುತ್ತಾರೆ. ಬೀಚ್ ನಲ್ಲೂ, ಪರ್ವತಗಳಲ್ಲೋ ಸಂತೋಷದಿಂದ ಇರುವಾಗ ಕೆಲಸದ ಕುರಿತಾಗಿ ಕಂಪೆನಿಯಿಂದ ಆಗಾಗ ಕರೆ ಬರುತ್ತಿದ್ದರೆ ಹೇಗಾಗಬೇಡ? ಒತ್ತಡ ಕಳೆಯಲು ಬಂದಲ್ಲಿ ಮತ್ತೆ ಒತ್ತಡ ಅನುಭವಿಸುತ್ತೀರಿ. ಅದಕ್ಕೆ ಮುಂಬೈ ಮೂಲದ ಕಂಪನಿಯೊಂದು ದಾರಿ ಕಂಡು ಹಿಡಿದಿದೆ.

Advertisement

ಫ್ಯಾಂಟಸಿ ಸ್ಪೋರ್ಟ್ಸ್ ಪ್ಲಾಟ್‌ಫಾರ್ಮ್ ಅನ್ನು ನಡೆಸುತ್ತಿರುವ ಮುಂಬೈ ಮೂಲದ ಡ್ರೀಮ್ 11 ನಲ್ಲಿನ ಉದ್ಯೋಗಿಗಳು ತಮ್ಮ ರಜಾವವಧಿಯಲ್ಲಿ ಸಹೋದ್ಯೋಗಿಯನ್ನು ಸಂಪರ್ಕಿಸಿದರೆ 1 ಲಕ್ಷ ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಸಹ-ಸಂಸ್ಥಾಪಕ ಭವಿತ್ ಶೇತ್ ತಿಳಿಸಿದ್ದಾರೆ.

ಇದನ್ನೂ ಓದಿ:ಸಂಸ್ಕೃತಿ, ಆಚಾರ, ವಿಚಾರ ಬಗ್ಗೆ ಮಾತಾಡಲು ಬಿಜೆಪಿಗೆ ಯಾವ ನೈತಿಕತೆಯಿದೆ: ದಿನೇಶ್ ಗುಂಡೂರಾವ್

2008 ರಲ್ಲಿ ಸ್ಥಾಪನೆಯಾದ ಕಂಪನಿಯು ಕಾರ್ಮಿಕರಿಗೆ ವಾರ್ಷಿಕವಾಗಿ ಕನಿಷ್ಠ ಒಂದು ವಾರ ರಜೆ ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸುತ್ತದೆ.

“ವರ್ಷಕ್ಕೊಮ್ಮೆ ಒಂದು ವಾರದವರೆಗೆ ಅವರನ್ನು ವ್ಯವಸ್ಥೆಯಿಂದ ಹೊರಹಾಕಲಾಗುತ್ತದೆ” ಎಂದರು. “ಈ ವೇಳೆ ಯಾವುದೇ ಇಮೇಲ್‌ಗಳು ಮತ್ತು ಕರೆಗಳನ್ನು ಮಾಡುವುದಿಲ್ಲ. ಏಕೆಂದರೆ ಆ ಒಂದು ವಾರದ ಅಡೆತಡೆಯಿಲ್ಲದ ಸಮಯ ಕಳೆಯಬಹುದು” ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next