Advertisement

ಕ್ಷಿಪಣಿ ಪರೀಕ್ಷೆ ಯಶಸ್ವಿ

12:30 AM Mar 15, 2019 | Team Udayavani |

ಹೈದರಾಬಾದ್‌: ಕೆಲವೇ ದಿನಗಳ ಹಿಂದೆ ಪಿನಾಕ ಕ್ಷಿಪಣಿಯನ್ನು ಯಶಸ್ವಿಯಾಗಿ ಪ್ರಯೋಗಿಸಿದ್ದ, ಡಿಆರ್‌ಡಿಒ ಇದೀಗ ಇನ್ನೊಂದು ಸುಧಾರಿತ ಕ್ಷಿಪಣಿಯನ್ನು (ಎಂಪಿಎಟಿಜಿಎಂ) ಪರೀಕ್ಷಾರ್ಥ ಉಡಾವಣೆ ಮಾಡಿದೆ. ಈ ಎರಡೂ ಕ್ಷಿಪಣಿಗಳನ್ನು ಡಿಆರ್‌ಡಿಒ ನಮ್ಮ ದೇಶದಲ್ಲೇ ಅಭಿವೃದ್ಧಿಪಡಿಸಿದೆ. ರಾಜಸ್ಥಾನದ ಪೋಖ್ರಾನ್‌ನಲ್ಲಿ ಈ ಎಂಪಿಎಟಿಜಿಎಂ ಅನ್ನು ಪರೀಕ್ಷಿಸಲಾಗಿದೆ. ಟ್ಯಾಂಕ್‌ಗಳು ತುಂಬಾ ಸಮೀಪ ಆಗಮಿಸಿದಾಗ ಅವುಗಳನ್ನು ಉಡಾಯಿ ಸಲು ಈ ಕ್ಷಿಪಣಿ ಸಹಾಯ ಮಾಡುತ್ತದೆ. ಈ ಕ್ಷಿಪಣಿಯಲ್ಲಿ ಹಲವು ಸುಧಾರಿತ ಸೌಲಭ್ಯಗಳಿವೆ. ಇಮೇಜ್‌ ಇನ್‌ಫ್ರಾರೆಡ್‌ ರಾಡಾರ್‌ ಇದರಲ್ಲಿದೆ. ಈ ಇನ್‌ಫ್ರಾರೆಡ್‌ ಅನ್ನು ಹೈದರಾಬಾದ್‌ ಮೂಲದ ರಿಸರ್ಚ್‌ ಸೆಂಟರ್‌ ಇಮಾರತ್‌ನಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಇದನ್ನು ಡಿಆರ್‌ಡಿಒ ಬಳಸಿಕೊಂಡಿದೆ. ಎರಡೂ ಪರೀಕ್ಷೆಗಳು ಅತ್ಯಂತ ಯಶಸ್ವಿಯಾಗಿದ್ದು, ನಿರೀಕ್ಷಿತ ಗುರಿಯನ್ನು ಖಚಿತವಾಗಿ ತಲುಪಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next