Advertisement
ನಗರದ ಹೃದಯ ಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮಳೆ ನೀರಿನ ಚರಂಡಿ, ರಾ.ಹೆ. 169 (ಎ) ಬನ್ನಂಜೆ- ಉಡುಪಿ ಮಾರ್ಗ, ಜೋಡುಕಟ್ಟೆಯ ಮೆಡಿಕಲ್ ಸೆಂಟರ್ ಎದುರಿನ ಬೃಹತ್ ಗಾತ್ರದ ನೀರಿನ ಒಳಚರಂಡಿ ಹಾದು ಹೋಗುವ ಮಾರ್ಗದಲ್ಲಿ ಸಂಚರಿಸುವ ಪಾದಚಾರಿಗಳಿಗೆ ಅನುಕೂಲವಾಗುವಂತೆ ಚರಂಡಿಗೆ ಆಳವಡಿಸಲಾದ ಕಾಂಕ್ರೀಟ್ ಓವರ್ ಸ್ಲ್ಯಾಬ್ ಗಳು ಕೆಲವೆಡೆ ತುಂಡಾಗಿದ್ದು, ಕೆಲವೆಡೆ ಬಾಯ್ದೆರೆದುಕೊಂಡಿವೆ.
ಅಪಾಯಕಾರಿ ತಿರುವು
ಉಡುಪಿ-ಕಿದಿಯೂರು ಹೊಟೇಲ್ ಮಾರ್ಗವಾಗಿ ಕುಂದಾಪುರಕ್ಕೆ ತಿರುವು ಪಡೆಯುವ ಶಿರಿಬೀಡು-ಬನ್ನಂಜೆ ರಸ್ತೆ ಕ್ರಾಸ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಒಳಚರಂಡಿಕಾಂಕ್ರೀಟ್ ಓವರ್ ಸ್ಲ್ಯಾಬ್ ಬಾಯ್ದೆರೆದುಕೊಂಡಿದೆ. ಉಡುಪಿ ನಗರದಲ್ಲಿಯೇ ಸುಮಾರು 25ರಿಂದ 30 ಒವರ್ ಸ್ಲ್ಯಾಬ್ ಗಳು ತುಂಡಾಗಿದೆ. ನಗರಸಭೆಯ 35 ವಾರ್ಡ್‌ನಲ್ಲಿ ಕನಿಷ್ಠವೆಂದರೂ 10 ಕಾಂಕ್ರೀಟ್ ಒವರ್ ಸ್ಲ್ಯಾಬ್ ಮುರಿದು ಹೋಗಿದೆ.
ಅಳವಡಿಕೆ
ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಒಡೆದುಹೋದ ಕಾಂಕ್ರೀಟ್ ಓವರ್ ಸ್ಲ್ಯಾಬ್ಆಳವಡಿಕೆಗೆ ಅಂದಾಜುಪಟ್ಟಿ ತಯಾರಿಸಲಾಗುತ್ತಿದೆ. ಸುಮಾರು 500 ಓವರ್ ಸ್ಲ್ಯಾಬ್ ಗಳಿಗೆ ಟೆಂಡರ್ ನಡೆಯಲಿದೆ. ನಗರದಲ್ಲಿ ಹೆಚ್ಚಿನ ಕಡೆ ಸ್ಲ್ಯಾಬ್ ಗಳು ಒಡೆದು ಹೋಗಿರುವುದು ಗಮನಕ್ಕೆ ಬಂದಿದೆ. ಮಳೆಗಾಲದಲ್ಲಿ ಟೆಂಡರ್ ಕರೆದು ಆಗಸ್ಟ್‌ನಲ್ಲಿ ಸ್ಲ್ಯಾಬ್ ಅಳವಡಿಕೆ ಕೆಲಸ ಮಾಡಲಾಗುತ್ತದೆ.
-ಮೋಹನ್ ರಾಜ್,
ಎಇಇ ನಗರಸಭೆ, ಉಡುಪಿ ಉಡುಪಿ ಜೋಡುಕಟ್ಟೆಯ ಮೆಡಿಕಲ್ ಸೆಂಟರ್ ಎದುರಿಗೆ ಮಳೆ ಚರಂಡಿಗೆ ಆಳವಡಿಸಲಾದ ಕಾಂಕ್ರೀಟ್ ಸ್ಲ್ಯಾಬ್ ಮುರಿದು ಬಿದ್ದು 2 -3 ತಿಂಗಳು ಕಳೆದು ಹೋಗಿದೆ. ಮಕ್ಕಳು, ವಯೋವೃದ್ಧರು, ಬೀಳುವ ಅಪಾಯವಿದೆ.
-ಸುಬ್ರಹ್ಮಣ್ಯ ಉಡುಪ,ಸ್ಥಳೀಯರು
Related Articles
Advertisement