Advertisement

ದುರ್ನಾತದಲ್ಲೇ ಶಾಲಾ ಮಕ್ಕಳು ನಿತ್ಯ ಪಾಠ ಕೇಳಬೇಕಾ?

10:35 AM Jan 12, 2022 | Team Udayavani |

ಕುದೂರು: ಶಾಲಾ ಅವರಣದೊಳಗೆ ಚರಂಡಿ ನೀರಿನಿಂದ ಹೊರ ಸೊಸುವ ದುರ್ವಾಸನೆ, ಪ್ರಯಾಸ ಪಟ್ಟು ಶಾಲೆಯಲ್ಲಿ ಕೂರೂವ ಮಕ್ಕಳು. ಇದು ಕುದೂರಿನ ಕರ್ನಾಟಕ ಪಬ್ಲಿಕ್‌ ಶಾಲೆಯ ಪರಿಸ್ಥಿತಿ.

Advertisement

ಕುದೂರಿನ ಸರ್ಕಾರಿ ಪಬ್ಲಿಕ್‌ ಶಾಲಾ ಪಕ್ಕದಲ್ಲಿ ಚರಂಡಿ ನೀರು ಮುಂದೆ ಹರಿಯದೆ ಚರಂಡಿಯಲ್ಲಿ ಕಡ್ಡಿ , ಕಸ, ಹುಲ್ಲು ಬೆಳೆದು ನಿಂತಿರುವುದರಿಂದ ಚರಂಡಿ ನೀರು ಮಡುಗಟ್ಟಿ ಸೊಳ್ಳೆಗಳ ತಾಣವಾಗಿಗಬ್ಬೆದ್ದು ನಾರುತ್ತಿದೆ. ಇದರಿಂದ ವಿದ್ಯಾರ್ಥಿಗಳು ನರಕಯಾತನೆ ಅನುಭವಿಸುವಂತಾಗಿದೆ. ಆದರೂಜನಪ್ರತಿನಿಧಿಗಳು, ಅಧಿಕಾರಿಗಳು ತಮಗೇನೂಸಂಬಂಧವಿಲ್ಲ ಎಂಬಂತೆ ಕಣ್ಣುಮುಚ್ಚಿ ಕುಳಿತುಕೊಂಡಿರುವುದು ವಿಪರ್ಯಾಸ.

ಶಾಲೆ ಬದಿಯಲ್ಲೇ ಚರಂಡಿ: 3ನೇ ವಾರ್ಡ್‌ ಚರಂಡಿ ನೀರು ಸರ್ಕರಿ ಹೈಸ್ಕೂಲ್‌ ಶಾಲೆಯ ಪಕ್ಕದಲ್ಲೇನಿರಂತರವಾಗಿ ಹರಿಯುತ್ತದೆ. ಈ ನೀರು ಮುಂದೆ ಹೋಗಲು ಜಾಗವಿಲ್ಲದೆ ನಿಂತಲ್ಲೆ ನಿಂತು, ದುರ್ವಾಸನೆ ಬೀರಿ ಸೊಳ್ಳೆಗಳ ತಾಣವಾಗಿದೆ. ಈ ಶಾಲೆಯಲ್ಲಿಕೋವಿಡ್‌ ಪ್ರಕರಣ ವರದಿಯಾಗಿದೆ.

800 ವಿದ್ಯಾರ್ಥಿಗಳಿರುವ ಶಾಲೆ: ಈ ಶಾಲೆಯಲ್ಲಿ ಸುಮಾರು 800 ವಿದ್ಯಾರ್ಥಿಗಳು ಇದ್ದಾರೆ. ಶಾಲೆಯ ಅವರಣದಲ್ಲಿ ಕುಲುಷಿತ ವಾತಾವರಣ ಇರುವುದರಿಂದ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕಿದ್ದಾರೆ. ಈ ಸಂಬಂಧ ಹಲವಾರು ಬಾರಿ ಗ್ರಾಪಂಗೆ,ಜನ ಸಂಪರ್ಕ ಸಭೆಯಲ್ಲಿ ಶಾಸಕರಿಗೆ, ತಹಶೀಲ್ದಾರ್‌ ಅವರಿಗೂ ತಿಳಿಸಿದರೂ ಯಾವುದೇ ಪ್ರಯೋ ಜನವಾಗಿಲ್ಲ ಎಂದು ಶಿಕ್ಷಕರು ಮತ್ತು ಪೋಷಕರು ಹೇಳುತ್ತಾರೆ.

ಗಬ್ಬು ವಾಸನೆ: ಶಾಲೆಯ ಪಕ್ಕದಲ್ಲಿ ಇರುವ ಚರಂಡಿ ನೀರು ನಿಂತು ಗಬ್ಬು ವಾಸನೆ ಎದಿದ್ದೆ. ಕೊಳಚೆ ನೀರು ಸರಾಗವಾಗಿಹರಿಯದೇ ಚರಂಡಿಯಲ್ಲಿ ನಿಂತು ರೋಗಕ್ಕೆ ಕಾರಣವಾಗಿದೆ. ಅಸುಪಾಸಿನಲ್ಲಿ ಸಂಚರಿಸಲು ಸಾಧ್ಯವಿಲ್ಲದ ಸ್ಥಿತಿ ಇದೆ. ಇನ್ನು ವಿದ್ಯಾರ್ಥಿಗಳು ಪಾಠ ಕೇಳುವ, ಶಿಕ್ಷಕವರ್ಗದವರು ಪಾಠ ಮಾಡುವ ಸ್ಥಿತಿ ಹೇಗೆ ?ಮಧ್ಯಾಹ್ನದ ಅಡುಗೆ ಸಿದ್ಧತೆ, ಸೇವನೆ ಹೇಗೆ? ಗಬ್ಬುವಾಸನೆಯಲ್ಲಿ ಪಾಠ ಕೇಳುವ ಸಂಕಟ ಈ ಶಾಲೆಯ ಮಕ್ಕಳದಾಗಿದೆ.

Advertisement

ಸಾಂಕ್ರಾಮಿಕ ರೋಗದ ಮೂಲ: ಕೊಳಚೆ ನೀರು ಶಾಲೆಯ ಬಳಿ ನಿಂತಿರುವುದರಿಂದ ಸಾಂಕ್ರಾಮಿಕರೋಗಗಳ ಭೀತಿ ಹೆಚ್ಚಾಗುತ್ತಿದೆ. ಹೀಗಾಗಿ ಶಾಲೆಗೆ ಮಕ್ಕಳನ್ನು ಕಳುಹಿಸಲು ಭಯವಾಗುತ್ತಿದೆ. ಎಂದು ಎಸ್‌ಡಿಎಂಸಿ ಸದಸ್ಯರು, ಪಾಲಕರು ಹೇಳಿದರು. ಮಳೆ ಬಂದರೇ ಚರಂಡಿಮಯ: ಪಟ್ಟಣದ ಹೃದಯ ಭಾಗದಲ್ಲಿ ಸರ್ಕಾರಿ ಹೈಸ್ಕೂಲ್‌ ಇರುವುದರಿಂದ ಮಳೆ ಬಂದರೆ ಚರಂಡಿಮಿಶ್ರಿತ ನೀರು ಮೈದಾನದಲ್ಲೆಡೆ ಜಲಾವೃತ್ತವಾಗುತ್ತದೆ. ಮಕ್ಕಳಿಗೆ ಕ್ರೀಡಾ ಚಟುವಟಿಕೆಗೂ ತೊಂದರೆಯಾಗಿದೆ. ಅಲ್ಲದೇಸಾಂಕ್ರಾಮಿಕ ರೋಗ ಹರಡುವ ಭೀತಿಯಿದೆ. ಡೆಂಗ್ಯೊ, ಮಲೇರಿಯಾ ವಿವಿಧ ರೋಗಗಳ ಮೂಲತಾಣವಾಗಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ಗಮನಹರಿಸಬೇಕಿದೆ.

ಕೊಳಚೆ ನೀರು ನಿಂತ ಪರಿಣಾಮ ರೋಗ ಹರಡುವ ಅಪಾಯ ಎದುರಾಗಿದೆ. ಶಾಲಾ ಮಕ್ಕಳು ಚರಂಡಿ ಗಬ್ಬು ವಾಸನೆಯಿಂದ ತೊಂದರೆಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳು ದುರ್ವಾಸನೆಯಲ್ಲೇ ಪಾಠ ಕೇಳಬೇಕಾದ ಸ್ಥಿತಿಯೂ ಬಂದಿದೆ. ಇಲ್ಲಿನ ಸಮಸ್ಯೆ ಕುರಿತು ಗ್ರಾಪಂಗೆ ಹಲವರು ಸಲ ದೂರು ಕೊಟ್ಟಿದ್ದೇವೆ. ಸಂಬಂಧಪಟ್ಟವರು ಕೂಡಲೇ ಸಮಸ್ಯೆ ಬಗೆ ಹರಿಸಬೇಕೆಂದು. ವೆಂಕಟೇಶ್‌ ಮೂರ್ತಿ, ಶಾಲಾ ಶಿಕ್ಷಕ

ರಾಜ್ಯದೆಲ್ಲೆಡೆ ಕೊರೊನಾ ಸೋಂಕು ಹೆಚ್ಚುತ್ತಿದೆ. ಶಾಲಾ ಅವರಣದಲ್ಲಿ ಚರಂಡಿ ನೀರು ನಿಂತು ಗಬ್ಬುನಾತಬೀರುತ್ತಿದೆ. ಸೊಳ್ಳೆಗಳ ಸ್ವರ್ಗ ತಾಣವಾಗಿದೆ. ಶಾಲೆಯಲ್ಲಿ ಕೊರೊನಾ ಕೇಸ್‌ವರದಿಯಾಗಿದೆ. ಇತ್ತ ಜನ ಪ್ರತಿನಿಧಿಗಳುಬೇಜವಾಬ್ದಾರಿ ತೋರಿದ್ದಾರೆ. ಮಕ್ಕಳಿಗೆಏನಾದರೂ ತೊಂದರೆಯಾದರೆ ಜನಪ್ರತಿನಿಧಿಗಳು ಮತ್ತು ಗ್ರಾಪಂಅಧ್ಯಕ್ಷರು, ಸದಸ್ಯರೆ ನೇರ ಹೊಣೆ. ಪದ್ಮನಾಭ್‌, ನಾಗರಿಕ ಕುದೂರು

Advertisement

Udayavani is now on Telegram. Click here to join our channel and stay updated with the latest news.

Next