ಬೀಳಗಿ: ನಾಟಕಗಳ ಉದ್ಧೇಶ ಕೇವಲ ಮನರಂಜನೆಯಲ್ಲ. ಮನೋವಿಕಾಸವಾಗಿದೆ. ನಾಟಕವೆಂದರೆ ನಮ್ಮ ಮನಸ್ಸಿನ ಕೊಳೆಯನ್ನು ತೆಗೆದು ಸ್ವಾಸ್ಥ ್ಯ ಸಮಾಜದತ್ತ ಕೊಂಡೊಯ್ಯುವ ಮಾಧ್ಯಮವಾಗಿದೆ ಎಂದು ಬಕ್ಕೇಶ್ವರ ಮಠದ ಅರ್ಚಕ ಮಲ್ಲಯ್ಯ ಹಿರೇಮಠ ಹೇಳಿದರು.
ಡಿ.ಎಂ. ಸಾಹುಕಾರ ಮಾತನಾಡಿ, ಜಾತ್ರೆ- ಉತ್ಸವಗಳನ್ನು ಗ್ರಾಮಸ್ಥರೆಲ್ಲರೂ ಕೂಡಿಕೊಂಡು ಆಚರಿಸುವ ಮೂಲಕ ಭಕ್ತ-ಭಾವದಿಂದ ಸಂಭ್ರಮಿಸುತ್ತಾರೆ. ಎಲ್ಲರನ್ನೂ ಹಾಗೂ ಎಲ್ಲ ಮನಸ್ಸುಗಳನ್ನು ಒಟ್ಟುಗೂಡಿಸುವ ಶಕ್ತಿ ಉತ್ಸವಗಳಿಗಿದೆ. ಕ್ರೀಡೆ, ನಾಟಕ, ಸಂಗೀತ ಕಾರ್ಯಕ್ರಮ ಏರ್ಪಡಿಸುವುದರಿಂದ ಜಾತ್ರೆ, ಉತ್ಸವಗಳ ಮೆರಗು ಹೆಚ್ಚುತ್ತದೆ ಎಂದರು.
ಹನುಮಂತ ಕಂಬಳಿ ಮಾತನಾಡಿದರು. ಮಾರುತೇಶ್ವರ ದೇವಾಲಯ ಅರ್ಚಕ ಯಮನಪ್ಪ ತಳವಾರ ಹಾಗೂ ಲಕ್ಷ್ಮೀದೇವಿ ಕೃಪಾ ಪೋಷಿತ ಮಹರ್ಷಿ ವಾಲ್ಮೀಕಿ ನಾಟ್ಯ ಸಂಘದ ಅಧ್ಯಕ್ಷ ವಿಠuಲ ಭೂಷಣ್ಣವರ ಅವರನ್ನು ಸನ್ಮಾನಿಸಲಾಯಿತು.
ಯಮನಪ್ಪ ಮಲ್ಲಾರ, ಕಲ್ಲಪ್ಪ ಆಲಗುಂಡಿ, ಹನುಮಂತ ಆಗೋಜಿ, ಮಲ್ಲು ಪಾಟೀಲ, ಪರಶು ಮಾದನ್ನವರ, ಮಲ್ಲು ದಲಾರಿ, ಗಡ್ಡೆಪ್ಪ ಬಿಸನಾಳ, ಸಂಗಪ್ಪ ಮಮದಾಪುರ, ಬಾಬು ಪಾಟೀಲ, ಮಡ್ಡೆಪ್ಪ ಸಿಡ್ಲನ್ನವರ, ವಿಷ್ಣು ಕಂಬಾರ, ಶಿವಲಿಂಗಪ್ಪ ಹಿರೇಮನಿ, ಸಿದ್ದಪ್ಪ ಚಂಡಕಿ, ಲಕ್ಷ್ಮಣ ನಡಗೇರಿ, ಪಿ.ಎಫ್.ಮಲ್ಲಾರ, ಯಲ್ಲಪ್ಪ ಸಿಡ್ಲನ್ನವರ, ಹನುಮಂತ ನಡಗೇರಿ ಇತರರು ಇದ್ದರು.
Advertisement
ತಾಲೂಕಿನ ಅರಕೇರಿ ಗ್ರಾಮದಲ್ಲಿ ಮಾರುತೇಶ್ವರ ಓಕುಳಿ ನಿಮಿತ್ತ ನಡೆದ ಕಿವುಡ ಮಾಡಿದ ಕಿತಾಪತಿ ಹಾಸ್ಯಮಯ ಸಾಮಾಜಿಕ ನಾಟಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾಟಕಗಳು ಕೇವಲ ಮನರಂಜನೆಗೆ ಮಾತ್ರ ಸೀಮಿತವಲ್ಲ. ಉತ್ತಮ ಸಮಾಜ ನಿರ್ಮಾಣದಲ್ಲೂ ನಾಟಕ ಕಲೆ ಪ್ರಮುಖವಾಗಿದೆ. ನಾಟಕದಲ್ಲಿನ ಒಳ್ಳೆಯ ಸಂದೇಶವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕೆಟ್ಟದ್ದನ್ನು ತಿರಸ್ಕರಿಸಿ ಧರ್ಮದ ತಳಹದಿಯ ಮೇಲೆ ಬದುಕು ಸಾಗಿಸಬೇಕು ಎಂದರು.
Related Articles
Advertisement
ಪರಶು ಮಲ್ಲಾರ ಸ್ವಾಗತಿಸಿದರು. ಗೋಪಾಲ ತುಳಸಿಗೇರಿ ನಿರೂಪಿಸಿದರು. ಶಿವು ಭೂಷಣ್ಣವರ ವಂದಿಸಿದರು.