Advertisement

ದ್ರೌಪದಿ ಮುರ್ಮು ಗೆಲುವು ಖಚಿತ

11:50 PM Jun 23, 2022 | Team Udayavani |

ಹೊಸದಿಲ್ಲಿ: ಮುಂದಿನ ತಿಂಗಳ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಆಂಧ್ರಪ್ರದೇಶದ ವೈಎಸ್‌ಆರ್‌ ಕಾಂಗ್ರೆಸ್‌ ಪಾರ್ಟಿ, ಒಡಿಶಾದ ಬಿಜು ಜನತಾ ದಳದ ಬೆಂಬಲವೂ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ, ರಾಷ್ಟ್ರಪತಿ ಹುದ್ದೆಗೆ ಮುರ್ಮು ಅವರೇ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

Advertisement

ಒಟ್ಟು 10,86,431 ಮತಗಳ ಪೈಕಿ ಬಿಜೆಪಿ ನೇತೃತ್ವದ ಎನ್‌ಡಿಎ ಶೇ.49 ಮತಗಳನ್ನು ಅಂದರೆ 5,32,351 ಮತಗಳನ್ನು ಈಗಾಗಲೇ ಹೊಂದಿದೆ. ಬಿಜೆಡಿ 31,686 ಮತಗಳನ್ನು, ವೈಎಸ್‌ಆರ್‌ಸಿ 45,550, ಎಐಎಡಿಎಂಕೆ 14,940 ಮತಗಳನ್ನು ಹೊಂದಿದೆ. ಮುರ್ಮು ಅವರು ರಾಷ್ಟ್ರಪತಿಯಾಗಿ ಆಯ್ಕೆಯಾ ಗಲು ಬಿಜೆಡಿ ಅಥವಾ ವೈಎಸ್‌ಆರ್‌ಸಿ ಬೆಂಬಲ ನೀಡಿದರೂ ಸಾಕಾಗುತ್ತದೆ. ಎನ್‌ಡಿಎ ಅಭ್ಯರ್ಥಿಗೆ ಝಾರ್ಖಂಡ್‌ ಮುಕ್ತಿ ಮೋರ್ಚಾದ ಬೆಂಬಲವೂ ಸಿಗುವ ಸಾಧ್ಯತೆ ಅಧಿಕವಾಗಿದೆ. ಇದಲ್ಲದೆ, ಶಿರೋಮಣಿ ಅಕಾಲಿ ದಳ, ಟಿಡಿಪಿ, ಬಿಎಸ್‌ಪಿ ಕೂಡ ಮುರ್ಮು ಪರ ಒಲವು ತೋರಿದೆ ಎಂದು ಹೇಳಲಾಗುತ್ತಿದೆ.

ಪ್ರಧಾನಿ ಭೇಟಿ: ಈ ನಡುವೆ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಗುರುವಾರ ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಈ ಬಗ್ಗೆ ಪ್ರಧಾನಿ ಟ್ವೀಟ್‌ ಮಾಡಿ “ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿದ್ದೆ. ಅವರ ಉಮೇದು ವಾರಿಕೆಯನ್ನು ದೇಶದ ಎಲ್ಲ ವರ್ಗದ ಜನರು ಬೆಂಬಲಿಸಿದ್ದಾರೆ. ತಳಮಟ್ಟದಲ್ಲಿ ಜನರು ಹೊಂದಿರುವ ಸಮಸ್ಯೆಗಳ ಬಗ್ಗೆ ಅವರ ಅನುಭವ ಅಪಾರವಾದದ್ದು. ಅದು ದೇಶದ ಅಭಿವೃದ್ಧಿಗೆ ನೆರವಾಗಲಿದೆ’ ಎಂದು ಬರೆದುಕೊಂಡಿದ್ದಾರೆ.

ಇಂದು ಎನ್‌ಡಿಎ ಅಭ್ಯರ್ಥಿ ನಾಮಪತ್ರ :

ಎನ್‌ಡಿಎ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಅವರು ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದಾರೆ. ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಮೊದಲ ಸೂಚಕರಾಗಿ ಸಹಿ ಮಾಡಲಿದ್ದಾರೆ. ಕೇಂದ್ರದ ಹಲವು ಸಚಿವರು, ಬಿಜೆಪಿಯ ಮುಖಂಡರು ಸೂಚಕರಾಗಿ ಸಹಿ ಮಾಡಲಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಕೂಡ ಸೂಚಕರಲ್ಲಿ ಒಬ್ಬರಾಗಿದ್ದು, ನಾಮಪತ್ರದಲ್ಲಿ ಸಹಿ ಮಾಡಲಿದ್ದಾರೆ. ಹೀಗಾಗಿ ಅವರು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next